Love Hormone: ಶರೀರದಲ್ಲಿ ನೈಸರ್ಗಿಕವಾಗಿ ಲವ್ ಹಾರ್ಮೋನನ್ನು ಹೆಚ್ಚಿಸುತ್ತವೆ ಈ ಹಣ್ಣುಗಳು!

Love Hormone: ಆಕ್ಸಿಟೊಸೀನ್ ಹಾರ್ಮೋನು ಹೆಚ್ಚಳಕ್ಕೆ ಅವಕಾಡೊ ಹಾಗೂ ಕರ್ಬೂಜಾ ಸೇರಿದಂತೆ ಚಿಯಾ ಬೀಜಗಳು, ಬಾಳೆಹಣ್ಣು ಹಾಗೂ ಡಾರ್ಕ್ ಚಾಕಲೆಟ್ ಹಣ್ಣುಗಳ ಸೇವನೆಯನ್ನು ಮಾಡಬೇಕು. 
 

Love Hormone: ನಾವು ಯಾವಾಗ ಚಿಂತೆಯಲ್ಲಿ ಮತ್ತು ಒತ್ತಡದಲ್ಲಿರುತ್ತೇವೆಯೋ ಆಗ ನಮ್ಮ ಯಾವುದೇ ಕೆಲಸ ಸರಿಯಾಗಿ ಆಗುವುದಿಲ್ಲ. ಮೂಡ್ ಸರಿಯಾಗಿದ್ದಾಗ ಮಾತ್ರ ನಾವು ಮಾಡುವ ಕೆಲಸದಲ್ಲಿ ನಮಗೆ ಅಭಿರುಚಿ ಹೆಚ್ಚಾಗುತ್ತದೆ. ಹಾಗೆ ನೋಡಿದರೆ ನಮ್ಮ ಮೂಡ್ ನಮ್ಮ ದೇಹದಲ್ಲಿರುವ ಒಂದು ಹಾರ್ಮೋನನ್ನು ಆಧರಿಸಿದೆ. ಹೌದು, ನಮ್ಮ ದೇಹದಲ್ಲಿ ಕಾರ್ಟಿಸೋಲ್ ಹಾರ್ಮೋನಿನ ಸ್ರವಿಕೆ ಹೆಚ್ಚಾದಾಗ ನಮ್ಮ ದೇಹ ಒತ್ತಡದಲ್ಲಿ ಬಂದು ನಿಲ್ಲುತ್ತದೆ. ಇದು ನಮ್ಮ ಆಹಾರದ ಜೊತೆಗೆ ನೇರ ಸಂಬಂಧವನ್ನು ಹೊಂದಿದೆ. ನಾವು ಯಾವ ಪದಾರ್ಥಗಳನ್ನು ಸೇವಿಸುತ್ತೇವೆಯೋ, ಅದೇ ವಿಧದಲ್ಲಿ ನಮ್ಮ ಶರೀರದಲ್ಲಿಯೂ ಕೂಡ ಹಾರ್ಮೋನುಗಳು ತಯಾರಾಗುತ್ತವೆ. ಇದೆ ರೀತಿ ಖುಷಿಯಾಗಿರಲು ಕೂಡ ಒಂದು ಹಾರ್ಮೋನಿನ ಹೆಚ್ಚಿನ ಸ್ರವಿಕೆಯ ಅಗತ್ಯ ನಮಗೆ ಬೀಳುತ್ತದೆ. ಖುಶಿಯಾಗಿರಲು ಆಕ್ಸಿಟೊಸೀನ್ ಹಾರ್ಮೋನ ತುಂಬಾ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಆಕ್ಸಿಟೊಸೀನ್ ಹಾರ್ಮೋನು ಹೆಚ್ಚಾಗಿ ಸ್ರವಿಕೆಯಾದಾಗ ಪರಸ್ಪರರ ಮಧ್ಯೆ ಪ್ರೀತಿಯ ಭಾವನೆ ಹೆಚ್ಚಾಗುತ್ತದೆ ಮತ್ತು ಈ ಭಾವನೆ ಒಳಗಡೆಯಿಂದ ಬರುತ್ತದೆ. ಈ ಹಾರ್ಮೋನನ್ನು ಲವ್ ಹಾರ್ಮೋನ್ ಎಂದೂ ಕೂಡ ಕರೆಯುತ್ತಾರೆ. ಹಾಗಾದರೆ ಬನ್ನಿ ಯಾವ ಆಹಾರಗಳನ್ನು ಸೇವಿಸುವುದರಿಂದ ಈ ಹಾರ್ಮೋನ್ ಸ್ರವಿಕೆ ಹೆಚ್ಚಾಗುತ್ತದೆ ತಿಳಿದುಕೊಳ್ಳೋಣ, 

 

ಇದನ್ನೂ ಓದಿ-Dream Interpretation: ಕನಸಲ್ಲಿ ಶಿವಾಲಯ, ಮಾಮರ ಕಂಡ್ರೆ ಏನರ್ಥ?

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಖರ್ಬುಜಾ- ಖರ್ಬುಜಾದಲ್ಲಿ ಹಲವು ರೀತಿಯ ಆಂಟಿ ಆಕ್ಸಿಡೆಂಟ್ ಗಳಿರುತ್ತವೆ. ಅವು ನಮ್ಮ ಶರೀರಕ್ಕೆ ಹಲವು ರೀತಿಯಲ್ಲಿ ಲಾಭ ನೀಡುತ್ತವೆ. ಟೆಸ್ಟೊಸ್ಟೇರಾನ್ ಹಾಗೂ ಈಸ್ಟ್ರೊಜನ್ ಹಾರ್ಮೋನುಗಳ ಸ್ರವಿಕೆಯಲ್ಲಿ ಇದು ಮಹತ್ವದ ಪಾತ್ರ ನಿರ್ವಹಿಸುತ್ತದೆ.   

2 /5

ಅವಕಾಡೊ- ಅವಕಾಡೊ ಒಂದು ಸೂಪರ್ ಫುಡ್ ಆಗಿದೆ. ಇದರಲ್ಲಿ ಗುಡ್ ಕೊಲೆಸ್ಟ್ರಾಲ್ ಜೊತೆಗೆ ಟೆಸ್ಟೊಸ್ಟೇರಾನ್ ಹಾರ್ಮೋನು ಸ್ರವಿಕೆ ಹೆಚ್ಚಿಸುವ ಹಲವು ರಸಾಯನಗಳಿವೆ.  

3 /5

ಫ್ಯಾಟಿ ಫಿಶ್- ಸೇಲ್ಮನ್, ಟೂನಾ ಇತ್ಯಾದಿ ಫ್ಯಾಟಿ ಫಿಶ್ ಗಳು ಹಾರ್ಮೋನಲ್ ಆರೋಗ್ಯಕ್ಕೆ ತುಂಬಾ ಲಾಭಕಾರಿಯಾಗಿವೆ. ಈ ಫ್ಯಾಟಿ ಫಿಶ್ ಗಳು ನಮ್ಮ ಶರೀರದಲ್ಲಿ ಲವ್ ಹಾರ್ಮೋನುಗಳನ್ನು ಬೂಸ್ಟ್ ಮಾಡುತ್ತವೆ.  

4 /5

ಕೋಕೋಆ- ಡಾರ್ಕ್ ಚಾಕ್ಲೇಟ್, ಕಾಫಿ ಇತ್ಯಾದಿಗಳಲ್ಲಿ ಕೋಕೋಆ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತದೆ. ಇವುಗಳಲ್ಲಿ ಹೆಚ್ಚಿನ ಪ್ರಮಾಣದ ಮೇಗ್ನೇಸಿಯಮ್ ಮತ್ತು ಫ್ಲೇವೇನಾಯ್ಡ್ ಗಳಿರುತ್ತವೆ ಇವು  ಟೆಸ್ಟೊಸ್ಟೇರಾನ್ ಹಾಗೂ ಈಸ್ಟ್ರೊಜನ್ ಸ್ರವಿಕೆಯನ್ನು ಹೆಚ್ಚಿಸುತ್ತವೆ.   

5 /5

ಬೆರ್ರಿ ಹಣ್ಣುಗಳು- ಚೆರ್ರಿ, ಸ್ಟ್ರಾಬೇರಿ, ರಾಸ್ಪಬೆರ್ರಿ, ನೇರಳೆ ಹಣ್ಣು ಇತ್ಯಾದಿಗಳಲ್ಲಿ ಫ್ಲೇವಯಾಯ್ಡ್ ಹಾಗೂ ಹಲವು ರೀತಿಯ ಆಂಟಿ ಆಕ್ಸಿಡೆಂಟ್ ಗಳು ಹೇರಳ ಪ್ರಮಾಣದಲ್ಲಿವೆ. ಇವು ಈಸ್ಟ್ರೊಜನ್ ಸ್ರವಿಕೆಯನ್ನು ಮಾಡುವ ಕೋಶಗಳನ್ನು ಹಾನಿಯಿಂದ ರಕ್ಷಿಸುತ್ತವೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)