iVOOMi Electric Scooter: ಗ್ರ್ಯಾಫೀನ್ ಅಯಾನ್ ಬ್ಯಾಟರಿ ಹೊಂದಿರುವ ಸ್ಕೂಟರ್ ಸಿಂಗಲ್ ಚಾರ್ಜ್ನಲ್ಲಿ 75+KM ಕ್ರಮಿಸುತ್ತದೆ. ಇದರ ಬೆಲೆ 54,999 ರೂ. ಇದೆ. ಲಿಥಿಯಂ ಅಯಾನ್ ಬ್ಯಾಟರಿಯ ಸ್ಕೂಟರ್ ಸಿಂಗಲ್ ಚಾರ್ಜ್ನಲ್ಲಿ 85+KM ಕ್ರಮಿಸುತ್ತದೆ. ಇದರ ಬೆಲೆಯು 64,999 ರೂ. ಇದೆ. ಕಂಪನಿಯು ಸ್ಕೂಟರ್ ಮೇಲೆ ೩ ವರ್ಷಗಳ ವಾರಂಟಿಯನ್ನು ನೀಡುತ್ತಿದೆ.
iVOOMi Electric Scooter: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತೈಯಾರಕ ಕಂಪನಿ iVOOMi ತನ್ನ ಹೊಸ S1 ಲೈಟ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಈ ಹೊಸ ಸ್ಕೂಟರ್ಗೆ ಗ್ರ್ಯಾಫೀನ್ ಅಯಾನ್ ಮತ್ತು ಲಿಥಿಯಂ ಅಯಾನ್ ಎಂಬ 2 ಬ್ಯಾಟರಿ ಆಯ್ಕೆಗಳಿದ್ದು, ಗ್ರ್ಯಾಫೀನ್ ಅಯಾನ್ ಬ್ಯಾಟರಿ ಪ್ಯಾಕ್ ಸಿಂಗಲ್ ಚಾರ್ಜ್ನಲ್ಲಿ 75+KM ಕ್ರಮಿಸುತ್ತದೆ. ಇದರ ಬೆಲೆ 54,999 ರೂ. ಇದೆ. ಇದರ ಇನ್ನೊಂದು ಬ್ಯಾಟರಿ ಪ್ಯಾಕ್ ಆದ ಲಿಥಿಯಂ ಅಯಾನ್ ಸಿಂಗಲ್ ಚಾರ್ಜ್ನಲ್ಲಿ 85+KM ಕ್ರಮಿಸುತ್ತದೆ. ಇದರ ಬೆಲೆಯು 64,999 ರೂ. ಇದೆ. ಕಂಪನಿಯು ಸ್ಕೂಟರ್ ಮೇಲೆ 3 ವರ್ಷಗಳ ವಾರಂಟಿಯನ್ನು ನೀಡುತ್ತಿದೆ. ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ಅನ್ನು ನೀವು 1,499ರಿಂದ ಪ್ರಾರಂಭವಾಗುವ EMI ಆಯ್ಕೆಯ ಮೂಲಕ ಖರೀದಿಸಬಹುದು. ಈಗಾಗಲೇ S1 ಲೈಟ್ ಸ್ಕೂಟರ್ಗಾಗಿ ಬುಕಿಂಗ್ ಆರಂಭವಾಗಿವೆ ಎಂದು ಕಂಪನಿ ತಿಳಿಸಿದೆ. ಈ ಸ್ಕೂಟರ್ನ ವೈಶಿಷ್ಟ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
VOOMi S1 ಲೈಟ್ ಎಲೆಕ್ಟ್ರಿಕ್ ಸ್ಕೂಟರ್ ಹೆಚ್ಚಿನ ಪರ್ಫಾಮೆನ್ಸ್ & ವಿಶ್ವಾಸಾರ್ಹತೆಗಾಗಿ ವಿನ್ಯಾಸಗೊಳಿಸಲಾದ ಸುಧಾರಿತ ಬ್ಯಾಟರಿ ತಂತ್ರಜ್ಞಾನ ಹೊಂದಿದೆ. ಇದು ಭಾರತದ ಹಗುರ ಚಾರ್ಜರ್ ಮತ್ತು ಜಲ-ನಿರೋಧಕ (Water-resistant) IP67 ಬ್ಯಾಟರಿಯೊಂದಿಗೆ ಬರುತ್ತದೆ. ಇದರ ಬ್ಯಾಟರಿಯನ್ನು ಬಳಕೆದಾರರು ಸುಲಭವಾಗಿ ತೆಗೆಯಲು ಮತ್ತು ಹಾಕುವ ಸೌಲಭ್ಯವನ್ನು ಒದಗಿಸಲಾಗಿದೆ. ಗ್ರ್ಯಾಫೀನ್ ಬ್ಯಾಟರಿ ಹೊಂದಿರುವ ರೂಪಾಂತರವು 45KM ಗರಿಷ್ಟ ವೇಗ ಹೊಂದಿದ್ದು, ಲಿಥಿಯಂ ರೂಪಾಂತರವು 55KM ಗರಿಷ್ಟ ವೇಗದಲ್ಲಿ ಚಲಿಸಬಲ್ಲದು. ಗ್ರ್ಯಾಫೀನ್ ರೂಪಾಂತರವು 3 ಗಂಟೆಗೆ ಶೇ.50ರಷ್ಟು ಚಾರ್ಜ್ ಆಗುತ್ತದೆ, ಅದೇ ರೀತಿ ಲಿಥಿಯಂ ರೂಪಾಂತರವು ಕೇವಲ 1.5 ಗಂಟೆಗಳಲ್ಲಿ ಶೇ.50ರಷ್ಟು & ಕೇವಲ 3 ಗಂಟೆಗಳಲ್ಲಿ ಪೂರ್ಣವಾಗಿ ಚಾರ್ಜ್ ಆಗುತ್ತದೆ.
ERW 1 ದರ್ಜೆಯ ಚಾಸಿಸ್ನೊಂದಿಗೆ ನಿರ್ಮಿಸಲಾದ ಈ ಸ್ಕೂಟರ್, 170mm ಗ್ರೌಂಡ್ ಕ್ಲಿಯರೆನ್ಸ್ನೊಂದಿಗೆ ಬರುತ್ತದೆ. S1 Lite 18 ಲೀಟರ್ ಅಂಡರ್ ಸೀಟ್ ಸ್ಟೋರೇಜ್, 12 & 10 ಇಂಚಿನ ವೀಲ್ಗಳು ಲಭ್ಯವಿದೆ. ಮೊಬೈಲ್ ಚಾರ್ಜಿಂಗ್ಗೆ USB ಪೋರ್ಟ್ (5V, 1A) ಮತ್ತು LED ಡಿಸ್ಪ್ಲೇ ಸ್ಪೀಡೋ ಮೀಟರ್ನಂತಹ ಅಗತ್ಯ ವೈಶಿಷ್ಟ್ಯಗಳನ್ನು ಇದು ಹೊಂದಿದೆ.
ಹೊಸ S1 ಲೈಟ್ ಎಲೆಕ್ಟ್ರಿಕ್ ಸ್ಕೂಟರ್ ಪರ್ಲ್ ವೈಟ್, ಮೂನ್ ಗ್ರೇ, ಸ್ಕಾರ್ಲೆಟ್ ರೆಡ್, ಮಿಡ್ನೈಟ್ ಬ್ಲೂ, ಟ್ರೂ ರೆಡ್ ಮತ್ತು ಪೀಕಾಕ್ ಬ್ಲೂ ಎಂಬ 6 ಬಣ್ಣಗಳಲ್ಲಿ ಲಭ್ಯವಿದೆ. ಕಂಪನಿಯು ತನ್ನ ಎಲೆಕ್ಟ್ರಿಕ್ ಸ್ಕೂಟರ್ ಮೂಲಕ ಗ್ರಾಹಕರಲ್ಲಿ ಸುರಕ್ಷತೆ ಮತ್ತು ಭರವಸೆ ಹೆಚ್ಚಿಸುವ ಗುರಿ ಹೊಂದಿದೆ.
iVOOMi ಕಂಪನಿಯು S1 ಸರಣಿಯಲ್ಲಿ ಈಗಾಗಲೇ S1 ಮತ್ತು S1 2.0 ಎಂಬ 2 ರೂಪಾಂತರ ನೀಡುತ್ತಿದೆ. ಇವುಗಳ ಬೆಲೆ 74,999 ರೂ.ನಿಂದ ಆರಂಭವಾಗುತ್ತದೆ. ಇವು ಹೆಚ್ಚಿನ ಸಾಮರ್ಥ್ಯದ Li-ion ಬ್ಯಾಟರಿ ಪ್ಯಾಕ್ಗಳನ್ನು ಒಳಗೊಂಡಿವೆ. ಈ ರೂಪಾಂತರಗಳು ಒಂದೇ ಚಾರ್ಜ್ನಲ್ಲಿ 120KMಗಿಂತ ಹೆಚ್ಚು ಮೈಲೇಜ್ ಹಾಗೂ 58KM ಗರಿಷ್ಠ ವೇಗದಲ್ಲಿ ಚಲಿಸುತ್ತವೆ ಎಂದು ಕಂಪನಿ ತಿಳಿಸಿದೆ.
ಗ್ರ್ಯಾಫೀನ್ ಅಯಾನ್ ಬ್ಯಾಟರಿ ಪ್ಯಾಕ್ ಸಿಂಗಲ್ ಚಾರ್ಜ್ನಲ್ಲಿ 75+KM ಕ್ರಮಿಸುತ್ತದೆ. ಇದರ ಬೆಲೆ 54,999 ರೂ. ಇದೆ. ಲಿಥಿಯಂ ಅಯಾನ್ ಬ್ಯಾಟರಿಯ ಸ್ಕೂಟರ್ ಸಿಂಗಲ್ ಚಾರ್ಜ್ನಲ್ಲಿ 85+KM ಕ್ರಮಿಸುತ್ತದೆ. ಇದರ ಬೆಲೆಯು 64,999 ರೂ. ಇದೆ. ಕಂಪನಿಯು ಸ್ಕೂಟರ್ ಮೇಲೆ ೩ ವರ್ಷಗಳ ವಾರಂಟಿ ನೀಡುತ್ತಿದೆ.