ನಟನೆಯ ಹೊರತಾಡಿ ಮಂದಿರ ಬೇಡಿ (Mandira Bedi) ಫ್ಯಾಷನ್ ಡಿಸೈನರ್, ಮಾಡೆಲ್ ಮತ್ತು ಟಿವಿ ಪ್ರೆಸೆಂಟರ್ ಕೂಡ ಹೌದು.
ನವದೆಹಲಿ: ಫಿಟ್ನೆಸ್ ಮತ್ತು ಬೋಲ್ಡ್ ಲುಕ್ ನಿಂದಾಗಿ ಮುಖ್ಯಾಂಶಗಳಲ್ಲಿರುವ ಮಂದಿರಾ ಬೇಡಿ ನಿನ್ನೆಯಷ್ಟೇ ತಮ್ಮ ಜನ್ಮ ದಿನವನ್ನು ಆಚರಿಸಿಕೊಂಡಿದ್ದಾರೆ. ಮಂದಿರ ಬೇಡಿ ಸಾಮಾನ್ಯವಾಗಿ ಮಾಧ್ಯಮ ಮತ್ತು ಸುದ್ದಿಗಳಿಂದ ದೂರವಿರುತ್ತಾರೆ. ಅದಾಗ್ಯೂ ಮಂದಿರ ತಮ್ಮ ಬೋಲ್ಡ್ ಲುಕ್ ಹಾಗೂ ಸ್ಟೈಲ್ ಮೂಲಕ ಹೆಚ್ಚು ಗಮನ ಸೆಳೆಯುತ್ತಾರೆ. ನಟನೆಯ ಹೊರತಾಡಿ ಮಂದಿರ ಬೇಡಿ (Mandira Bedi) ಫ್ಯಾಷನ್ ಡಿಸೈನರ್, ಮಾಡೆಲ್ ಮತ್ತು ಟಿವಿ ಪ್ರೆಸೆಂಟರ್ ಕೂಡ ಹೌದು. ಈ ನಟಿಗೆ ಈಗ 48 ವರ್ಷ ಎಂದು ತಿಳಿದರೆ ನಿಮಗೂ ಆಶ್ಚರ್ಯವಾಗಬಹುದು.
ಟಿವಿ ಧಾರಾವಾಹಿ 'ಶಾಂತಿ' ಮೂಲಕ ಮನೆ ಮಾತಾದ ಮಂದಿರ ಬೇಡಿ ತನ್ನ ವಯಸ್ಸಿಗಿಂತ ಚಿಕ್ಕವರಂತೆ ಕಾಣಿಸುತ್ತಾಳೆ. 48 ವರ್ಷದ ಮಂದಿರ ಈ ವಯಸ್ಸಿನಲ್ಲಿಯೂ ತುಂಬಾ ಫಿಟ್ ಮತ್ತು ಕ್ರಿಯಾಶೀಲರಾಗಿದ್ದು ಇತರರಿಗೂ ಸ್ಪೂರ್ತಿಯಾಗಿದ್ದಾರೆ.
ಮಂದಿರ ಆಗಾಗ್ಗೆ ತನ್ನ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಈ ಚಿತ್ರಗಳ ಮೂಲಕ ಅವರ ಫಿಟ್ನೆಸ್ ಬಗ್ಗೆ ಅವರು ಎಷ್ಟು ಕಾಳಜಿ ವಹಿಸುತ್ತಾರೆ ಎಂದು ತಿಳಿಯಬಹುದು.
ನಟನೆಯ ಹೊರತಾಗಿ ಮಂದಿರ ಫ್ಯಾಷನ್ ಡಿಸೈನರ್, ಮಾಡೆಲ್ ಮತ್ತು ಟಿವಿ ಪ್ರೆಸೆಂಟರ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಸೌಂದರ್ಯವನ್ನು ನೋಡಿ ಲಕ್ಷಾಂತರ ಮಹಿಳೆಯರು ಅವರನ್ನು ಹಿಂಬಾಲಿಸುತ್ತಾರೆ. ಆಧುನಿಕ ಅಥವಾ ಸಾಂಪ್ರದಾಯಿಕ ಹೀಗೆ ನೋಟ ಯಾವುದೇ ಇರಲಿ ಆಕೆ ಜನರ ಕಣ್ಮನ ಸೆಳೆಯುತ್ತಾಳೆ.
ಗರ್ಭಾವಸ್ಥೆಯಲ್ಲಿ ಮಂದಿರರ ತೂಕ 22 ಕೆಜಿ ಹೆಚ್ಚಳವಾಗಿತ್ತು. ತಾಯಿಯಾದ ನಂತರ ಅವಳು ಮತ್ತೆ ಅದೇ ಆಕಾರಕ್ಕೆ ಬಂದಳು.
ಇಂದಿಗೂ ಶಾರುಖ್ ಖಾನ್ ಮತ್ತು ಕಾಜೋಲ್ ಅವರೊಂದಿಗೆ ದಿಲ್ವಾಲೆ ದುಲ್ಹಾನಿಯಾ ಲೆ ಜಯಂಗೆ ಅವರ ಒಂದು ಸಣ್ಣ ಪಾತ್ರಕ್ಕಾಗಿ ಹೆಚ್ಚಿನ ಜನರು ಅವರನ್ನು ನೆನಪಿಸಿಕೊಳ್ಳುತ್ತಾರೆ.
ಕ್ರಿಕೆಟ್ ಕಾಮೆಂಟ್ರಿ ಮಾಡಲು ಹೋದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆ ಕೂಡ ಮಂದಿರ ಬೇಡಿ ಪಾತ್ರರಾಗಿದ್ದಾರೆ.
ವಯಸ್ಸು ಕಳೆದಂತೆ ಮಂದಿರ ಬೇಡಿ ಅವರ ಫಿಟ್ನೆಸ್ನ ಬಗ್ಗೆ ಸಾಕಷ್ಟು ಗಮನ ಹರಿಸಿದ್ದಾರೆ. ಚಲನಚಿತ್ರಗಳ ಕುರಿತು ಮಾತನಾಡುಡುವುದಾದರೆ ಮಂದಿರ ಬೇಡಿ ಬಾಹುಬಲಿ ಖ್ಯಾತಿಯ ಪ್ರಭಾಸ್ ಮತ್ತು ಶ್ರದ್ಧಾ ಕಪೂರ್ ಮುಖ್ಯ ಪಾತ್ರಗಳಲ್ಲಿರುವ 'ಸಾಹೋ' ಚಿತ್ರದಲ್ಲಿ ಕೂಡ ಕಾಣಿಸಿಕೊಂಡರು. (ಫೋಟೊ ಕೃಪೆ: ಎಲ್ಲಾ ಫೋಟೋಗಳನ್ನು ಮಂದಿರಾ ಬೇಡಿ ಅವರ ಇನ್ಸ್ಟಾಗ್ರಾಮ್ ಖಾತೆಯಿಂದ ತೆಗೆದುಕೊಳ್ಳಲಾಗಿದೆ)