Lucky Dreams: ಕನಸಿನಲ್ಲಿ ಈ ವಸ್ತುಗಳು ಕಂಡುಬಂದರೆ ನಿಮ್ಮ ಅದೃಷ್ಟವೇ ಬದಲಾಗುತ್ತೆ!

ಪ್ರತಿಯೊಬ್ಬರಿಗೂ ಕನಸುಗಳು ಬೀಳುತ್ತವೆ. ಕೆಲವು ಕನಸುಗಳು ನಮಗೆ ಸಂತೋಷ ನೀಡಿದ್ರೆ, ಇನ್ನೂ ಕೆಲವು ಕನಸುಗಳು ತುಂಬಾ ಭಯಾನಕವಾಗಿರುತ್ತವೆ. ನಮಗೆ ಬೀಳುವ ಕನಸುಗಳ ಅರ್ಥ ತಿಳಿದುಕೊಳ್ಳುವುದು ತುಂಬಾ ಮುಖ್ಯ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

ನವದೆಹಲಿ: ಕನಸುಗಳು ಮಾನವನ ಜೀವನದ ಅವಿಭಾಜ್ಯ ಅಂಗವಾಗಿವೆ. ಈ ಕನಸುಗಳ ಮೇಲೆ ಮನುಷ್ಯ ಯಾವುದೇ ರೀತಿಯ ನಿಯಂತ್ರಣ ಹೊಂದಿಲ್ಲ. ನಾವು ಕನಸಿನ ವಿಜ್ಞಾನವನ್ನು ನಂಬಿದರೆ, ಪ್ರತಿ ಕನಸಿಗೂ ಒಂದೊಂದು ಅರ್ಥಿವಿದೆ ಅನ್ನೋದು ತಿಳಿಯುತ್ತದೆ. ನಮಗೆ ಬೀಳುವ ಕನಸುಗಳು ಭವಿಷ್ಯದಲ್ಲಿ ಸಂಭವಿಸುವ ಶುಭ ಮತ್ತು ಅಶುಭ ಘಟನೆಗಳ ಬಗ್ಗೆ ನಮಗೆ ತಿಳಿಸುತ್ತವಂತೆ. ಹೀಗಾಗಿ ಮಲಗಿದಾಗ ಬೀಳುವ ಕೆಲವು ಕನಸುಗಳನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಇಂತಹ ಕೆಲವು ಕನಸುಗಳ ಬಗ್ಗೆ ನಾವು ಇಂದು ನಿಮಗೆ ತಿಳಿಸಿಕೊಡಲಿದ್ದೇವೆ. ನೀವು ಸಹ ಇಂತಹ ಕನಸುಗಳನ್ನು ಕಂಡಿದ್ದರೆ ಶೀಘ್ರವೇ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಲಿದ್ದೀರಿ ಎಂದು ಅರ್ಥಮಾಡಿಕೊಳ್ಳಿ. ಶುಭ ಸುದ್ದಿ ನೀಡುವ ಕನಸುಗಳ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ನಿಮ್ಮ ಕನಸಿನಲ್ಲಿ ಭಗವಾನ್ ಭೋಲೆನಾಥನ ದೇವಾಲಯ ನೋಡಿದರೆ ಅಥವಾ ದೇವಾಲಯದಲ್ಲಿ ಅರ್ಚಕರಿಂದ ಪ್ರಸಾದ ತೆಗೆದುಕೊಳ್ಳುವುದನ್ನು ಕಂಡರೆ, ಭಗವಾನ್ ಶಂಕರನ ಕೃಪೆಯಿಂದ ನೀವು ದೊಡ್ಡ ಶುಭಸುದ್ದಿ ಪಡೆಯಲಿದ್ದೀರಿ ಎಂದರ್ಥ.  

2 /6

ನಿಮ್ಮ ಕನಸಿನಲ್ಲಿ ಜೇನು ಗೂಡು ಕಂಡರೆ ಅದು ತುಂಬಾ ಶುಭ ಸೂಚನೆ. ಇದರರ್ಥ ನೀವು ಶೀಘ್ರದಲ್ಲೇ ಬಹಳಷ್ಟು ಹಣವನ್ನು ಪಡೆಯಲಿದ್ದೀರಿ ಎಂದರ್ಥ.

3 /6

ನೀವು ಕನಸಿನಲ್ಲಿ ಮಾವಿನ ಮರವನ್ನು ನೋಡಿದರೆ, ಭವಿಷ್ಯದಲ್ಲಿ ನೀವು ಸಾಕಷ್ಟು ಪ್ರಗತಿಯನ್ನು ಪಡೆಯುತ್ತೀರಿ ಎಂದರ್ಥ.

4 /6

ನಿಮ್ಮ ಕನಸಿನಲ್ಲಿ ನೀವು ಹುಡುಗಿ ಅಥವಾ ಮಹಿಳೆಯನ್ನು ನೋಡಿದರೆ, ನಿಮಗೆ ಸಂಪತ್ತು ಸಿಗುತ್ತದೆ ಎಂದರ್ಥ. ಇದರೊಂದಿಗೆ ನಿಮ್ಮ ಆರ್ಥಿಕ ಸ್ಥಿತಿಯು ತುಂಬಾ ಬಲವಾಗಿರುತ್ತದೆ.

5 /6

ನಿಮ್ಮ ಕನಸಿನಲ್ಲಿ ಹಾಲುಕರೆಯುವ ಹಸುವನ್ನು ನೀವು ನೋಡಿದರೆ ತುಂಬಾ ಮಂಗಳಕರ. ಇದರರ್ಥ ಶೀಘ್ರದಲ್ಲೇ ನಿಮ್ಮ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗಲಿದೆ.

6 /6

ನಿಮ್ಮ ಕನಸಿನಲ್ಲಿ ಗುಲಾಬಿಯನ್ನು ನೋಡಿದರೆ ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದರರ್ಥ ನಿಮ್ಮ ಕೆಲವು ದೊಡ್ಡ ಕೆಲಸಗಳು ಪೂರ್ಣಗೊಳ್ಳಲಿವೆ.