Low BP Control Tips: ಬಿಪಿ ಕಡಿಮೆಯಾದರೆ ಉಪ್ಪನ್ನು ಸೇವಿಸಬೇಕು. ಬಿಪಿಯನ್ನು ಸರಿದೂಗಿಸಲು ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಹೆಚ್ಚಿಸಬೇಕು. ಹೀಗೆ ಮಾಡುವುದರಿಂದ ಬಿಪಿ ಸರಿಯಾಗಿರುತ್ತದೆ.
Low Blood Pressure: ಬದಲಾದ ಜೀವನಶೈಲಿ ಮತ್ತು ಕಳಪೆ ಆಹಾರ ಪದ್ಧತಿಯಿಂದ ಅನೇಕರು ಇಂದು ಕಡಿಮೆ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಡಿಮೆ ರಕ್ತದೊತ್ತಡವು ಸಾಮಾನ್ಯ ಸಮಸ್ಯೆಯಾಗಿದೆ. ಕೆಲವರು ಈ ರೀತಿಯ ಸಮಸ್ಯೆಯನ್ನು ನಿರ್ಲಕ್ಷಿಸುತ್ತಾರೆ. ಆದರೆ ಹೀಗೆ ಮಾಡುವುದು ಅಪಾಯಕಾರಿ. ಲೋ ಬಿಪಿ ಸಮಸ್ಯೆ ಇದ್ದರೆ ಅದಕ್ಕೆ ಚಿಕಿತ್ಸೆ ಅಥವಾ ಪರಿಹಾರ ಕಂಡುಕೊಳ್ಳಬೇಕು. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಲೋ ಬಿಪಿ ಲಕ್ಷಣಗಳು ತ್ವರಿತವಾಗಿ ಕಂಡುಬರುವುದಿಲ್ಲ. ಆದರೆ ಅದನ್ನು ನಿರ್ಲಕ್ಷಿಸುವುದರಿಂದ ಪ್ರಾಣಕ್ಕೇ ಅಪಾಯವಾಗಬಹುದು. ಕಡಿಮೆ ರಕ್ತದೊತ್ತಡದ ಲಕ್ಷಣಗಳೇನು? ಇದನ್ನು ಸುಲಭವಾಗಿ ಹೇಗೆ ಪರಿಹರಿಸಬಹುದು ತಿಳಿದುಕೊಳ್ಳುವುದು ಮುಖ್ಯ. ದೇಹದಲ್ಲಿ ನೀರಿನ ಕೊರತೆ, ಹೆಚ್ಚು ಒತ್ತಡ ಮತ್ತು ದೀರ್ಘಕಾಲದವರೆಗೆ ಹಸಿವು ತಡೆದುಕೊಳ್ಳುವ ಸಾಮರ್ಥ್ಯ ಇವು ಲೋ ಬಿಪಿಯ ಲಕ್ಷಣಗಳವಾಗಿವೆ.
ಲೋ ಬಿಪಿಯ ಯಾವುದೇ ಲಕ್ಷಣಗಳು ಆರಂಭದಲ್ಲಿ ಗೋಚರಿಸುವುದಿಲ್ಲ. ಆದರೆ ಸ್ವಲ್ಪ ಸಮಯದ ನಂತರ ಕೆಲವು ಸಂಕೇತಗಳನ್ನು ದೇಹ ನೀಡಲಾರಂಭಿಸುತ್ತದೆ. ಉದಾಹರಣೆಗೆ ತಲೆತಿರುಗುವಿಕೆ, ದೃಷ್ಟಿ ಮಂದವಾಗುವುದು, ಮೂರ್ಛೆ ಹೋಗುವುದು, ಕೈಕಾಲು ತಣ್ಣಗಾಗುವುದು ಮತ್ತು ಆಯಾಸದ ಭಾವನೆ ಇವೆಲ್ಲವೂ ಲೋ ಬಿಪಿಯ ಲಕ್ಷಣಗಳಾಗಿವೆ.
ಬಿಪಿ ಯಾವಾಗಲೂ ಕಡಿಮೆಯಿದ್ದರೆ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಚೆನ್ನಾಗಿ ನೀರು ಕುಡಿಯಬೇಕು. ದೇಹವನ್ನು ಹೈಡ್ರೇಟ್ ಆಗಿ ಇಟ್ಟುಕೊಳ್ಳಬೇಕು. ಇದಕ್ಕಾಗಿ ನೀವು ದಿನಕ್ಕೆ ಕನಿಷ್ಠ 8 ಲೋಟ ನೀರು ಕುಡಿಯಬೇಕು.
ಬಿಪಿ ಕಡಿಮೆಯಾದರೆ ಉಪ್ಪನ್ನು ಸೇವಿಸಬೇಕು. ಬಿಪಿಯನ್ನು ಸರಿದೂಗಿಸಲು ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಹೆಚ್ಚಿಸಬೇಕು. ಹೀಗೆ ಮಾಡುವುದರಿಂದ ಬಿಪಿ ಸರಿಯಾಗಿರುತ್ತದೆ. ಲೋ ಬಿಪಿ ಸಮಸ್ಯೆ ಇರುವವರು ಆಹಾರದಲ್ಲಿ ಕೆಫೀನ್ ಹೊಂದಿರುವ ವಸ್ತುಗಳನ್ನು ಸೇರಿಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ಬಿಪಿ ನಿಯಂತ್ರಣದಲ್ಲಿರುತ್ತದೆ.
ಹಣ್ಣುಗಳನ್ನು ತಿನ್ನುವುದು ಬಿಪಿಯನ್ನು ನಿಯಂತ್ರಣದಲ್ಲಿಡುತ್ತದೆ. ಆದ್ದರಿಂದ ಬಿಪಿಯನ್ನು ನಿಯಂತ್ರಣದಲ್ಲಿಡಲು ಬಯಸಿದರೆ ನೀವು ಋತುಮಾನದ ಹಣ್ಣುಗಳನ್ನು ಸೇವಿಸಲು ಪ್ರಾರಂಭಿಸಬೇಕು.