Mahashivatri 2023: ಮಹಾಶಿವರಾತ್ರಿಯಂದು ಈ ವಸ್ತುಗಳನ್ನು ದಾನ ಮಾಡಿದ್ರೆ ಹಣದ ಮಳೆಯಾಗುತ್ತೆ!

Maha Shivratri date and time: ಮಹಾಶಿವರಾತ್ರಿಯಂದು ಕೆಲವು ವಸ್ತುಗಳನ್ನು ದಾನ ಮಾಡುವುದರಿಂದ ಭೋಲೆನಾಥನು ಸಂತೋಷಪಡುತ್ತಾನೆ ಮತ್ತು ಶನಿದೇವನು ಸಹ ತನ್ನ ಆಶೀರ್ವಾದವನ್ನು ನೀಡುತ್ತಾನೆ. 

ಮಹಾ ಶಿವರಾತ್ರಿ 2023 ದಿನಾಂಕ ಮತ್ತು ಸಮಯ: ಈ ವರ್ಷ ಮಹಾ ಶಿವರಾತ್ರಿಯನ್ನು ಫೆಬ್ರವರಿ 18ರ ಶನಿವಾರದಂದು ಆಚರಿಸಲಾಗುತ್ತದೆ. ಶನಿವಾರದಂದು ಬರುವ ಮಹಾಶಿವರಾತ್ರಿ ವಿಶೇಷ ಕಾಕತಾಳೀಯವಾಗುತ್ತಿದೆ. ಈ ದಿನದಂದು ಕೆಲವು ವಸ್ತುಗಳನ್ನು ದಾನ ಮಾಡುವುದರಿಂದ ಭೋಲೆನಾಥನು ಸಂತೋಷಪಡುತ್ತಾನೆ ಮತ್ತು ಶನಿದೇವನು ಸಹ ತನ್ನ ಆಶೀರ್ವಾದವನ್ನು ನೀಡುತ್ತಾನೆ. ಆದ್ದರಿಂದ ಈ ಮಹಾಶಿವರಾತ್ರಿಯಂದು ಕೆಲವು ವಸ್ತುಗಳನ್ನು ದಾನ ಮಾಡಿ ನಿಮಗೆ ಒಳಿತಾಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಹಿಂದೂ ಧರ್ಮದಲ್ಲಿ ಗೋವಿಗೆ ತಾಯಿ ಸ್ಥಾನ ನೀಡಲಾಗಿದೆ. ಆದ್ದರಿಂದ ಮಹಾಶಿವರಾತ್ರಿಯ ದಿನದಂದು ಹಸುವಿಗೆ ರೊಟ್ಟಿ ಮತ್ತು ಮೇವನ್ನು ತಿನ್ನಿಸಿ. ಹೀಗೆ ಮಾಡುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ ಮತ್ತು ಜೀವನದಲ್ಲಿ ಪ್ರಗತಿ ಇರುತ್ತದೆ.

2 /5

ಮಹಾಶಿವರಾತ್ರಿಯ ದಿನದಂದು ಹಾಲು ಮತ್ತು ಹಾಲಿನಿಂದ ಮಾಡಿದ ವಸ್ತುಗಳನ್ನು ದಾನ ಮಾಡುವುದರಿಂದ ಭೋಲೇನಾಥನ ಅನುಗ್ರಹವಾಗುತ್ತದೆ. ಶಿವನಿಗೆ ಹಾಲು ಎಂದರೆ ತುಂಬಾ ಇಷ್ಟ. ಇದರೊಂದಿಗೆ ಶಿವನು ಚಂದ್ರನನ್ನು ತನ್ನ ಜಟೆಯಲ್ಲಿರಿಸಿಕೊಂಡಿದ್ದಾನೆ. ಹೀಗಾಗಿ ಹಾಲು ಚಂದ್ರನಿಗೆ ಸಂಬಂಧಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಮಹಾಶಿವರಾತ್ರಿಯ ದಿನ ಹಾಲು ದಾನ ಮಾಡಿ ಭೋಲೇನಾಥನ ಕೃಪೆಯಿಂದ ಅಪಾರ ಸುಖ, ಐಶ್ವರ್ಯ, ಧನ ಸಿಗುತ್ತದೆ.

3 /5

ಮಹಾಶಿವರಾತ್ರಿಯ ದಿನ ಸಕ್ಕರೆಯನ್ನು ದಾನ ಮಾಡಿ. ಅಕ್ಕಿ, ಸಕ್ಕರೆ, ಹಾಲು ಅಥವಾ ಖೀರ್ ಅನ್ನು ಅಗತ್ಯವಿರುವವರಿಗೆ ದಾನ ಮಾಡಬಹುದು. ಹೀಗೆ ಮಾಡುವುದರಿಂದ ಜೀವನದಲ್ಲಿ ಶೀಘ್ರ ಯಶಸ್ಸು ಸಿಗುತ್ತದೆ.

4 /5

ಮಹಾಶಿವರಾತ್ರಿಯ ದಿನ ಕಪ್ಪು ಎಳ್ಳನ್ನು ದಾನ ಮಾಡಿ. ಕಪ್ಪು ಎಳ್ಳು ಶನಿ ದೇವರಿಗೆ ಸಂಬಂಧಿಸಿದೆ. ಕರಿ ಎಳ್ಳನ್ನು ದಾನ ಮಾಡುವುದರಿಂದ ಶನಿ ದೋಷ ನಿವಾರಣೆಯಾಗಿ ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು ದೊರೆಯುತ್ತದೆ.

5 /5

ಮಹಾಶಿವರಾತ್ರಿಯ ದಿನ ವಸ್ತ್ರದಾನ ಮಾಡುವುದು ಕೂಡ ತುಂಬಾ ಒಳ್ಳೆಯದು. ಈ ದಿನ ಬಡವರಿಗೆ ಬಟ್ಟೆ ವಿತರಿಸಿ, ಅನ್ನದಾನ ಮಾಡಿ. (ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)