Mangala Kumbh Gochar 2024: ಹದಿನೈದು ತಿಂಗಳ ಬಳಿಕ ಕುಂಭ ರಾಶಿಗ ಮಂಗಳನ ಪ್ರವೇಶ, ಈ ಜನರ ಜೀವನದಲ್ಲಿ ಗೋಲ್ಡನ್ ಟೈಮ್ ಆರಂಭ!

Mangala Gochar 2024 In Kumbh Rashi: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಹದಿನೈದು ತಿಂಗಳುಗಳ ಬಳಿಕ ಕುಂಭ ರಾಶಿಗೆ ಮಂಗಳನ ಪ್ರವೇಶ ನೆರವೇರಲಿದೆ. ಇದು ಕೆಲ ರಾಶಿಗಳ ಜಾತಕದವರಿಗೆ ಅಪಾರ ಧನಸಂಪತ್ತನ್ನು ಕರುಣಿಸಲಿದೆ. (Spirutual News In Kannada)
 

Mangala Gochar 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಫೆಬ್ರುವರಿ ತಿಂಗಳ ಆರಂಭದಲ್ಲಿ ಗ್ರಹಗಳ ಸೇನಾಪತಿ ಎಂದೇ ಕರೆಯಲಾಗುವ ಮಂಗಳನ ಕುಂಭ ರಾಶಿ ಗೋಚರ ನೆರವೇರಲಿದ್ದು. ಅಲ್ಲಿ ಶನಿಯ ಜೊತೆಗೆ ಆತನ ಮೈತ್ರಿ ಕೂಡ ನೆರವೇರಲಿದೆ. ಹೀಗಿರುವಾಗ ಮಂಗಳ ಗೋಚರದ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಕಂಡುಬರಲಿದೆ. ಅದರಲ್ಲಿಯೂ ವಿಶೇಷವಾಗಿ ಮೂರು ರಾಶಿಗಳ ಜನರಿಗೆ ಇದರಿಂದ ಆಕಸ್ಮಿಕ ಧನಲಾಭದ ಜೊತೆಗೆ ಉನ್ನತಿಯ ಯೋಗ ಕೂಡ ನಿರ್ಮಾಣಗೊಳ್ಳುತ್ತಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ. (Spiritual News In Kannada)

 

ಇದನ್ನೂ ಓದಿ-Surya Nakshatra Gochar 2024: ಚಂದಿರನ ನಕ್ಷತ್ರದಲ್ಲಿ ಸೂರ್ಯನ ಪ್ರವೇಶ, ಈ ಜನರಿಗೆ ಪ್ರಾಪ್ತಿಯಾಗಲಿದೆ ಧನಕುಬೇರ ನಿಧಿ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

Mangala Gochar 2024 In Kumbh Rashi: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಹದಿನೈದು ತಿಂಗಳುಗಳ ಬಳಿಕ ಕುಂಭ ರಾಶಿಗೆ ಮಂಗಳನ ಪ್ರವೇಶ ನೆರವೇರಲಿದೆ. ಇದು ಕೆಲ ರಾಶಿಗಳ ಜಾತಕದವರಿಗೆ ಅಪಾರ ಧನಸಂಪತ್ತನ್ನು ಕರುಣಿಸಲಿದೆ. (Spirutual News In Kannada)  

2 /5

ಮೇಷ ರಾಶಿ: ಮಂಗಳ ನಿಮ್ಮ ರಾಶಿಗೆ ಅಧಿಪತಿಯಾಗಿದ್ದು, ಆತನ ಈ ಗೋಚರ ನಿಮ್ಮ ಪಾಲಿಗೆ ವರದಾನ ಸಾಬೀತಾಗಲಿದೆ. ಈ ಬಾರಿ ಮಂಗಳ ನಿಮ್ಮ ಜಾತಕದ ಆದಾಯ ಹಾಗೂ ಲಾಭ ಸ್ಥಾನದಲ್ಲಿ ಸಂಚರಿಸಲಿದ್ದಾನೆ. ಇದರಿಂದ ನಿಮ್ಮ ಆದಾಯದಲ್ಲಿ ಜಬರ್ದಸ್ತ ಹೆಚ್ಚಳ ಸಂಭವಿಸಲಿದೆ. ನಿಮಗೆ ಬರಬೇಕಾದ ಹಣ ನಿಮ್ಮ ಕೈಸೇರಲಿದೆ. ನೌಕರ ವರ್ಗದ ಜನರಿಗೆ ಈ ಅವಧಿ ಹೊಸ ಎತ್ತರವನ್ನು ನೀಡುವ ಅವಧಿಯಾಗಿರಲಿದೆ. ಮಕ್ಕಳಿಗೆ ಸಂಬಂಧಿಸಿದಂತೆ ಶುಭ ಸಮಾಚಾರಗಳು ನಿಮಗೆ ಪ್ರಾಪ್ತಿಯಾಗಲಿವೆ. ಗಂಡು ಅಥವಾ ಹೆಣ್ಣು ಮಗು ಭಾಗ್ಯ ಪ್ರಾಪ್ತಿಯಾಗುವ ಸಾಧ್ಯತೆ ಇದೆ.   

3 /5

ವೃಷಭ ರಾಶಿ: ಮಂಗಳ ಈ ಅವಧಿಯಲ್ಲಿ ನಿಮ್ಮ ಗೋಚರ ಜಾತಕದ ಕರ್ಮ ಭಾವದಲ್ಲಿ ಸಂಚರಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ಕೆಲಸ-ಕಾರ್ಯಗಳಲ್ಲಿ ನಿಮಗೆ ಅಪಾರ ಯಶಸ್ಸು ಪ್ರಾಪ್ತಿಯಾಗಲಿದೆ. ಕಾರ್ಯಗಳಲ್ಲಿ ಶುಭ ಫಲಿತಾಂಶಗಳು ನಿಮಗೆ ಸಿಗಲಿವೆ. ಮನಸೋಇಚ್ಛೆ ಉನ್ನತಿಯನ್ನು ನೀವು ಸಾಧಿಸುವಿರಿ. ನೌಕರವರ್ಗದ ಜನರಿಗೆ ಪ್ರಮೋಷನ್ ಯೋಗ ರೂಪುಗೊಳ್ಳುತ್ತಿದೆ. ಒಂದು ವೇಳೆ ನೀವು ನಿರುದ್ಯೋಗಿಗಳಾಗಿದ್ದರೆ, ನಿಮಗೆ ನೌಕರಿಯ ಪ್ರಸ್ತಾಪ ಸಿಗುವ ಸಾಧ್ಯತೆ ಇದೆ.   

4 /5

ಕುಂಭ ರಾಶಿ: ಈ ಅವಧಿಯಲ್ಲಿ ಮಂಗಳ ನಿಮ್ಮ ಗೋಚರ ಜಾತಕದ ಲಗ್ನ ಭಾವದಲ್ಲಿ ಸಂಚರಿಸಲಿದ್ದಾನೆ. ಹೀಗಾಗಿ ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸದಲ್ಲಿ ವೃದ್ಧಿಯನ್ನು ನೀವು ಕಾಣುವಿರಿ. ವ್ಯಕ್ತಿತ್ವದಲ್ಲಿ ಹೊಸ ಹುರುಪು ಚೈತನ್ಯ ಇರಲಿದೆ. ಧನಲಾಭದ ಶುಭ ಯೋಗಗಳು ರಚನೆಯಾಗುತ್ತಿವೆ. ನಿಮಗೆ ನಿಮ್ಮ ಬಾಳಸಂಗಾತಿಯ ಬೆಂಬಲ ಸಿಗಲಿದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪ ಸಿಗುವ ಸಾಧ್ಯತೆ ಇದೆ.   

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)