ಮೆಹ್ವಿಶ್ ಹಯಾತ್ ಪಾಕಿಸ್ತಾನಿ ಚಲನಚಿತ್ರ ಮತ್ತು ಕಿರುತೆರೆ ನಟಿಯಾಗಿದ್ದು, ನಟ ಇನ್ ಲಾ, ಪಂಜಾಬ್ ನಹಿ ಜೌಂಗಿ, ಲೋಡ್ ವೆಡ್ಡಿಂಗ್ ಮತ್ತು ಛಲವ ಮುಂತಾದ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ.
ಪಾಕಿಸ್ತಾನ ತನ್ನ ಸ್ವಾತಂತ್ರ್ಯ ದಿನವನ್ನು ಆಗಸ್ಟ್ 14 ರಂದು ಆಚರಿಸಿತು ಮತ್ತು ವಿಶೇಷ ದಿನದಂದು ಪಾಕ್ ನಟಿ ಮೆಹ್ವಿಶ್ ಹಯಾತ್ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಚೋದನಕಾರಿ ಪೋಸ್ಟ್ ಒಂದನ್ನ ಮಾಡಿದ್ದಾರೆ. ಕೇವಲ ರಾಷ್ಟ್ರಧ್ವಜವನ್ನು ಹಾರಿಸುವುದು ಸಾಕಾಗುವುದಿಲ್ಲ ಮತ್ತು ನಾಗರಿಕರು ತಮ್ಮ ಕನಸುಗಳನ್ನ ಪಾಕಿಸ್ತಾನವನ್ನು ವಾಸ್ತವಕ್ಕೆ ಅನುವಾದಿಸಲು ಬಯಸಿದರೆ, ಅವರು 'ಪೂರ್ವಜರ ಆದರ್ಶಗಳನ್ನು ಸಾಕಾರಗೊಳಿಸಬೇಕು' ಎಂದು ಮೆಹ್ವಿಶ್ ಹೇಳಿದರು. ಮೆಹ್ವಿಶ್ ಚಿಂತನಶೀಲ ಸಂದೇಶವನ್ನು ಪೋಸ್ಟ್ ಮಾಡಿದ ನಂತರ ನೆಟ್ಟಿಗರು ಆಕೆಯ ಬ್ರಾ ಬಣ್ಣದ ಬಗ್ಗೆ ಚರ್ಚೆ ಆರಂಭಿಸಿದರು. ಈ ಚರ್ಚೆಯು ಮೆಹ್ವಿಶ್ ರನ್ನು ಕೆರಳಿಸಿತು ಮತ್ತು ಆಕೆ ಟ್ರೋಲ್ ಗಳನ್ನು ಟೀಕಿಸಿದ್ದಾರೆ. ಮೆಹ್ವಿಶ್ ಹಯಾತ್ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..
ವರದಿಗಳ ಪ್ರಕಾರ, ಮೆಹ್ವಿಶ್ ಹಯಾತ್ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಮತ್ತು ಡಾನ್ ದಾವೂದ್ ಇಬ್ರಾಹಿಂನ ಗೆಳತಿ. ಕೆಲವು ವರದಿಗಳು ದಾವೂದ್ ಇಬ್ರಾಹಿಂ ಜೊತೆಗಿನ ನಿಕಟತೆಯಿಂದಾಗಿ ಮಾತ್ರ ಮೆಹ್ವಿಶ್ ಅವರಿಗೆ ತಮ್ಘಾ-ಇ-ಇಮ್ತಿಯಾಜ್ ನೀಡಲಾಯಿತು ಎಂದು ಹೇಳಲಾಗುತ್ತಿದೆ.
ನೆಗೆಟಿವ್ ಪ್ರತಿಕ್ರಿಯೆಗಳಿಂದ ಮೆಹ್ವಿಶ್ ಗಲಿಬಿಲಿಯಾಗದೆ ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿ ಯಲ್ಲಿ ಟ್ರೋಲ್‌ಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸ್ವಾತಂತ್ರ್ಯ ದಿನದಂದು ಅಂದ್ರೆ ಆಗಸ್ಟ್ 14 ರಂದು ತನ್ನ ಇಸ್ಟಾಗ್ರಾಮ್ ನಲ್ಲಿ ದೇಶದ ಜನತೆಗೆ ಶುಭಾಶಯಗಳನ್ನು ಕೋರಲು ಮೆಹ್ವಿಶ್ ಹಯಾತ್, ಟ್ರಾನ್ಸ್ಪರೆಂಟ್ ಬಿಳಿ ಕುರ್ತಾ ಧರಿಸಿ ಕೈಯಲ್ಲಿ ತನ್ನ ರಾಷ್ಟ್ರಧ್ವಜವನ್ನು ಹಿಡಿರುವ ಫೋಟೋ ಶೇರ್ ಮಾಡಿ, "ಕ್ವೈಡ್ ಹೇಳಿದರು," ನಮ್ಮ ಹಣೆಬರಹದ ಮೇಲೆ ಒಗ್ಗಟ್ಟಿನ ಪ್ರಯತ್ನ ಮತ್ತು ನಂಬಿಕೆಯಿಂದ ಮಾತ್ರ ನಾವು ನಮ್ಮ ಕನಸುಗಳ ಪಾಕಿಸ್ತಾನವನ್ನು ವಾಸ್ತವಕ್ಕೆ ಅನುವಾದಿಸಲು ಸಾಧ್ಯವಾಗುತ್ತದೆ. " ಧ್ವಜವನ್ನು ಹಾರಿಸುವುದು ಸಾಕಾಗುವುದಿಲ್ಲ, ನಾವು ಈ ದೇಶವನ್ನು ನಿಜವಾಗಿಯೂ ಗೌರವಿಸಿದರೆ, ನಾವು ನಮ್ಮ ಪೂರ್ವಜರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಪಾಕಿಸ್ತಾನ್ ಜಿಂದಾಬಾದ್ #MehwishHayat #ProudPakistani." ಎಂದು ಬರೆದು ಕೊಂಡಿದ್ದಾರೆ. ಆದ್ರೆ ಇದಕ್ಕೆ ನೆಟ್ಟಿಗರು ಆಕೆಯ ಬ್ರಾ ಬಣ್ಣದ್ದಾಗಿರುವುದನ್ನು ಗಮನಿಸಬಹುದು ಮತ್ತು ಪೋಸ್ಟ್‌ನ ಕಾಮೆಂಟ್ ವಿಭಾಗದಲ್ಲಿ ಅಸಹ್ಯಕರ ಕಾಮೆಂಟ್ ಮಾಡಿದ್ದಾರೆ.
ಮೆಹ್ವಿಶ್ ಹಯಾತ್ ಜನವರಿ 6, 1988 ರಂದು ಕರಾಚಿಯಲ್ಲಿ ಜನಿಸಿದರು. ಆಕೆಗೆ 2019 ರಲ್ಲಿ ತಮ್ಘಾ-ಇ-ಇಮ್ತಿಯಾಜ್ ನೀಡಲಾಯಿತು.
ಮೆಹ್ವಿಶ್ ಹಯಾತ್ ಪಾಕಿಸ್ತಾನಿ ಚಲನಚಿತ್ರ ಮತ್ತು ಕಿರುತೆರೆ ನಟಿಯಾಗಿದ್ದು, ನಟ ಇನ್ ಲಾ, ಪಂಜಾಬ್ ನಹಿ ಜೌಂಗಿ, ಲೋಡ್ ವೆಡ್ಡಿಂಗ್ ಮತ್ತು ಛಲವ ಮುಂತಾದ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ.