ಮನೆಯಲ್ಲಿ ಈ ವಸ್ತುಗಳನ್ನಿಟ್ಟರೆ ಹಣದ ಕೊರತೆ ಎದುರಾಗುವುದೇ ಇಲ್ಲವಂತೆ..!

ನಿಮ್ಮ ಮನೆಯಲ್ಲಿ ಶಾಂತಿ, ಸುಖ ಸಮೃದ್ಧಿ ಸದಾ ನೆಲೆಯಾಗಿರಬೇಕೆಂದು ಬಯಸುವುದಾಧರೆ ವಾಸ್ತುವಿಗೆ ಸಂಬಂಧಪಟ್ಟ  ವಿಚಾರಗಳು ನಿಮಗೆ ತಿಳಿದಿರಬೇಕು..  

ನವದೆಹಲಿ: ವಾಸ್ತು ಶಾಸ್ತ್ರ  (Vastu Shastra) ಕೇವಲ  ಯಾವ ದಿಕ್ಕಿನಲ್ಲಿ ಯಾವ  ವಸ್ತುಗಳನ್ನು ಇಡಬೇಕು ಎಂಬುದನ್ನು ತಿಳಿಸುತ್ತದೆ ಎಂದೇ ಬಹಳಷ್ಟು ಜನ ಭಾವಿಸುತ್ತಾರೆ. ವಾಸ್ತು ದಿಕ್ಕನ್ನು ಸೂಚಿಸುವುದರ ಜೊತೆಗೆ ನಿತ್ಯ ಬದುಕಿನ ಹಲವಾರು ವಿಚಾರಗಳ ಬಗ್ಗೆ ತಿಳಿಸುತ್ತದೆ. ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾದ ವಿಷಯಗಳನ್ನು ಸರಿಯಾಗಿ ಅಳವಡಿಸಿಕೊಂಡರೆ, ಕೆಲಸಗಳಲ್ಲಿ ಪ್ರಗತಿ ಸಾಧಿಸಬಹುದು. ಮತ್ತೊಂದೆಡೆ, ವಾಸ್ತುವಿನ ನಿಯಮಗಳನ್ನು ಕಡೆಗಣಿಸಿದರೆ, ಆರ್ಥಿಕ ಸಂಕಷ್ಟ ಎದುರಾಗಬಹುದು. ಮನೆಯಲ್ಲಿ ಈ ವಸ್ತುಗಳನ್ನು ಇಟ್ಟುಕೊಂಡರೆ, ಮನೆಯಲ್ಲಿ ಪಾಸಿಟಿವ್ ಎನರ್ಜಿ (Positive energy) ನೆಲೆಯಾಗುವುದರೊಂದಿಗೆ  ಕಾರ್ಯಗಳಲ್ಲಿ ಪ್ರಗತಿಯಾಗುತ್ತದೆಯಂತೆ.. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಮನೆಯ ಉತ್ತರ ದಿಕ್ಕಿನಲ್ಲಿ ನೀರು ತುಂಬಿದ ಮಡಕೆಯನ್ನು ಇಟ್ಟರೆ ಯಾವತ್ತೂ ಹಣದ ಕೊರತೆ ಉಂಟಾಗುವುದೇ ಇಲ್ಲವಂತೆ. ಆದರೆ ನೆನಪಿರಲಿ ಮಡಕೆಯಲ್ಲಿ ಯಾವತ್ತೂ ನೀರು ತುಂಬಿರಬೇಕು. ನೀರು ಖಾಲಿಯಾಗಬಾರದು. 

2 /5

ನವಿಲು ಗರಿ ಎಂದರೆ ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯವಾದದ್ದು. ಅದನ್ನು ಮನೆಯಲ್ಲಿ ಇಡುವುದರಿಂದ ಸಕಾರಾತ್ಮಕ ಶಕ್ತಿ ನೆಲೆಸುತ್ತದೆಯಂತೆ. ಆದ್ದರಿಂದ ನೀವು ನಿಮ್ಮ ಪೂಜಾ ಮನೆಯಲ್ಲಿ ನವಿಲು ಗರಿಗಳನ್ನು ಇಟ್ಟರೆ ಸದಾ ಶುಭ ಫಲಗಳನ್ನೇ ನಿಡುತ್ತದೆಯಂತೆ. 

3 /5

 ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಲೋಹದಿಂದ ಮಾಡಿದ ಮೀನು ಅಥವಾ ಆಮೆಯನ್ನು ಇಡುವುದು ಕೂಡಾ ಅತ್ಯಂತ ಶುಭವಂತೆ. ಇದರಿಂದ ಮನೆಯ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತದೆಯಂತೆ.    

4 /5

ನಿಮ್ಮ ಪೂಜಾ ಮನೆಯಲ್ಲಿ ಗಣೇಶನ ಪೋಟೋ ಇದ್ದೇ ಇರುತ್ತದೆ. ಆದರೆ ನಿಮ್ಮ ಮನೆಯಲ್ಲಿ,  ಗಣಪತಿ ನೃತ್ಯ ಮಾಡುವ ವಿಗ್ರಹ ಅಥವಾ ಅಥವಾ ಫೋಟೋ ಇಟ್ಟರೆ, ಬಹಳ ಶುಭವಂತೆ. ಮನೆಯ ಪೂರ್ವ ಅಥವಾ ಉತ್ತರದ ಗೋಡೆಯ ಮೇಲೆ ಗಣೇಶ ನರ್ತಿಸುವ ಫೋಟೋವನ್ನು ಹಾಕಿದರೆ ಮನೆಯಲ್ಲಿ ಸುಖ ಸಮೃದ್ಧಿ ನೆಲೆಯಾಗುತ್ತದೆಯಂತೆ.   

5 /5

ವಾಸ್ತು ಶಾಸ್ತ್ರದಲ್ಲಿ, ಶ್ರೀಯಂತ್ರವನ್ನು ಸಹ ಬಹಳ ಶುಭವೆಂದು ಪರಿಗಣಿಸಲಾಗುತ್ತದೆ . ಮತ್ತು ಶ್ರೀಯಂತ್ರ ಅಂದರೆ ಲಕ್ಷ್ಮಿ ದೇವಿಗೆ ಬಹಳ ಷ್ಟವಂತೆ. ಮನೆಯಲ್ಲಿ ಶ್ರೀಯಂತ್ರವನ್ನು ಪೂಜಿಸುವುದರಿಂದ ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿ ಬರುತ್ತದೆ. ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಶ್ರೀಂತ್ರ ಸಹ ಸಹಾಯ ಮಾಡುತ್ತದೆಯಂತೆ.