Lakshmi Nivasa Serial: ಲಕ್ಷ್ಮೀ ನಿವಾಸ "ಸಿದ್ದೇಗೌಡ್ರು" ತಾಯಿ ಕೂಡ ಖ್ಯಾತ ನಟಿ.. ಮಗನೊಂದಿಗೆ ಒಂದೇ ಸಿರೀಯಲ್‌ನಲ್ಲಿ ನಟಿಸುತ್ತಿರುವ ಕಲಾವಿದೆ ಯಾರು ಗೊತ್ತಾ?

Lakshmi Nivasa Serial Siddegowdru Real Mother: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರವಾಹಿ ಲಕ್ಷ್ಮೀ ನಿವಾಸ.. ಈ ಸಿರೀಯಲ್‌ನಲ್ಲಿನ ಅನೇಕ ಪಾತ್ರಗಳು ಪ್ರೇಕ್ಷಕರ ಮೆಚ್ಚುಗೆ ಪಡೆದಿವೆ.. ಅದರಲ್ಲಿ ಸಿದ್ದೇಗೌಡರ ಪಾತ್ರವೂ ಒಂದು.. ನಾಯಕ ನಟನಾಗಿರುವ ಇವರ ತಾಯಿಯೂ ಸಹ ಖ್ಯಾತ ನಟಿ ಎನ್ನುವುದು ನಿಮಗೆ ಗೊತ್ತೇ? 

1 /5

ಸಿದ್ದೇಗೌಡ್ರು.. ಲಕ್ಷ್ಮೀ ನಿವಾಸ ಸಿರೀಯಲ್‌ನಲ್ಲಿ ಪಟ ಪಟ ಎಂದು ಮಾತನಾಡುವ ರಾಜಕೀಯ ವ್ಯಕ್ತಿಯಾಗಿ ಪ್ರೇಕ್ಷಕರ ಮನಗೆದ್ದಿರುವ ಪಾತ್ರ.. ಈ ನಟನ ಅಧ್ಬುತ ನಟನೆಗೆ ಎಲ್ಲರೂ ಫಿದಾ ಆಗಿದ್ದಾರೆ.. ಭಾವನಾ ಮತ್ತು ಸಿದ್ದೇಗೌಡ್ರ ಜೋಡಿ ನೆಟಿಜನ್ಸ್‌ಗೆ ಸಖತ್‌ ಇಷ್ಟವಾಗಿದೆ..   

2 /5

ಈ ಲಕ್ಷ್ಮೀ ನಿವಾಸ ಸಿರೀಯಲ್‌ ನೋಡುವವರಿಗೆ ಸಿದ್ದೇಗೌಡ್ರು ಯಾರು? ಅವರ ಹಿನ್ನಲೆ ಏನು? ಅಪ್ಪ ಅಮ್ಮ ಯಾರು? ನಟನಾ ಜಗತ್ತಿಗೆ ಹೊಸಬರಾ? ಹೀಗೆ ಹಲವಾರು ಸಂಗತಿಗಳನ್ನು ತಿಳಿದುಕೊಳ್ಳಬೇಕು ಎನ್ನುವ ಕುತೂಹಲವಿರುತ್ತದೆ..   

3 /5

ಸಿದ್ದೇಗೌಡ್ರ ನಿಜವಾದ ಹೆಸರು ಧನಂಜಯ್..‌ ಆದರೆ ಅವರು ತಮ್ಮ ಹೆಸರನ್ನು ಶಾರ್ಟ್‌ ಆಗಿ ಡಿಜೆ ಎಂದು ಇಟ್ಟುಕೊಂಡಿದ್ದಾರೆ... ಲಕ್ಷ್ಮೀ ನಿವಾಸ ಇವರ ಮೊದಲ ಸಿರೀಯಲ್‌ ಅಲ್ಲ.. ಸಾಕಷ್ಟು ಶಾರ್ಟ್‌ ಫಿಲ್ಮ್‌ ಹಾಗೂ ಸಿನಿಮಾ ಮೂಲಕ ಗುರುತಿಸಿಕೊಂಡ ಕಲಾವಿದರಿವರು..   

4 /5

ಇನ್ನೊಂದು ವಿಶೇಷತೆ ಎಂದರೇ ಧನಂಜಯ್‌ ಅವರ ಮನೆಯಲ್ಲೂ ಕಲಾವಿದರಿದ್ದಾರೆ.. ಹೌದು ಈ ನಟನ ತಾಯಿ ಕೂಡ ಫೇಮಸ್ ನಟಿ.. ಅವರು ಕೂಡ ಅನೇಕ ಸಿರೀಯಲ್‌ ಹಾಗೂ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.. ಇನ್ನೊಂದು ಅಚ್ಚರಿಯ ವಿಷಯವೆಂದರೇ ಧನಂಜಯ್‌ ತಾಯಿ ಸಹ ಲಕ್ಷ್ಮೀ ನಿವಾಸ ಸಿರೀಯಲ್‌ನಲ್ಲಿ ನಟಿಸುತ್ತಿದ್ದಾರೆ..   

5 /5

ಹೌದು ಲಕ್ಷ್ಮೀ ನಿವಾಸ ಸಿರೀಯಲ್‌ನಲ್ಲಿ ಸಿದ್ದೇಗೌಡ್ರ ರಿಯಲ್‌ ತಾಯಿ ಹೂವು ಮಾರುವವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.. ಆದರೆ ಈ ವಿಚಾರ ಕೆಲವರಿಗೆ ತಿಳಿದಿಲ್ಲ..