Importance of voting: ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ನಾಳೆ ಅಂದರೆ ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ.
Karnataka Assembly Elections 2023: ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ನಾಳೆ ಅಂದರೆ ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ಅಧಿಕಾರದ ಗದ್ದುಗೆ ಏರಲು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಭರ್ಜರಿ ಕಸರತ್ತು ನಡೆಸುತ್ತಿದ್ದು, ಇನ್ನುಳಿದ ಪಕ್ಷಗಳ ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆ ನಡೆಸುತ್ತಿವೆ. ಮತದಾನದ ಮಹತ್ವವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಈ ಮೂಲಕ ತಮ್ಮ ಹಕ್ಕು ಚಲಾಯಿಸುವ ಮೂಲಕ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಮತದಾರ ಪ್ರಭುಗಳ ಕರ್ತವ್ಯವಾಗಿರುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಒಂದು ಮತದ ಮೇಲೆ ದೇಶದ ಮತ್ತು ರಾಜ್ಯದ ಅಭಿವೃದ್ಧಿಯ ಅಳಿವು ಉಳಿವು ನಿಂತಿರುತ್ತದೆ. ಹೀಗಾಗಿ ಎಚ್ಚರಿಂದ ಅಭ್ಯರ್ಥಿಗಳ ಬಗ್ಗೆ ತಿಳಿದುಕೊಂಡು ಹಕ್ಕು ಚಲಾಯಿಸಬೇಕು. ಹಣ-ಹೆಂಡದಂತಹ ಕ್ಷಣಿಕ ಸುಖಕ್ಕಾಗಿ ರಾಜ್ಯದ ಹಿತ ಮರೆತು ಮತವನ್ನು ಮಾರಿಕೊಳ್ಳಬೇಡಿ. ಕ್ಷೇತ್ರ ಹಾಗೂ ರಾಜ್ಯವನ್ನು ರಕ್ಷಿಸುವಂತಹ ಸಮರ್ಥ ನಾಯಕನಿಗೆ ಮತ ನೀಡುವ ಮೂಲಕ ಪ್ರಜಾಪ್ರಭುತ್ವ ಉಳಿಸಬೇಕು.
ನಿಮ್ಮ ದುರಾಸೆಯ ಮುಂದೆ ಉಳಿದಿರುವ ಅಲ್ಪಸ್ವಲ್ಪ ಮಹತ್ವವನ್ನು ಮರೆಮಾಡದಿರಿ. ಇರುವ ಆಯ್ಕೆಗಳಲ್ಲಿ ಸರಿಯಾದ್ದನ್ನು ಆಯ್ದುಕೊಂಡು ರಾಜ್ಯದ ಉನ್ನತಿಗೆ ನಿಮ್ಮ ಕೊಡುಗೆ ನೀಡಬೇಕು. ಹಣದ ಆಸೆಗಾಗಿ ನಿಮ್ಮ ಆತ್ಮಾಭಿಮಾನಕ್ಕೆ ಅಭ್ಯರ್ಥಿಯ ಹಿಂದಿರುವ ಶಕ್ತಿ ನೋಡದೆ ಅವರ ಅಭಿವೃದ್ಧಿ ಕೆಲಸಗಳನ್ನು ನೋಡಬೇಕು. ನಿಮಗೆ ಸೂಕ್ತ ಅಭ್ಯರ್ಥಿ ಅನ್ನಿಸಿದರೆ ಮಾತ್ರ ಅವರಿಗೆ ಮತ ನೀಡಬೇಕು. ಯಾವುದೇ ಕಾರಣಕ್ಕೂ ನಿಮ್ಮ ಮತ ಭ್ರಷ್ಟ ವ್ಯಕ್ತಿಗೆ ಹೋಗಬಾರದು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನವು ಸಾರ್ವಜನಿಕರ ದನಿ. ದೇಶದ ಮತ್ತು ರಾಜ್ಯ ಭದ್ರಬುನಾದಿಗಿರುವ ಅಸ್ತ್ರ. ನಿಮ್ಮ ಹಕ್ಕು ಸಾಂವಿಧಾನಿಕ ಕರ್ತವ್ಯ. ಮರೆಯದೆ ಮತ ಚಲಾಯಿಸಿ ಸದೃಢ ದೇಶ-ರಾಜ್ಯ ನಿರ್ಮಾಣಕ್ಕೆ ಕೊಡುಗೆ ನೀಡಿ. ಅರ್ಹ ಮತ್ತು ಜನಪರ ಪ್ರತಿನಿಧಿಗಳನ್ನು ಆಯ್ಕೆ ಮಾಡುವುದು ನಿಮ್ಮ ಕರ್ತವ್ಯ.
ಯಾವುದೇ ಆಮಿಷಕ್ಕೆ ಒಳಗಾಗದೆ ನಿರ್ಭಯವಾಗಿ, ಪಾರದರ್ಶಕವಾಗಿ ಮತ ಚಲಾಯಿಸುವುದರ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಬೇಕು. ನಿಮ್ಮ ಅಮೂಲ್ಯ ಮತವನ್ನು ಮಾರಿಕೊಳ್ಳದೆ ಅದರ ಪಾವಿತ್ರ್ಯಯನ್ನು ಕಾಪಾಡಬೇಕು. ದೇಶವನ್ನು ಭ್ರಷ್ಟಮುಕ್ತಗೊಳಿಸಲು ಉತ್ತಮ ಜನಪ್ರತಿನಿಧಿಗಳನ್ನು ಚುನಾಯಿಸುವುದು ಮತದಾರನ ಕರ್ತವ್ಯ.
ದೇಶ ಮತ್ತು ರಾಜ್ಯದ ಅಭಿವೃದ್ಧಿ ಮಟ್ಟವನ್ನು ಉತ್ತುಂಗ ಶಿಖರಕ್ಕೇರಿಸಲು ಕಡ್ಡಾಯವಾಗಿ ಮತದಾನ ಮಾಡಬೇಕು. ನಿಮ್ಮ ಅಮೂಲ್ಯ ಮತವನ್ನು ಸೂಕ್ತ ಅಭ್ಯರ್ಥಿ ನೀಡಿ ದೇಶ-ರಾಜ್ಯದ ಪ್ರಗತಿಗೆ ಶ್ರಮಿಸಬೇಕು. ಪ್ರತಿಯೊಬ್ಬರೂ ಮರೆಯದೆ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಘನತೆಯನ್ನು ಕಾಪಾಡಬೇಕು.