ʼಮಹಾನಟಿʼ ಖ್ಯಾತಿಯ ಕೀರ್ತಿ ಸುರೇಶ್‌ ತಾಯಿ ಕನ್ನಡದ ಹೆಸರಾಂತ ನಟಿ... ಅಣ್ಣಾವ್ರ ತಂಗಿಯಾಗಿ ನಟಿಸಿ ಜನಪ್ರಿಯತೆ ಪಡೆದ ತಾರೆ! ಯಾರೆಂದು ಗೊತ್ತಾಯ್ತ?

Keerthy Suresh mother Menaka: ನಟಿ ಕೀರ್ತಿ ಸುರೇಶ್‌ ಯಾರಿಗೆ ಗೊತ್ತಿಲ್ಲ ಹೇಳಿ. ಅನೇಕ ಸಿನಿಮಾಗಳಲ್ಲಿ ನಟಿಸಿ ಮಿಂಚಿದ್ದರೂ ಸಹ, ʼಮಹಾನಟಿʼ ಸಿನಿಮಾದ ಅಭಿನಯಕ್ಕೆ ಇಡೀ ಚಿತ್ರರಂಗವೇ ಬೆರಗಾಗಿತ್ತು. ಅಷ್ಟೇ ಯಾಕೆ ಈ ಸಿನಿಮಾದಲ್ಲಿನ ಕೀರ್ತಿ ಸುರೇಶ್‌ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿಯೇ ಅರಸಿ ಬಂದಿತ್ತು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /8

ನಟಿ ಕೀರ್ತಿ ಸುರೇಶ್‌ ಯಾರಿಗೆ ಗೊತ್ತಿಲ್ಲ ಹೇಳಿ. ಅನೇಕ ಸಿನಿಮಾಗಳಲ್ಲಿ ನಟಿಸಿ ಮಿಂಚಿದ್ದರೂ ಸಹ, ʼಮಹಾನಟಿʼ ಸಿನಿಮಾದ ಅಭಿನಯಕ್ಕೆ ಇಡೀ ಚಿತ್ರರಂಗವೇ ಬೆರಗಾಗಿತ್ತು. ಅಷ್ಟೇ ಯಾಕೆ ಈ ಸಿನಿಮಾದಲ್ಲಿನ ಕೀರ್ತಿ ಸುರೇಶ್‌ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿಯೇ ಅರಸಿ ಬಂದಿತ್ತು.

2 /8

ಇನ್ನು ಕೀರ್ತಿ ಸುರೇಶ್‌ ಬೆಳೆದಿದ್ದೇ ಸಿನಿಜಗತ್ತಿನ ಕುಟುಂಬದಿಂದ. ಇವರ ತಂದೆ ತಾಯಿ ಇಬ್ಬರೂ ಸಹ ಸಿನಿರಂಗದಲ್ಲಿ ದುಡಿದವರು. ಈ ವರದಿಯಲ್ಲಿ ಕೀರ್ತಿ ತಂದೆ ತಾಯಿ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ.  

3 /8

ಪದ್ಮಾವತಿ ಅಯ್ಯಂಗಾರ್ ಕೀರ್ತಿ ಸುರೇಶ್‌ ಅವರ ತಾಯಿಯ ನಿಜನಾಮ. ಆದರೆ ʼಮೇನಕಾʼ ಎಂಬ ರಂಗನಾಮದಿಂದ ಹೆಚ್ಚು ಪರಿಚಿತರು.  

4 /8

ಭಾರತೀಯ ನಟಿ ಮತ್ತು ಚಲನಚಿತ್ರ ನಿರ್ಮಾಪಕಿ ಮೇನಕಾ, 1979 ರ ತಮಿಳು ಚಲನಚಿತ್ರ ʼರಾಮಯಿ ವಯಸುಕ್ಕು ವಂತುಟ್ಟಾʼದ ಮೂಲಕ ಪಾದಾರ್ಪಣೆ ಮಾಡಿದರು.  

5 /8

1980 ರಿಂದ 1987 ರವರೆಗಿನ ನಟನಾ ವೃತ್ತಿಜೀವನದಲ್ಲಿ, ಸುಮಾರು 125 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ಮೇನಕಾ, ಹೆಚ್ಚಾಗಿ ಅಭಿನಯಿಸಿದ್ದು ಮಲಯಾಳಂನಲ್ಲಿ. ಇನ್ನುಳಿದಂತೆ ಕೆಲವು ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.  

6 /8

ಅಂದಹಾಗೆ ಅವರು ಕನ್ನಡದ ಒಂದೇ ಒಂದು ಸಿನಿಮಾದಲ್ಲಿ ಅಭಿನಯಿಸಿದ್ದರೂ ಸಹ, ತಮ್ಮ ಮನೋಜ್ಞ ನಟನೆಯಿಂದ ಭಾರೀ ಪ್ರಶಂಸೆ ಗಳಿಸಿದ್ದ ಮೇನಕಾ. ಅಷ್ಟಕ್ಕೂ ಅವರು ನಟಿಸಿದ ಸಿನಿಮಾ ʼಸಮಯದ ಗೊಂಬೆʼ. ಇದರಲ್ಲಿ ಡಾ. ರಾಜ್‌ ಕುಮಾರ್‌ ಅವರ ತಂಗಿಯಾಗಿ ಅಭಿನಯಿಸಿದ್ದರು.  

7 /8

ಮೇನಕಾ ಕನ್ಯಾಕುಮಾರಿ ಜಿಲ್ಲೆಯ ನಾಗರ್‌ಕೋಯಿಲ್‌ʼನಲ್ಲಿ ತಮಿಳು ಅಯ್ಯಂಗಾರ್ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ರಾಜಗೋಪಾಲ್ ಮತ್ತು ಸರೋಜಾ ದಂಪತಿಯ ನಾಲ್ಕು ಮಕ್ಕಳಲ್ಲಿ ಮೇನಕಾ ಒಬ್ಬರೇ ಮಗಳು.  

8 /8

ಇನ್ನು 27 ಅಕ್ಟೋಬರ್ 1987 ರಂದು ಗುರುವಾಯೂರ್ ದೇವಸ್ಥಾನದಲ್ಲಿ ಚಲನಚಿತ್ರ ನಿರ್ಮಾಪಕ ಜಿ. ಸುರೇಶ್ ಕುಮಾರ್‌ ಜೊತೆ ಮೇನಕಾ ವಿವಾಹವಾದರು. ಇವರಿಗೆ ಇಬ್ಬರು ಹೆಣ್ಣುಮಕ್ಕಳು ರೇವತಿ ಮತ್ತು ಕೀರ್ತಿ ಸುರೇಶ್. ಕೀರ್ತಿ ಚಲನಚಿತ್ರ ನಟಿ ಮತ್ತು ರೇವತಿ ಸಹಾಯಕ ನಿರ್ದೇಶಕಿ.