Flipkart Offer on Smartphones: ಅಗ್ಗದ ದರದಲ್ಲಿ ಡ್ಯುಯಲ್ ಸೆಲ್ಫಿ ಕ್ಯಾಮೆರಾದೊಂದಿಗೆ ಫೋನ್‌ಗಳನ್ನು ಖರೀದಿಸಲು ಉತ್ತಮ ಅವಕಾಶ

                     

Flipkart Offer on Smartphones: ಸ್ಮಾರ್ಟ್ ಫೋನ್ ಖರೀದಿದಾರರು ಅದರಲ್ಲಿ ಕಂಡುಬರುವ ವಿಶೇಷತೆಗಳಿಗೆ ಖಂಡಿತ ಗಮನ ಹರಿಸುತ್ತಾರೆ. ಗ್ರಾಹಕರು ಸ್ಮಾರ್ಟ್ ಫೋನ್ ಖರೀದಿಸುವ ಮೊದಲು ಪ್ರೊಸೆಸರ್‌ನಿಂದ ಬ್ಯಾಟರಿಯವರೆಗೆ ಫೋನ್‌ನ ಎಲ್ಲಾ ವೈಶಿಷ್ಟ್ಯಗಳನ್ನು ನೋಡುತ್ತಾರೆ. ಇಂದಿನ ಕಾಲದಲ್ಲಿ ಜನರು ಫೋಟೋಗ್ರಫಿಗಾಗಿ ಹೆಚ್ಚಾಗಿ ಫೋನ್ ಬಳಸುತ್ತಾರೆ. ಅದಕ್ಕಾಗಿಯೇ ಬಹುತೇಕ ಜನರು ಫೋನ್ ಖರೀದಿಸುವಾಗ ಕ್ಯಾಮೆರಾ ಸೆಟಪ್‌ಗೆ ಗಮನ ಕೊಡುತ್ತಾರೆ. ಈ ದಿನಗಳಲ್ಲಿ ಉತ್ತಮ ಕ್ಯಾಮೆರಾಗಳನ್ನು ಹೊಂದಿರುವ ಫೋನ್ ಗಳು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಲಭ್ಯವಿವೆ. ಹಲವು ಫೋನ್‌ಗಳಲ್ಲಿ ಡ್ಯುಯಲ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. 30000 ರೂ.ಗಿಂತ ಕಡಿಮೆ ಬೆಲೆಗೆ ಡ್ಯುಯಲ್ ಸೆಲ್ಫಿ ಕ್ಯಾಮೆರಾಗಳನ್ನು ಹೊಂದಿರುವ ಫೋನ್‌ಗಳೂ ಇವೆ. ಈ ಪಟ್ಟಿಯು OPPO Reno3 Pro, realme X3 SuperZoom, Vivo V20 Pro ಮತ್ತು Vivo V19 ಅನ್ನು ಒಳಗೊಂಡಿದೆ. ಈಗ ಅವುಗಳನ್ನು ಅಗ್ಗವಾಗಿ ಖರೀದಿಸಬಹುದು. ಈ ಲೇಖನದಲ್ಲಿ, ನಾವು ಈ ಎಲ್ಲಾ ಫೋನ್‌ಗಳ ಬೆಲೆ ಮತ್ತು ಕೊಡುಗೆಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

1 /5

Oppo Reno3 Pro ಫೋನ್ 6.4-ಇಂಚಿನ ಡಿಸ್ಪ್ಲೇ, 8GB RAM, 256GB ವರೆಗೆ ಸ್ಟೋರೇಜ್ ಮತ್ತು MediaTek Helio P95 ಪ್ರೊಸೆಸರ್ ಹೊಂದಿದೆ. ಫೋನ್ 64MP ಕ್ವಾಡ್ ರಿಯರ್ ಕ್ಯಾಮೆರಾ ಮತ್ತು 44MP + 2MP ಡ್ಯುಯಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಇದನ್ನು ಫ್ಲಿಪ್‌ಕಾರ್ಟ್‌ನಿಂದ 24,759 ರೂ.ಗಳ ಆರಂಭಿಕ ಬೆಲೆಯೊಂದಿಗೆ ಖರೀದಿಸಬಹುದು.

2 /5

Realme X3 SuperZoom ಈ Realme ಫೋನ್ 6.57 ಇಂಚಿನ ಡಿಸ್ಪ್ಲೇ, 12GB RAM, 256GB ವರೆಗೆ ಸ್ಟೋರೇಜ್ ಮತ್ತು ಕ್ವಾಲ್ಕಾಮ್ ಸ್ನಾಪ್ ಡ್ರಾಗನ್ 855+ ಪ್ರೊಸೆಸರ್ ಹೊಂದಿದೆ. ಇದು 64MP ಕ್ವಾಡ್ ರಿಯರ್ ಕ್ಯಾಮೆರಾಗಳು, 32MP + 8MP ಡ್ಯುಯಲ್ ಫ್ರಂಟ್ ಕ್ಯಾಮೆರಾಗಳು ಮತ್ತು 4200mAh ಅನ್ನು ಹೊಂದಿದೆ. ಇದರ ಆರಂಭಿಕ ಬೆಲೆ ರೂ 27,999.

3 /5

Vivo V20 Pro 5G ಈ ವಿವೋ ಫೋನ್ (Vivo Phone) 8GB RAM, 128GB ಸ್ಟೋರೇಜ್, 6.44 ಇಂಚಿನ ಡಿಸ್ಪ್ಲೇ, 64MP ಟ್ರಿಪಲ್ ರಿಯರ್ ಕ್ಯಾಮೆರಾ ಮತ್ತು 44MP + 8MP ಡ್ಯುಯಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 765 ಜಿ ಪ್ರೊಸೆಸರ್ ಮತ್ತು 4000mAh ಬ್ಯಾಟರಿಯನ್ನು ಹೊಂದಿದೆ. ಇದರ ಬೆಲೆ 29,990 ರೂ. ಇದನ್ನೂ ಓದಿ- WhatsApp Blocked: ಈ ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ ವಾಟ್ಸಾಪ್, ನಿಮ್ಮ ಫೋನ್ ಪಟ್ಟಿಯಲ್ಲಿದೆಯೇ?

4 /5

Vivo V19 ಇನ್ನೊಂದು ವಿವೋ ಫೋನ್ ವಿವೋ ವಿ 19 ಕೂಡ ಈ ಪಟ್ಟಿಯಲ್ಲಿ ಸೇರಿಸಲಾಗಿದೆ. ಫೋನ್ 8GB RAM, 256GB ವರೆಗೆ ಸ್ಟೋರೇಜ್ ಮತ್ತು 6.44 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು 48MP ಕ್ವಾಡ್ ರಿಯರ್ ಕ್ಯಾಮೆರಾ ಮತ್ತು 32MP + 8MP ಡ್ಯುಯಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. Qualcomm Snapdragon 712 AIE ಪ್ರೊಸೆಸರ್ ಮತ್ತು 4500mAh ಬ್ಯಾಟರಿಯನ್ನು ಫೋನಿನಲ್ಲಿ ನೀಡಲಾಗಿದೆ. ಇದರ ಟಾಪ್ ಮಾಡೆಲ್ ಬೆಲೆ 29,990 ರೂ. ಆಗಿದೆ. ಇದನ್ನೂ ಓದಿ- Flipkart Curtain Raiser Deals: ಐಫೋನ್ ಅನ್ನು 26,000 ರೂ.ಗೆ ಖರೀದಿಸುವ ಅವಕಾಶ, ಈ ಫೋನ್‌ಗಳ ಮೇಲೂ ಸಿಗಲಿದೆ ರಿಯಾಯಿತಿ

5 /5

ಈ ಫೋನ್‌ಗಳಲ್ಲಿ ರೂ. 15,000 ವರೆಗಿನ ವಿನಿಮಯ ಕೊಡುಗೆ ಲಭ್ಯವಿದೆ. ನೀವು ಒಪ್ಪೊ ರೆನೋ 3 ಪ್ರೊ ಅನ್ನು ₹ 859 ಕ್ಕೆ, ರಿಯಲ್‌ಮಿ ಎಕ್ಸ್ 3 ಸೂಪರ್‌ಜೂಮ್ ಅನ್ನು ₹ 971, ವಿವೋ ವಿ 20 ಪ್ರೊ ಮತ್ತು ವಿವೋ ವಿ 19 ಅನ್ನು  ₹ 1,025 ಇಎಂಐಗೆ ತರಬಹುದು. ಇದರ ಹೊರತಾಗಿ, ಫ್ಲಿಪ್‌ಕಾರ್ಟ್  (Flipkart) ಆಕ್ಸಿಸ್ ಬ್ಯಾಂಕ್ (Axis Bank) ಕ್ರೆಡಿಟ್ ಕಾರ್ಡ್‌ನಲ್ಲಿ 5 ಪ್ರತಿಶತ ಕ್ಯಾಶ್‌ಬ್ಯಾಕ್ ಆಫರ್ ಕೂಡ ಇದೆ.