Rajinikanth: ರಜನಿಕಾಂತ್​ಗೆ ಆಕ್ಷನ್ ಕಟ್ ಹೇಳ್ತಿದ್ದಾರೆ ಲೋಕೇಶ್ ಕನಕರಾಜ್..ತಲೈವರ್ 171 ಬಿಗ್‌ ಅಪ್‌ಡೇಟ್ಸ್‌

Rajanikanth New Movie Updates : ರಜನಿಕಾಂತ್‌ ಹಾಗೂ ಲೋಕೆಶ್‌ ಕನಗರಾಜ್‌ ಅವರು ಒಟ್ಟಿಗೆ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಬಹಳ ದಿನಗಳಿಂದ ಹರಿದಾಡುತ್ತಿತ್ತು. ಆದರೆ ಈಗ ಅದು ನಿಜವಾಗಿದೆ. ಹೌದು ಈ ಬಗ್ಗೆ ಸ್ವತಃ ನಿರ್ಮಾಣ ಸಂಸ್ಥೆಯೇ ಅಧಿಕೃತವಾಗಿ ಘೋಷಣೆ ಮಾಡಿದೆ. ಸದ್ಯ ಚಿತ್ರಕ್ಕೆ ‘ತಲೈವರ್ 171’ ಎಂದು ತಾತ್ಕಾಲಿಕ ಹೆಸರನ್ನು ಇಡಲಾಗಿದೆ. 

1 /5

ರಜನಿಕಾಂತ್‌ ಅಭಿನಯದ ಜೈಲರ್‌ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿ ಸಖತ್‌ ಸೌಂಡ್‌ ಮಾಡುತ್ತಿದೆ. ಸದ್ಯ ಈ ಸಿನಿಮಾ 500 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡಿ ಭಾಕ್ಸಾಫಿಸ್‌ನ ಎಲ್ಲಾ ದಾಖಲೆಗಳನ್ನು ಉಢೀಸ್‌ ಮಾಡಿದೆ.   

2 /5

ಜೈಲರ್‌ ಆರ್ಭಟದ ನಡುವೆ ರಜನಿಕಾಂತ್‌ ಅವರ ಮತ್ತೊಂದು ಸಿನಿಮಾ ಸೆಟ್ಟೇರಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆ ಸಿನಿಮಾದಲ್ಲಿ ತಲೈವಾರ್‌ ಲೋಕೇಶ್ ಕನಕರಾಜ್ ಅವರ ಜೊತೆ ಕೈ ಜೋಡಿಸಲಿದ್ದಾರೆ ಎನ್ನಲಾಗುತ್ತಿದೆ.   

3 /5

ಇನ್ನು ಈ ಸಿನಿಮಾ ರಜನಿ ಅವರ 171 ಸಿನಿಮಾ ಆಗಿದ್ದು, ಆದ್ದರಿಂದ ಇದಕ್ಕೆ ತಾತ್ಕಾಲಿಕವಾಗಿ ‘ತಲೈವರ್ 171’ ಎಂದು ಕರೆಯಲಾಗುತ್ತಿದೆ. ಅಲ್ಲದೇ ಈ ಸಿನಿಮಾಗೆ ‘ಜೈಲರ್​’ ಚಿತ್ರವನ್ನು ನಿರ್ಮಾಣ ಮಾಡಿದ ‘ಸನ್​ ಪಿಕ್ಚರ್ಸ್​’ ಸಂಸ್ಥೆಯೇ ಬಂಡವಾಳ ಹೂಡಲಿದೆ ಎನ್ನಲಾಗಿದೆ.  

4 /5

ಸದ್ಯ ಈ ಬಿಗ್‌ ಅಪ್‌ಡೇಟ್‌ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸುತ್ತಿದ್ದಂತೂ ಸುಳ್ಳಲ್ಲ. ಅಲ್ಲದೇ ಈ ಸಿನಿಮಾ ಸಹ ಭರ್ಜರಿ ಆ್ಯಕ್ಷನ್​ ಸಿನಿಮಾ ಆಗಿರಲಿದೆ ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ.   

5 /5

ಕಾಲಿವುಡ್‌ನಲ್ಲಿ ಸಖತ್‌ ಬೇಡಿಕೆ ಇರುವ ನಿರ್ದೇಶಕರಾದ ಲೋಕೇಶ್​ ಕನಗರಾಜ್ ‘ತಲೈವರ್ 171’ ಗೆ ಆಕ್ಷನ್‌ ಕಟ್‌ ಹೇಳುತ್ತಿರುವುದರಿಂದ ಕಾಲಿವುಡ್​ನ ಎಲ್ಲ ದಾಖಲೆಗಳನ್ನು ಈ ಸಿನಿಮಾ ಜಪ್ತಿ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎನ್ನುವುದು ಫ್ಯಾನ್ಸ್‌ ಅಭಿಪ್ರಾಯ