Killer Robot First Attack On Humans: ಅಪಾಯಕಾರಿ ಸಾಬೀತಾಗುತ್ತಿದೆ 'ಕಿಲ್ಲರ್ ರೋಬೋಟ್', ಆದೇಶವಿಲ್ಲದೆಯೇ ಮನುಷ್ಯರ ಬೇಟೆ

Killer Drone First Successfull Attack on Humans - ಡ್ರೋನ್ ಬೇಟೆಯಾಡಿದ ವ್ಯಕ್ತಿ ಓರ್ವ ಮಿಲ್ಟ್ರಿ ಕಮಾಂಡರ್ ಆಗಿದ್ದ, ಹಾಗೂ ಯುದ್ಧದಲ್ಲಿ ಅತ್ಯಂತ ಮಹತ್ವದ ಸ್ಥಾನ ಹೊಂದಿದ್ದ. 2020ರಲ್ಲಿ UN ನಲ್ಲಿ ನಡೆದ ಒಂದು ಡಿಬೇಟ್ ನಲ್ಲಿ, 30 ಕ್ಕೂ ಹೆಚ್ಚು ದೇಶಗಳು ಶಸ್ತ್ರಾಸ್ತ್ರಗಳನ್ನು ಹೊಂದಿರುವ ರೋಬೋಟ್ ಗಳಿಗೆ ವಿರೋಧ ವ್ಯಕ್ತಪಡಿಸಿದ್ದವು.

 

ಇದನ್ನೂ ಓದಿ-Viral Video: PPE Kit ಧರಿಸಿ Corona Positive ಶವವನ್ನು ನದಿಗೆ ಎಸೆದ್ರು!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

1. ಕಿಲ್ಲರ್ ರೋಬೋಟ್ -UN: ಯುದ್ಧವಾಡುವ ರೋಬೋಟ್‌ಗಳು ಮಾನವ ಜನಾಂಗಕ್ಕೆ ಮುಂದಿನ ದೊಡ್ಡ ವಿಪತ್ತು ಸಾಬೀತಾಗುವ ಸಾಧ್ಯತೆ ಇದೆ. ಈ ರೋಬೋಟ್‌ಗಳನ್ನು ಕಿಲ್ಲರ್ ರೋಬೋಟ್‌ಗಳು (Killer Robot) ಎಂದೂ ಕರೆಯುತ್ತಾರೆ. ಈಗಾಗಲೇ ಇದು ಆರಂಭಗೊಂಡಿದೆ ಎಂದು UN ಹೇಳಿದೆ. ಆಫ್ರಿಕಾದ ಅಶಾಂತ ದೇಶವಾಗಿರುವ ಲಿಬಿಯಾದಲ್ಲಿ ಕಿಲ್ಲರ್ ರೋಬೋಟ್ ಗಳು ತನ್ನ ಮೊದಲ ಬೇಟೆಯಾಡಿದ್ದು, ಅದೂ ಕೂಡ ಯಾವುದೇ ಆದೇಶದ ಹೊರತಾಗಿ ಈ ಬೇಟೆ ನಡೆದಿದೆ. ಹೌದು, ಕೇಳಲು ಈ ಸಂಗತಿ ವಿಚಿತ್ರ ಎನಿಸಿದರೂ ಕೂಡ ನಿಜವೆಂದು ಸಾಬೀತಾಗಿದೆ.

2 /5

2. UN ಹೇಳಿದ್ದೇನು? - ಈ ಕುರಿತು ತನ್ನ ವರದಿ ನೀಡಿರುವ ಯುನೈಟೆಡ್ ನೇಶನ್ಸ್, ಒಂದು ಸ್ವತಂತ್ರ ರೋಬೋಟ್ ಲಿಬಿಯಾದಲ್ಲಿ ಯಾವುದೇ ಮಾನವರ ಅನುಮತಿ ಪಡೆಯದೇ ತನ್ನ ಬೇಟೆಯ ಹುಡುಕಾಟ ನಡೆಸಿ ಅದನ್ನು ಹತ್ಯೆಗೈದಿದೆ. 2019ರಲ್ಲಿ ಸಂಯುಕ್ತ ರಾಷ್ಟ್ರದಲ್ಲಿ (UNSC)  ಕಿಲ್ಲರ್ ರೋಬೋಟ್ ಗಳ ಕುರಿತು ಪ್ರಸ್ತಾವನೆಯೊಂದನ್ನು ಮಂಡಿಸಲಾಗಿತ್ತು. ಆದರೆ, ಇವುಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಹಾಗೂ 2020 ರಲ್ಲಿ ನಡೆಸಲಾಗಿರುವ ವೋಟಿಂಗ್ ನಲ್ಲಿ ಕಿಲ್ಲರ್ ರೋಬೋಟ್ ಗಳನ್ನು ತೆಗೆದುಹಾಕಲಾಗಿತ್ತು.

3 /5

3. ಡ್ರೋನ್ ತಯಾರಿಸಿದ ತುರ್ಕಿ ಕಂಪನಿ - UN ಸಿಕ್ಯೋರಿಟಿ ಕೌನ್ಸಿಲ್ ನ ಈ ವರದಿ ಮಾರ್ಚ್ 2021ರಲ್ಲಿ ಪ್ರಕಟಗೊಂಡಿತ್ತು, ಈ ವರದಿಯಲ್ಲಿ ವರ್ಷ 2020ರಲ್ಲಿ ಲಿಬಿಯಾದಲ್ಲಿ Kargu-2 ಹೆಸರಿನ ಕಿಲ್ಲರ್ ಡ್ರೋನ್ ಈ ಘಟನೆಗೆ ಅಂತ್ಯಹಾಡಿದೆ. ಈ ಡ್ರೋನ್ ಅನ್ನು ಟರ್ಕಿಷ್ ಮಿಲಿಟರಿ ಟೆಕ್ನಾಲಜಿ ಕಂಪನಿ STM ಸಿದ್ಧಪಡಿಸಿದೆ.

4 /5

4. ಲಿಬಿಯಾದಲ್ಲಿ ಮೊದಲ ಬಲಿ - ಕಾರ್ಗೋ -2 ಡ್ರೋನ್ (Kargu-2 Killer Drone) ವಿಸ್ಫೋಟಕಗಳಿಂದ ತುಂಬಿದ್ದು, ಅದು ತನ್ನ ಬೇಟೆಯನ್ನು ತಾನೇ ಹುಡುಕಿ ಹತ್ಯೆಗೈಯುತ್ತದೆ. ಈ ರೋಬೋಟ್ ಕಮಿಕೆಜ್ ಸ್ಟೈಲ್ ಅಂದರೆ ಸುಸೈಡಲ್ ಅಟ್ಯಾಕ್ (Sucidal Attack) ನಡೆಸುತ್ತದೆ. ಲಿಬಿಯಾದ ಸರ್ಕಾರಿ ಸೇನೆ ಹಾಗೂ ಖಾಲಿಫಾ ಹಫ್ತಾರ್ ನ ಲಿಬಿಯನ್ ನ್ಯಾಷನಲ್ ಆರ್ಮಿ ನಡುವೆ ನಡೆದ ಯುದ್ಧದಲ್ಲಿ ಹಲ್ಲೆ ನಡೆದಿದೆ.

5 /5

5. ಕಮಾಂಡರ್ ನನ್ನೇ ಹತ್ಯೆಗೈದ ರೋಬೋಟ್ - ದಿ ಸ್ಟಾರ್ ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಈ ರೋಬೋಟ್ ಮೊದಲೇ ನಿರ್ಧರಿಸಲಾಗಿರುವ ಬೇಟೆಯನ್ನು ತಾನೇ ಹುಡುಕಿ ಅದರ  ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿದೆ. ಡ್ರೋನ್ ಹತ್ಯೆಗೈದಿರುವ ವ್ಯಕ್ತಿ ಓರ್ವ ಮಿಲಿಟರಿ ಕಮಾಂಡರ್ ಆಗಿದ್ದು, ಮಿಲಿಟರಿಯಲ್ಲಿ ಮಹತ್ವದ ಸ್ಥಾನ ಹೊಂದಿದ್ದ.  2020ರಲ್ಲಿ UN ನಲ್ಲಿ ನಡೆದ ಒಂದು ಡಿಬೇಟ್ ನಲ್ಲಿ, 30 ಕ್ಕೂ ಹೆಚ್ಚು ದೇಶಗಳು ಶಸ್ತ್ರಾಸ್ತ್ರಗಳನ್ನು ಹೊಂದಿರುವ (lethal autonomous weapons) ರೋಬೋಟ್ ಗಳಿಗೆ ವಿರೋಧ ವ್ಯಕ್ತಪಡಿಸಿದ್ದವು.