ಮೇಷ ರಾಶಿಯಲ್ಲಿ ಗಜಕೇಸರಿ ರಾಜಯೋಗ ರಚನೆ, ಧನಲಕ್ಷ್ಮಿ ಕೃಪೆಯಿಂದ ಈ ರಾಶಿಗಳ ಜನರಿಗೆ ಭಾರಿ ಧನಲಾಭ!

Jupiter Moon Conjunction 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಚಂದ್ರನ ಮೇಷ ರಾಶಿ ಗೋಚರದಿಂದ ಗಜಕೇಸರಿ ರಾಜಯೋಗ ರೂಪುಗೊಳ್ಳುತ್ತಿದೆ. ಈ ರಾಜಯೋಗ ಕೆಲ ರಾಶಿಗಳ ಜನರ ಪಾಲಿಗೆ ತುಂಬಾ ವಿಶೇಷವಾಗಿರಲಿದ್ದು, ಈ ಜನರ ಜೀವನದಲ್ಲಿ ಹಣದ ಹೊಳೆಯೇ ಹರಿಯಲಿದೆ. (Spiritual News In Kannada)
 

ಬೆಂಗಳೂರು: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಚಂದ್ರ ಅತ್ಯಂತ ವೇಗವಾಗಿ ಚಲಿಸುವ ಗ್ರಹವಾಗಿದೆ. ಚಂದ್ರ ಎರಡೂವರೆ ದಿನಗಳಿಗೊಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತಾನೆ, ಹೀಗಿರುವಾಗ ಯಾವುದಾದರೊಂದು ಗ್ರಹಗಳ ಜೊತೆಗೆ ಆತನ ಮೈತ್ರಿ ನೆರವೇರುತ್ತಲೇ ಇರುತ್ತದೆ ಮತ್ತು ಶುಭ ಅಶುಭ ಯೋಗಗಳು ಕೂಡ ನಿರ್ಮಾಣಗೊಳ್ಳುತ್ತವೆ. ಪ್ರಸ್ತುತ ಮೇಷ ರಾಶಿಯಲ್ಲಿ ಗುರು ಹಾಗೂ ಚಂದ್ರರ ಮೈತ್ರಿ ರಚನೆಯಾಗುತ್ತಿದ್ದು, ಈ ಮೈತ್ರಿಯಿಂದ ಅಲ್ಲಿ ಗಜಕೇಸರಿ ರಾಜಯೋಗ ರಚನೆಯಾಗುತ್ತಿದೆ. ಈ ಯೋಗ ಯಾರಿಗೆ ಅದೃಷ್ಟ ತರಲಿದೆ ಬನ್ನಿ ತಿಳಿದುಕೊಳ್ಳೋಣ, (Spiritual News In Kannada)

 

ಇದನ್ನೂ ಓದಿ-ಹೊಸ ವರ್ಷಾರಂಭದಲ್ಲಿಯೇ ಶತ್ರು ರಾಹುವಿನ ಜೊತೆ ಸೂರ್ಯನ ಮೈತ್ರಿ, ಈ ಜನರಿಗೆ ಭಾಗ್ಯೋದಯ-ಉನ್ನತಿಯ ಯೋಗ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /8

ವೈದಿಕ ಪಂಚಾಗದ ಪ್ರಕಾರ  ಡಿಸೆಂಬರ್ 21, 2023 ರಂದು ರಾತ್ರಿ 10ಗಂಟೆ 9 ನಿಮಿಷಕ್ಕೆ ಚಂದ್ರ ಮೇಷ ರಾಶಿಗೆ ಪ್ರವೇಶಿಸಿದ್ದಾನೆ. ಡಿಸೆಂಬರ 23, 2023ರವರೆಗೆ ಆತನ ಮೇಷ ರಾಶಿಯಲ್ಲಿಯೇ ಇರಲಿದ್ದಾನೆ. ಆದರೆ, ಮೇಷ ರಾಶಿಯಲ್ಲಿ ಈಗಾಗಲೇ ಗುರು ಇರುವ ಕಾರಣ ಅಲ್ಲಿ ಇಬ್ಬರ ಮೈತ್ರಿಯಿಂದ ಗಜಕೇಸರಿ ರಾಜಯೋಗ ರೂಪುಗೊಳ್ಳುತ್ತದೆ. ಈ ರಾಜಯೋಗವನ್ನು ಅತ್ಯಂತ ಶುಭ ಯೋಗ ಎಂದು ಭಾವಿಸಲಾಗುತ್ತದೆ. ಈ ರಾಜಯೋಗ ರಚನೆಯಿಂದ ವ್ಯಕ್ತಿಯ ಜೀವನದಲ್ಲಿ ಸಾಕಷ್ಟು ಖುಷಿಗಳ ಆಗಮನವಾಗುತ್ತವೆ. ಗಜಕೇಸರಿ ಯೋಗ ನಿರ್ಮಾಣದಿಂದ ಯಾರಿಗೆ ಲಾಭ ಸಿಗಲಿದೆ ಬನ್ನಿ ತಿಳಿದುಕೊಳ್ಳೋಣ,   

2 /8

ಮೇಷ ರಾಶಿ: ಚಂದ್ರ-ಗುರುವಿನ ಮೈತ್ರಿಯಿಂದ ನಿಮ್ಮ ರಾಶಿಯಲ್ಲಿಯೇ ಈ ಗಜಕೇಸರಿ ಯೋಗ ರಚನೆಯಾಗುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ವ್ಯಕ್ತಿತ್ವದಲಿ ಹೊಸ ಆಕರ್ಷಣೆ ಇರಲಿದೆ.ಇದಲ್ಲದೆ ನಿಮ್ಮ ಘನತ-ಗೌರವ ಪ್ರತಿಷ್ಠೆ ಕೂಡ ಹೆಚ್ಚಾಗಲಿದೆ. ನಿಮ್ಮ ಎಲ್ಲಾ ಆಸೆ ಆಕಾಂಕ್ಷೆಗಳು ಈಡೇರಲಿವೆ. ನೌಕರವರ್ಗದ ಜನರಿಗೆ ಹೆಚ್ಚುವರಿ ಆದಾಯದ ಮೂಲಗಳು ನಿರ್ಮಾಣಗೊಳ್ಳಲಿವೆ. ಅರ್ಥಾತ್ ವರ್ಷದ ಕೊನೆಯ ತಿಂಗಳು ಆರ್ಥಿಕವಾಗಿ ನಿಮ್ಮ ಪಾಲಿಗೆ ಅತ್ಯುತ್ತಮ ಸಾಬೀತಾಗಲಿದೆ. ಈ ರಾಜಯೋಗದ ದೃಷ್ಟಿ ನಿಮ್ಮ ಜಾತಕದ ಸಪ್ತಮ ಭಾವದಲ್ಲಿರುವ ಕಾರಣ ವಿವಾಹಿತರ ವೈವಾಹಿಕ ಜೀವನ ಸಾಕಷ್ಟು ಖುಷಿಗಳಿಂದ ಕೂಡಿರಲಿದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾವನೆ ಸಿಗುವ ಸಾಧ್ಯತೆ ಇದೆ.   

3 /8

ಸಿಂಹ ರಾಶಿ: ಗಜಕೇಸರಿ ರಾಜಯೋಗ ನಿಮ್ಮ ಪಾಲಿಗೂ ಕೂಡ ಸಾಕಷ್ಟು ಶುಭವಾಗಿರಲಿದೆ. ಏಕೆಂದರೆ ಇದು ನಿಮ್ಮ ಗೋಚರ ಜಾತಕದ ನವಮಭಾವದಲ್ಲಿ ರೂಪುಗೊಳ್ಳಲಿದೆ. ಇದರಿಂದ ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ನೀವು ಅಂದುಕೊಂಡ ಎಲ್ಲಾ ಯೋಜನೆಗಳು ಪೂರ್ಣಗೊಳ್ಳಲಿವೆ, ಕೆಲಸ ಕಾರ್ಯದ ನಿಮಿತ್ತ ಯಾತ್ರೆ ಸಂಭವಿಸುವ ಸಾಧ್ಯತೆ ಇದೆ. ರಾಜಕೀಯ ರಂಗಕ್ಕೆ ಸಂಬಂಧಿಸಿದ ಜನರಿಗೆ ಈ ತಿಂಗಳು ಅತ್ಯಂತ ಶುಭವಾಗಿರಲಿದೆ. ದೀರ್ಘ ಕಾಲದಿಂದ ನೌಕರಿ ಬದಲಾಯಿಸುವ ಯೋಚನೆಯಲ್ಲಿರುವವರಿಗೆ ಈ ತಿಂಗಳು ಉತ್ತಮ ಅವಕಾಶಗಳು ಲಭಿಸಲಿವೆ. ನಿಮ್ಮ ರಾಶಿಗೆ ಸೂರ್ಯ ಅಧಿಪತಿ ಮತ್ತು ಸೂರ್ಯ ಚಂದ್ರನ ನಡುವೆ ಮೈತ್ರಿ ಭಾವದ ಸಂಬಂಧವಿದೆ. ಹೀಗಾಗಿ ಈ ರಾಜಯೋಗ ನಿಮ್ಮ ಪಾಲಿಗೆ ಸಾಕಷ್ಟು ಅನುಕೂಲಕರ ಸಾಬೀತಾಗಲಿದೆ.   

4 /8

ಧನು ರಾಶಿ: ಗಜಕೇಸರಿ ರಾಜಯೋಗ ನಿಮ್ಮ ಪಾಲಿಗೆ ವರದಾನ ಸಾಬೀತಾಗಲಿದೆ. ನಿಮ್ಮ ರಾಶಿಗೂ ಕೂಡ ಗುರು ಅಧಿಪತಿಯಾಗಿದ್ದಾನೆ ಮತ್ತು ಆತ ಚಂದ್ರನ ಜೊತೆಗೆ ಸ್ನೇಹಭಾವದ ಸಂಬಂಧ ಹೊಂದಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಮಕ್ಕಳಿಗೆ ಸಂಬಂಧಿಸಿದ ಶುಭ ಸಮಾಚಾರ ಪ್ರಾಪ್ತಿಯಾಗಲಿದೆ. ಅರ್ಥಾತ್ ಅವರ ವಿವಾಹ ನೆರವೇರುವ ಅಥವಾ ಅವರಿಗೆ ನೌಕರಿ ಸಿಗುವ ಸಾಧ್ಯತೆ ಇದೆ. ಪ್ರೇಮ ಸಂಬಂಧಗಳಲ್ಲಿ ನಿಮಗೆ ಯಶಸ್ಸು ಸಿಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನೀವು ಅಸಂಭವ ಎನ್ನಲಾದ ಕೆಲಸಗಳಲ್ಲಿಯೂ ಕೂಡ ಯಶಸ್ಸನ್ನು ಕಾಣುವಿರಿ. ಈ ಅವಧಿಯಲ್ಲಿ ನಿಮಗೆ ಆಕಸ್ಮಿಕ ಧನಲಾಭವಾಗುವ ಎಲ್ಲಾ ಸಂಕೇತಗಳು ಗೋಚರಿಸುತ್ತಿವೆ.   

5 /8

ಮಿಥುನ ರಾಶಿ: ಗುರು-ಚಂದ್ರರ ಮೈತ್ರಿಯಿಂದ ನಿಮ್ಮ ಗೋಚರ ಜಾತಕದ ಆದಾಯ ಮತ್ತು ಲಾಭದ ಸ್ಥಾನದಲ್ಲಿ ಗಜಕೇಸರಿ ರಾಜಯೋಗ ರಚನೆಯಾಗುತಿದ್ದು, ಇದು ನಿಮ್ಮ ಆದಾಯವನ್ನು ಸಾಕಷ್ಟು ಪಟ್ಟು ಹೆಚ್ಚಿಸಲಿದೆ. ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಜಬರ್ದಸ್ತ್ ಹೆಚ್ಚಳವನ್ನು ನೀವು ನೋಡಬಹುದು ಮತ್ತು ನಿಮ್ಮ ಪಾಲಿಗೆ ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ. ವ್ಯಾಪಾರಿಗಳಿಗೆ ಉತ್ತಮ ಲಾಭ ಉಂಟಾಗಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಧನಲಾಭದ ಯೋಗಗಳು ನಿರ್ಮಾಣಗೊಳ್ಳುತ್ತಿವೆ. ಹೊಸ ನೌಕರಿ ಸಿಗುವ ಸಾಧ್ಯತೆ ಇದೆ. ಮಕ್ಕಳ ಉನ್ನತಿಯ ಎಲ್ಲಾ ಸಂಕೇತಗಳಿವೆ. ಹಳೆ ಹೂಡಿಕೆಗಳಿಂದ ನಿಮಗೆ ಲಾಭ ಸಿಗಲಿದೆ. ಇಂಪೋರ್ಟ್-ಎಕ್ಸ್ಪೋರ್ಟ್ ವ್ಯವಹಾರದಲ್ಲಿರುವವರಿಗೆ ಉತ್ತಮ ಲಾಭ ಸಿಗಲಿದೆ.   

6 /8

ಕರ್ಕ ರಾಶಿ: ಗುರು-ಚಂದ್ರರ ಮೈತ್ರಿಯ ಕಾರಣ ನಿಮ್ಮ ಗೋಚರ ಜಾತಕದ ದಶಮ ಭಾವದಲ್ಲಿ ಗಜಕೇಸರಿ ರಾಜಯೋಗ ನಿರ್ಮಾಣಗೊಳ್ಳುತ್ತಿದೆ. ಇದರಿಂದ ನಿಮ್ಮ ವೃತ್ತಿ-ವ್ಯಾಪಾರದಲ್ಲಿ ಅಪಾರ ಉನ್ನತಿ ಪ್ರಾಪ್ತಿಯಾಗಲಿದೆ. ಇದರ ಜೊತೆಗೆ ನಿಮ್ಮ ಭಾಗ್ಯದಲ್ಲಿಯೂ ಕೂಡ ಹೊಸ ಹೊಳಪು ಕಾಣಲು ನಿಮಗೆ ಸಿಗಲಿದೆ. ಧನ-ಸಂಪತ್ತಿನ ಕೊರತೆ ನಿವಾರಣೆಯಾಗಲಿದೆ. ನೌಕರಿಯಲ್ಲಿ ಹೊಸ ಪ್ರಸ್ತಾಪಗಳು ಸಿಗುವ ಸಾಧ್ಯತೆಗಳಿವೆ. ಘನತೆ-ಗೌರವ-ಪ್ರತಿಷ್ಠೆ ಹೆಚ್ಚಾಗುವುದರ ಜೊತೆಗೆ ಮನಸ್ಸು ಪ್ರಸನ್ನಚಿತ್ತದಿಂದ ಕೂಡಿರಲಿದೆ. ಮನೆಯಲ್ಲಿ ಮಂಗಳ ಅಥವಾ ಧಾರ್ಮಿಕ ಕಾರ್ಯ ನೆರವೇರಲಿದೆ.    

7 /8

ಕುಂಭ ರಾಶಿ: ಕುಂಭ ರಾಶಿಯ ಜಾತಕದವರಿಗೆ ಗಜಕೇಸರಿ ರಾಜಯೋಗ ಅತ್ಯಂತ ಶುಭ ಸಾಬೀತಾಗಲಿದೆ. ಹೀಗಾಗಿ ಈ ಅವಧಿಯಲ್ಲಿ ನೀವು ಯಾತ್ರೆ ಕೈಗೊಳ್ಳುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ ಆದರೆ, ದುಂದು ವೆಚ್ಚ ಮಾಡಬೇಡಿ. ನಿಮ್ಮ ಕ್ಷಮತೆ ಹಾಗೂ ಕೌಶಲ್ಯದಿಂದ ನೀವು ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸನು ಸಾಧಿಸುವಿರಿ. ಈ ಅವಧಿಯಲ್ಲಿ ನಿಮಗೆ ಭಾರಿ ಧನಲಾಭ ಯೋಗವಿದ್ದು, ಹೂಡಿಕೆಯಿಂದ ನಿಮಗೆ ಲಾಭ ಸಿಗಲಿದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾವನೆ ಸಿಗುವ ಸಾಧ್ಯತೆ ಇದೆ. ಅದೃಷ್ಟದ ಸಂಪೂರ್ಣ ಬೆಂಬಲ ನಿಮಗೆ ಪ್ರಾಪ್ತಿಯಾಗಲಿದೆ.   

8 /8

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)