Mangal Gochar 2023: ಮಂಗಳ ಧೈರ್ಯ - ಶೌರ್ಯಗಳ ಅಂಶ. ಮಂಗಳ ಗ್ರಹದ ಸಂಚಾರವು ಅನೇಕ ರಾಶಿಗಳ ಜನರ ಜೀವನದಲ್ಲಿ ಮಂಗಳಕರ ಫಲಿತಾಂಶಗಳನ್ನು ತರಲಿದೆ.
Mars Transit 2023: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹವೂ ಒಂದು ನಿರ್ದಿಷ್ಟ ಸಮಯದಲ್ಲಿ ತನ್ನ ರಾಶಿಯನ್ನು ಬದಲಾಯಿಸುತ್ತದೆ. ಮಂಗಳ ಗ್ರಹವು ಜುಲೈ 1, 2023 ರಂದು ಸ್ಥಾನ ಬದಲಿಸಿದೆ. ಭೂಮಿ, ಧೈರ್ಯ ಮತ್ತು ಬಲವನ್ನು ನೀಡುವ ಮಂಗಳನ ಪ್ರವೇಶವು ಮೂರು ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರಲಿದೆ.
ಮಂಗಳ ಸಂಕ್ರಮಣ: ಮಂಗಳ ಗ್ರಹವು ಆಗಸ್ಟ್ 17, 2023 ರವರೆಗೆ ಸಿಂಹ ರಾಶಿಯಲ್ಲಿ ಇರುತ್ತದೆ. ಈ ಕಾರಣದಿಂದಾಗಿ, ಮುಂದಿನ 36 ದಿನಗಳವರೆಗೆ ಎಲ್ಲಾ 12 ರಾಶಿಗಳ ಮೇಲೆಯೂ ಮಂಗಳ ಸಂಕ್ರಮಣದ ಶುಭ ಮತ್ತು ಅಶುಭ ಪರಿಣಾಮವನ್ನು ಬೀರುತ್ತವೆ.
ಸಿಂಹ ರಾಶಿಯಲ್ಲಿ ಮಂಗಳ: ಕೆಲವು ರಾಶಿಗಳಿಗೆ, ಮಂಗಳನ ರಾಶಿ ಬದಲಾವಣೆಯು ಮಂಗಳಕರವಾಗಿರುತ್ತದೆ. ಮಂಗಳ ಸಂಚಾರವು ಯಾವ ರಾಶಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ.
ಧನು ರಾಶಿ : ಈ ಮಂಗಳ ಸಂಕ್ರಮವು ಧನು ರಾಶಿಯವರಿಗೆ ಅನೇಕ ರೀತಿಯಲ್ಲಿ ಲಾಭವನ್ನು ತರುತ್ತದೆ. ನೀವು ಧಾರ್ಮಿಕ ಪ್ರವಾಸಕ್ಕೆ ಹೋಗಬಹುದು. ವ್ಯಾಪಾರ ಮಾಡುವವರಿಗೆ ಲಾಭವಾಗಲಿದೆ. ವಿಶೇಷವಾಗಿ ಯಾರ ವ್ಯಾಪಾರವು ದೂರದ ದೇಶಗಳಿಗೆ ಹರಡಿದೆ, ಅವರು ದೊಡ್ಡ ಲಾಭವನ್ನು ಗಳಿಸಬಹುದು. ಒಪ್ಪಂದ ಮಾಡಿಕೊಳ್ಳಬಹುದು. ಅದೃಷ್ಟ ನಿಮ್ಮೊಂದಿಗೆ ಇರುತ್ತದೆ. ಕೆಲಸ ಯಶಸ್ವಿಯಾಗಲಿದೆ.
ಮೀನ ರಾಶಿ : ಮೀನ ರಾಶಿಯವರಿಗೆ ಮಂಗಳನ ಬದಲಾವಣೆಯು ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ವೃತ್ತಿ ಜೀವನದಲ್ಲಿ ಉತ್ತಮ ಪ್ರಗತಿ ಕಂಡುಬರಲಿದೆ. ನೀವು ಬಹಳ ದಿನಗಳಿಂದ ಕಾಯುತ್ತಿದ್ದ ಆ ಸ್ಥಾನ, ಹಣ, ಪ್ರತಿಷ್ಠೆ ನಿಮಗೆ ಸಿಗಬಹುದು. ವಿರೋಧಿಗಳು ಸೋಲುತ್ತಾರೆ. ಯಾರೂ ನಿಮಗೆ ಹಾನಿ ಮಾಡಲಾರರು. ವಿದೇಶ ಪ್ರವಾಸಕ್ಕೆ ಹೋಗಬಹುದು. ನೀವು ಸಂತೋಷ ಮತ್ತು ಅದೃಷ್ಟವನ್ನು ಪಡೆಯುತ್ತೀರಿ.
ಮಿಥುನ ರಾಶಿ : ಮಂಗಳ ಸಂಚಾರವು ಮಿಥುನ ರಾಶಿಯವರಿಗೆ ಬಹಳಷ್ಟು ಲಾಭಗಳನ್ನು ನೀಡುತ್ತದೆ. ಈ ಜನರ ಧೈರ್ಯ ಮತ್ತು ಶೌರ್ಯವು ಹೆಚ್ಚಾಗುತ್ತದೆ. ಇದರಿಂದಾಗಿ ಅವರು ಒಂದರ ನಂತರ ಒಂದು ಕೆಲಸವನ್ನು ಪೂರ್ಣಗೊಳಿಸುತ್ತಾರೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ರಿಯಲ್ ಎಸ್ಟೇಟ್ ಮತ್ತು ಆಸ್ತಿ ಕೆಲಸದಲ್ಲಿ ಸಂಬಂಧ ಹೊಂದಿರುವವರು ವಿಶೇಷ ಲಾಭವನ್ನು ಪಡೆಯುತ್ತಾರೆ. ಉದ್ಯೋಗ ಮಾಡುವವರು ಪ್ರಗತಿ ಹೊಂದುತ್ತಾರೆ. ವಿರೋಧಿಗಳು ಸೋಲುತ್ತಾರೆ.