Jupiter Retrograde 2024: ಶೀಘ್ರದಲ್ಲಿಯೇ ವೃಷಭ ರಾಶಿಯಲ್ಲಿ ಗುರುವಿನ ವಕ್ರನಡೆ ಆರಂಭ, 2025ರವರೆಗೆ ಈ ಜನರಿಗೆ ಧನಕುಬೇರ ನಿಧಿ ಪ್ರಾಪ್ತಿ!

Jupiter Retrograde 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ದೇವಗುರು ಎಂದೇ ಕರೆಯಲಾಗುವ ಬೃಹಸ್ಪತಿ ಶೀಘ್ರದಲ್ಲಿಯೇ ತನ್ನ ವಕ್ರನಡೆಯನ್ನು ಅನುಸರಿಸಲಿದ್ದು, ಕೆಲ ರಾಶಿಗಳ ಜನರಿಗೆ ವಿಶೇಷ ಲಾಭಗಳನ್ನು ಕರುಣಿಸಲಿದ್ದಾನೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ, (Spiritual News In Kannada)
 

ಬೆಂಗಳೂರು: ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಗುರುವಿನ ರಾಶಿ ಪರಿವರ್ತನೆಗೆ ವಿಶೇಷ ಮಹತ್ವ ಕಲ್ಪಿಸಲಾಗಿದೆ. ಏಕೆಂದರೆ ಬೃಹಸ್ಪತಿ ಒಂದು ರಾಶಿಯಲ್ಲಿ ಸುದೀರ್ಘ ಒಂದು ವರ್ಷ ವಿರಾಜಮಾನನಾಗುತ್ತಾನೆ. ಪ್ರಸ್ತುತ ಗುರು ಮೇಷ ರಾಶಿಯಲ್ಲಿ ವಿರಾಜಮಾನನಾಗಿದ್ದು, ಮೇ 1, 2024 ರಂದು ವೃಷಭ ರಾಶಿಗೆ ನೇರನಡೆಯ ಮೂಲಕ ಪ್ರವೇಶಿಸಲಿದ್ದಾನೆ. ಅಕ್ಟೋಬರ್ 9, 2024 ರಂದು ಬೆಳಗ್ಗೆ 10ಗಂಟೆ 1 ನಿಮಿಷಕ್ಕೆ ಗುರು ವೃಷಭ ರಾಶಿಯಲ್ಲಿ ತನ್ನ ವಕ್ರನಡೆ ಅನುಸರಿಸಲಿದ್ದಾನೆ. ಅಷ್ಟೇ ಅಲ್ಲ ಫೆಬ್ರುವರಿ 4, 2025ರಂದು ಮದ್ಯಾಹ್ನ 1 ಗಂಟೆ 46 ನಿಮಿಷಕ್ಕೆ ನೆರನಡೆ ವೃಷಭ ರಾಶಿಯಲ್ಲಿಯೇ ನೆರನಡೆ ಅನುಸರಿಸಲಿದ್ದಾನೆ. ಗುರುವಿನ ವಕ್ರ ನಡೆ ಕೆಲ ರಾಶಿಗಳ ಜನರಿಗೆ ಬಂಪರ್ ಲಾಭ ನೀಡಲಿದೆ. ವೃಷಭ ರಾಶಿಯಲ್ಲಿ ಗುರುವಿನ ವಕ್ರನಡೆ ಯಾರಿಗೆ ಲಾಭ ನೀಡಲಿದೆ ತಿಳಿದುಕೊಳ್ಳೋಣ ಬನ್ನಿ, (Spiritual News In Kannada)

 

ಇದನ್ನೂ ಓದಿ-Budh Margi 2024: ಏಪ್ರಿಲ್ 2ರವರೆಗೆ ಈ ಜನರಿಗೆ ಅಪಾರ ಧನಸಂಪತ್ತು ಕರುಣಿಸಲಿದ್ದಾನೆ ಬುದ್ಧಿದಾತ ಬುಧ, ಭಾಗ್ಯ ಚಿನ್ನದಂತೆ ಹೊಳೆಯಲಿದೆ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

Jupiter Retrograde 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ದೇವಗುರು ಎಂದೇ ಕರೆಯಲಾಗುವ ಬೃಹಸ್ಪತಿ ಶೀಘ್ರದಲ್ಲಿಯೇ ತನ್ನ ವಕ್ರನಡೆಯನ್ನು ಅನುಸರಿಸಲಿದ್ದು, ಕೆಲ ರಾಶಿಗಳ ಜನರಿಗೆ ವಿಶೇಷ ಲಾಭಗಳನ್ನು ಕರುಣಿಸಲಿದ್ದಾನೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ, (Spiritual News In Kannada)  

2 /5

ಕರ್ಕ ರಾಶಿ: ಗುರು ನಿಮ್ಮ ಜಾತಕದ ಏಕಾದಶ ಭಾವದಲ್ಲಿ ವಕ್ರನಡೆ ಅನುಸರಿಸಲಿದ್ದಾನೆ. ಅಷ್ಟೇ ಅಲ್ಲ ಆತ ನಿಮ್ಮ ಕುಂಡಲಿಯ ನವಮ ಹಾಗೂ ಶಷ್ಟಮ ಭಾವಕ್ಕೆ ಅಧಿಪತಿಯಾಗಿದ್ದಾನೆ. ಇದರಿಂದ ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ದೀರ್ಘಾವಧಿಯಿಂದ ನಿಂತುಹೋದ ಕೆಲಸಗಳು ಪೂರ್ಣಗೊಳ್ಳಲಿವೆ. ಮಹತ್ವಾಕಾಂಕ್ಷೆ ಕೂಡ ಈಡೇರಲಿದೆ. ವ್ಯಾಪಾರದಲ್ಲಿ ಈ ಅವಧಿಯಲ್ಲಿ ಹೆಚ್ಚು ಲಾಭ ಸಿಗಲಿದೆ. ಧಾರ್ಮಿಕ ಕಾರ್ಯಗಳತ್ತ ನಿಮ್ಮ ಒಲವು ಹೆಚ್ಚಾಗಲಿದೆ. ಇದಲ್ಲದೆ ಈ ಕೆಲಸ ಕಾರ್ಯಗಳಲ್ಲಿ ನೀವು ಅಧಿಕ ಹಣವನ್ನು ವೆಚ್ಚ ಮಾಡುವಿರಿ. ಆದರೆ ವರ್ಷಾಂತ್ಯದಲ್ಲಿ ನಿಮಗೆ ಅಪಾರ ಧನಲಾಭ ಉಂಟಾಗಲಿದೆ.   

3 /5

ವೃಶ್ಚಿಕ ರಾಶಿ: ನಿಮ್ಮ ಗೋಚರ ಜಾತಕದ ಸಪ್ತಮ ಭಾವದಲ್ಲಿ ಗುರು ವಕ್ರನಡೆ ಅನುಸರಿಸಲಿದ್ದಾನೆ. ಇದರಿಂದ ವ್ಯಾಪಾರದಲ್ಲಿ ಉನ್ನತಿಯ ಯೋಗ ರೂಪುಗೊಳ್ಳುತ್ತಿದೆ. ಆದರೆ ಮುಂಜಾಗ್ರತೆವಹಿಸಿ. ಕಾರಣ ಸ್ವಲ್ಪ ಮೈಮರೆತರೂ ಕೂಡ ನಿಮಗೆ ಹಾನಿಯಾಗುವ ಸಾಧ್ಯತೆ ಇದೆ. ಬಿಸ್ನೆಸ್ ನಲ್ಲಿ ಹಣ ಹೂಡಿಕೆ ಕೂಡ ನಿಮಗೆ ಲಾಭವನ್ನು ತಂದು ಕೊಡಲಿದೆ. ಏಕೆಂದರೆ ಮುಂಬರುವ ದಿನಗಳಲ್ಲಿ ಇದು ನಿಮಗೆ ಅಪಾರ ಧನಲಾಭ ನೀಡಲಿದೆ. ಬುದ್ಧಿಯ ಬಲದಿಂದ ನೀವು ನಿಮ್ಮ ಬಿಸ್ನೆಸ್ ನಲ್ಲಿ ಅಪಾರ ಯಶಸ್ಸು ಸಂಪಾದಿಸುವಿರಿ. ಏಕೆಂದರೆ ವಕ್ರಿ ಅವಸ್ಥೆಯ ಗುರು ನಿಮಗೆ ಕೆಲಸ ಕಾರ್ಯಗಳಲ್ಲಿ ಅಪಾರ ಯಶಸ್ಸು ಕರುಣಿಸಲಿದ್ದಾನೆ. ಆರೋಗ್ಯದ ಬಗ್ಗೆ ಕಾಳಜಿವಹಿಸಿ.   

4 /5

ಧನು ರಾಶಿ: ಗುರುವಿನ ವಕ್ರನಡೆ ನಿಮ್ಮ ಗೋಚರ ಜಾತಕದ ಸಪ್ತಮ ಭಾವದಲ್ಲಿ ಇರಲಿದೆ. ಹೀಗಿರುವಾಗ ನಿಮಗೆ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ದೀರ್ಘಾವಧಿಯಿಂದ ನಿಂತುಹೋದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ. ಆದರೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಸ್ವಲ್ಪ ಎಚ್ಚರಿಕೆವಹಿಸುವ ಅವಶ್ಯಕತೆ ಇದೆ. ಕುಟುಂಬ ಸದಸ್ಯರ ಜೊತೆಗೆ ಉತ್ತಮ ಕಾಲ ಕಳೆಯುವಿರಿ. ಇದರ ಜೊತೆಗೆ ಜೀವನದಲ್ಲಿನ ಎಲ್ಲಾ ಸಂಕಷ್ಟಗಳು ದೂರಾಗಲಿವೆ. ಬಿಸ್ನೆಸ್ ಕುರಿತು ಹೇಳುವುದಾದರೆ, ದೀರ್ಘಾವಧಿಯಿಂದ ನೆನೆಗುದಿಗೆ ಬಿದ್ದ ಒಪ್ಪಂದಗಳು ಪೂರ್ಣಗೊಂಡು, ಅದರ ಲಾಭ ನಿಮಗೆ ಸಿಗಲಿದೆ. 

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)