ಕ್ರಿಶ್ಚಿಯನ್ ವಧು ಆಗಿ ಕರೀನಾ ಕಪೂರ್ ಖಾನ್; ವೈರಲ್ ಆಯ್ತು ಫೋಟೋ!

  • Jul 26, 2018, 19:26 PM IST
1 /5

ಬಾಲಿವುಡ್ ನಟಿ ಕರೀನಾ ಕಪೂರ್ ಚಿತ್ರರಂಗಕ್ಕೆ ಬಂದು ಹಲವು ವರ್ಷಗಳೇ ಕಳೆದಿದೆ. ಸಾಕಷ್ಟು ಚಿತ್ರಗಳನ್ನು ಮಾಡಿ ಮದುವೆಯಾಗಿ, ಮಕ್ಕಳಾದರೂ ಕೂಡ ಇಂದಿಗೂ ಕರಿನಾಗೆ ಬಾಲಿವುಡ್ ನಲ್ಲಿ ಅಷ್ಟೇ ಬೇಡಿಕೆ ಇರುವ ನಟಿ. ಮಗ ತೈಮೂರ್ ಹುಟ್ಟಿದ ನಂತರ, 'ವೀರ್ ಡಿ ವೆಡ್ಡಿಂಗ್' ಚಿತ್ರದ ಮೂಲಕ ಮತ್ತೆ ಕರೀನಾ ದೊಡ್ಡ ಪರದೆ ಮೇಲೆ ಕಾಣಿಸಿಕೊಂಡಿದ್ದರು. ಈ ಚಿತ್ರದ ಕೆಲವು ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆ ಫೋಟೋದಲ್ಲಿ ಕರೀನಾ ಕ್ರಿಶ್ಚಿಯನ್ ವಧುವಿನ ಉಡುಗೆ ಧರಿಸಿ ಕಂಗೊಳಿಸುತ್ತಿದ್ದಾರೆ. 

2 /5

ಇವು ಕರೀನಾ ಕಪೂರ್ ಬಾಲ್ಯದ ಫೋಟೋಗಳು. ಇದರಲ್ಲಿಯೂ ಕರೀನಾ ಕ್ರಿಶ್ಚಿಯನ್ ವಧುವಿನಂತೆ ಬಟ್ಟೆ ತೊಟ್ಟಿದ್ದಾರೆ. ಯಾಕೆ ಅಂತ ಯೋಚಿಸುತ್ತಿದ್ದೀರಾ? ಇದು ಕರೀನಾ ಕ್ರಿಶ್ಚಿಯನ್ ವಧುವಿನ ಉಡುಗೆ ತೊಟ್ಟು ವಿವಿಧ ವೇಷಭೂಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಫೋಟೋ. ಬಾಲ್ಯದಲ್ಲಿ ಕರೀನಾ ತುಂಬಾ ಮುದ್ದಾಗಿ ಕಾಣುತ್ತಿದ್ದರು. ಇದೀಗ ಕರೀನಾ ಅವರ ಥ್ರೋ ಬ್ಯಾಕ್ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅವರ ಅಭಿಮಾನಿಗಳು ತುಂಬಾನೇ ಇಷ್ಟಪಡುತ್ತಿದ್ದಾರೆ.   

3 /5

ಈ ವರ್ಷ ಕರೀನಾ 'ವೀರ್ ದಿ ವೆಡ್ಡಿಂಗ್' ಚಿತ್ರದೊಂದಿಗೆ ಮತ್ತೊಮ್ಮೆ ಬೆಳ್ಳಿ ಪರದೆಯಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಸೋನಂ ಕಪೂರ್, ಸ್ವರ ಭಾಸ್ಕರ್ ಮತ್ತು ಶಿಖಾ ತಲಾಸನಿಯಾ ಕೂಡ ಅಭಿನಯಿಸಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ಸಾಕಷ್ಟು ಹಣ ಗಳಿಸಿರುವ ಈ ಚಿತ್ರ ಸೂಪರ್ ಹಿಟ್ ಆಗಿದೆ. 

4 /5

ಚಿತ್ರ ವಿಮರ್ಶಕ ಮತ್ತು ವಿಶ್ಲೇಷಕ ತರುಣ್ ಆದರ್ಶ್ ಪ್ರಕಾರ, 'ವೀರ್ ದಿ ವೆಡ್ಡಿಂಗ್' ಚಿತ್ರ ಈ ವರ್ಷದ ಟಾಪ್ ವೀಕೆಂಡ್ ಚಿತ್ರಗಳಲ್ಲಿ 5 ನೇ ದೊಡ್ಡ ಚಿತ್ರವಾಗಿ ಹೊರಹೊಮ್ಮಿದೆ. ಈ ವರ್ಷ ರಿಲೀಸ್ ಆದ ಪದ್ಮಾವತ್, ಬಾಗೀ 2, ರೇಡ್ ಮತ್ತು ಪ್ಯಾಡ್ ಮ್ಯಾನ್ ಸಿನಿಮಾಗಳ ನಂತರ ಈ ಚಿತ್ರ ಓಪನಿಂಗ್ ವೀಕೆಂಡ್ ಸಿನಿಮಾಗಳಲ್ಲಿ ಹೆಚ್ಚು ಗಳಿಸಿದ 5 ಚಿತ್ರವಾಗಿದೆ.

5 /5

ಮತ್ತೊಂದು ಮುಖ್ಯವಾದ ವಿಚಾರವೆಂದರೆ ಈಗ ಕರೀನಾ, ಕರಣ್ ಜೋಹರ್ ಅವರ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಈ ಚಿತ್ರವನ್ನು ರಾಜ್ ಮೆಹ್ತಾ ನಿರ್ದೇಶಿಸಲಿದ್ದಾರೆ. ಈ ಚಿತ್ರದಲ್ಲಿ ಕರೀನಾ, ನಟ ಅಕ್ಷಯ್ ಕುಮಾರ್ ಜೊತೆ ರೊಮ್ಯಾಂಟಿಕ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. 2019ರಲ್ಲಿ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. (ಫೋಟೋ ಕ್ರೆಡಿಟ್: @ ಟ್ವಿಟರ್)