ಶೀಘ್ರದಲ್ಲಿಯೇ ತುಲಾ ರಾಶಿಗೆ ಮಂಗಳನ ಪ್ರವೇಶ, 3 ರಾಶಿಗಳ ಜನರ ಮೇಲೆ ಹಣದ ಸುರಿಮಳೆಗೈಯಲು ಸ್ವತಃ ಧನಲಕ್ಷ್ಮಿಯೇ ಬರಲಿದ್ದಾಳೆ!

Mangal Gochar In Tula 2023: ಶೀಘ್ರದಲ್ಲಿಯೇ ಗ್ರಹಗಳ ಸೇನಾಪತಿ ಎಂದೇ ಖ್ಯಾತ ಮಂಗಳ ತುಲಾ ರಾಶಿಯನ್ನು ಪ್ರವೇಶಿಸಲಿದ್ದಾನೆ. ಮಂಗಳನ ಈ ತುಲಾ ಗೋಚರ ಒಟ್ಟು ಮೂರು ರಾಶಿಗಳ ಜಾತಕದವರ ಜೀವನದಲ್ಲಿ ಭಾರಿ ಧನಲಾಭವನ್ನು ತಂದುಕೊಡಲಿದೆ. ಈ ಜನರಿಗೆ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ. 
 

Mars Transit In Tula 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಗ್ರಹಗಳ ಸೇನಾಪತಿಯ ತುಲಾ ಗೋಚರ ನೆರವೇರಿಯಲಿದೆ. ಮಂಗಳನ ಈ ತುಲಾ ಗೋಚರ ಅಕ್ಟೋಬರ್ 3, 2023ರಂದು ನೆರವೇರಲಿದೆ. ಪ್ರಸ್ತುತ ಮಂಗಳ ಕನ್ಯಾ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಹಾಗೆ ನೋಡಿದರೆ ತುಲಾ ರಾಶಿಗೆ ಶುಕ್ರ ಅಧಿಪತಿಯಾಗಿದ್ದಾನೆ. ಮಂಗಳ ಹಾಗೂ ಶುಕ್ರನ ನಡುವೆ ಸಮಭಾವದ ಸಂಬಂಧವಿದೆ. ಹೀಗಾಗಿ ಮಂಗಳನ ಈ ಗೋಚಾರದಿಂದ ಮೂರು ರಾಶಿಗಳ ಜನರಿಗೆ ವಿಶೇಷ ಲಾಭಗಳು ಪ್ರಾಪ್ತಿಯಾಗಲಿವೆ. ಈ ಅವಧಿಯಲ್ಲಿ ಈ ಜನರಿಗೆ ವಿಶೇಷ ಧನ-ಸಂಪತ್ತು ಪ್ರಾಪ್ತಿಯಾಗಲಿದೆ. ಬನ್ನಿ ಆ ಅದೃಷ್ಟವಂತ ಮೂರು ರಾಶಿಗಳು ಯಾವುವು ಎಂಬುದನ್ನೂ ತಿಳಿದುಕೊಳ್ಳೋನ, 

 

ಇದನ್ನೂ ಓದಿ-ಚಿತ್ರಾ ನಕ್ಷತ್ರಕ್ಕೆ ಗ್ರಹಗಳ ಸೇನಾಪತಿ ಮಂಗಳನ ಪ್ರವೇಶ, 3 ರಾಶಿಗಳ ಜನರ ಮೇಲೆ ಧನಕುಬೇರ ಕೃಪೆಯಿಂದ ಭಾರಿ ಧನವೃಷ್ಟಿ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

Mangal Gochar In Tula 2023: ಶೀಘ್ರದಲ್ಲಿಯೇ ಗ್ರಹಗಳ ಸೇನಾಪತಿ ಎಂದೇ ಖ್ಯಾತ ಮಂಗಳ ತುಲಾ ರಾಶಿಯನ್ನು ಪ್ರವೇಶಿಸಲಿದ್ದಾನೆ. ಮಂಗಳನ ಈ ತುಲಾ ಗೋಚರ ಒಟ್ಟು ಮೂರು ರಾಶಿಗಳ ಜಾತಕದವರ ಜೀವನದಲ್ಲಿ ಭಾರಿ ಧನಲಾಭವನ್ನು ತಂದುಕೊಡಲಿದೆ. ಈ ಜನರಿಗೆ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ.   

2 /5

ಮೇಷ ರಾಶಿ: ಮಂಗಳ ನಿಮ್ಮ ರಾಶಿಗೆ ಅಧಿಪತಿಯಾಗಿದ್ದಾನೆ. ಹೀಗಾಗಿ ಮಂಗಳನ ಈ ಗೋಚರ ನಿಮಗೆ ವಿಶೇಷ ಲಾಭಗಳನ್ನು ತಂದು ಕೊಡಲಿದೆ. ಇನ್ನೊಂದೆಡೆ ಆತ ನಿಮ್ಮ ಗೋಚರ ಜಾತಕದ ಸಪ್ತಮ ಭಾವದಲ್ಲಿ ಸಂಚರಿಸಲಿದ್ದಾನೆ. ಇದರಿಂದ ಬಾಳಸಂಗಾತಿಯ ಜೊತೆಗೆ ಕಳೆದ ದೀರ್ಘಕಾಲದಿಂದ ನಡೆದುಬಂದ ವಿರಸ ದೂರಾಗಲಿದೆ. ಈ ಅವಧಿಯಲ್ಲಿ ಪಾರ್ಟ್ನರ್ಶಿಪ್ ನಲ್ಲಿ ನೀವು ಮಾಡುವ ವ್ಯವಹಾರ ನಿಮಗೆ ಸಾಕಷ್ಟು ಲಾಭವನ್ನು ತಂದುಕೊಡಲಿದೆ. ನೌಕರವರ್ಗದ ಜನರಿಗೆ ಪದೋನ್ನತಿ ಹಾಗೂ ವೇತನ ವೃದ್ಧಿಯಾಗುವ ಸಾಧ್ಯತೆ ಇದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾವನೆ ಸಿಗುವ ಸಾಧ್ಯತೆ ಇದೆ.   

3 /5

ಸಿಂಹ ರಾಶಿ: ಹಾಗೆ ನೋಡಿದರೆ ಮಂಗಳ ನಿಮ್ಮ ಗೋಚರ ಜಾತಕದ ಚತುರ್ಥ ಹಾಗೂ ನವಮ ಭಾವಕ್ಕೆ ಅಧಿಪತಿಯಾಗಿ ತೃತೀಯ ಭಾವದಲ್ಲಿ ಸಂಚರಿಸಲಿದ್ದಾನೆ. ಹೀಗಾಗಿ ಮಂಗಳನ ಈ ಗೋಚರ ನಿಮಗೆ ಸಾಕಷ್ಟು ಲಾಭವನ್ನು ತಂದು ಕೊಡಲಿದೆ. ಈ ಅವಧಿಯಲ್ಲಿ ನೀವು ವಾಹನ ಹಾಗೂ ಆಸ್ತಿಪಾಸ್ತಿ ಖರೀದಿಸುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನಿಮ್ಮ ಸಾಹಸ ಹಾಗೂ ಪರಾಕ್ರಮ ಹೆಚ್ಚಾಗಲಿದೆ. ಈ ಅವಧಿಯಲ್ಲಿ ನಿಮಗೆ ನಿಮ್ಮ ಪಿತ್ರಾರ್ಜಿತ ಆಸ್ತಿಯಿಂದ ಲಾಭ ಸಿಗುವ ಸಾಧ್ಯತೆ ಇದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಿರುವವರಿಗೆ ಈ ಸಮಯ ಸಾಕಷ್ಟು ಅನುಕೂಲಕರವಾಗಿದೆ. ನೌಕರಿಯ ಹೊಸ ಅವಕಾಶಗಳು ಪ್ರಾಪ್ತಿಯಾಗುವ ಸಾಧ್ಯತೆ ಇದೆ.   

4 /5

ಧನು ರಾಶಿ: ಮಂಗಳದೇವ ನಿಮ್ಮ ಗೋಚರ ಜಾತಕದ ಪಂಚಮ ಹಾಗೂ ದ್ವಾದಶ ಭಾವಕ್ಕೆ ಅಧಿಪತಿಯಾಗಿ ನವಮ ಭಾವದಲ್ಲಿ ಸಂಚರಿಸಲಿದ್ದಾನೆ. ಹೀಗಾಗಿ ಮಂಗಳನ ಈ ಗೋಚರ ನಿಮ್ಮ ಪಾಲಿಗೆ ಸಾಕಷ್ಟು ಲಾಭಗಳನ್ನು ತಂದುಕೊಡುವ ಸಾಧ್ಯತೆ ಇದೆ. ಮಕ್ಕಳಿಗೆ ಸಂಬಂಧಿಸಿದ ಶುಭ ಸಮಾಚಾರ ನಿಮಗೆ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನೀವು ಸಾಕಷ್ಟು ಹಣವನ್ನು ಉಳಿಸಲು ಯಶಸ್ವಿಯಾಗುವಿರಿ. ಆರ್ಥಿಕ ದೃಷ್ಟಿಯಿಂದ ಹೇಳುವುದಾದರೆ, ಈ ಅವಧಿ ಹೂಡಿಕೆಯ ದೃಷ್ಟಿಯಿಂದ ಸಾಕಷ್ಟು ಅನುಕೂಲಕರವಾಗಿದೆ. ಈ ಅವಧಿಯಲ್ಲಿ ನೀವು ಮಾಡುವ ಹೂಡಿಕೆ ನಿಮಗೆ ಭವಿಷ್ಯದಲ್ಲಿ ಉತ್ತಮ ಲಾಭವನ್ನು ತಂದುಕೊಡಲಿದೆ. ಮತ್ತೊಂದೆಡೆ ಸಂತಾನ ಸುಖಕ್ಕಾಗಿ ಹಂಬಲಿಸುತ್ತಿರುವವರಿಗೆ ಈ ಅವಧಿಯಲ್ಲಿ ಗುಡ್ ನ್ಯೂಸ್ ಸಿಗುವ ಸಾಧ್ಯತೆ ಇದೆ.   

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)