ಕೇವಲ 10,000 ರೂಗಳಿಗೆ Itel S24 ಬಿಡುಗಡೆ! ಇದರ ವೈಶಿಷ್ಟ್ಯಗಳ ಬಗ್ಗೆ ತಿಳಿಯಿರಿ

Itel S24 Specifications: ಈ ಸ್ಮಾರ್ಟ್‌ಫೋನ್ 8GB RAM ಮತ್ತು 128GB ಸ್ಟೋರೇಜ್‌ನೊಂದಿಗೆ ಕೇವಲ ಒಂದೇ ಕಾನ್ಫಿಗರೇಶನ್‌ನಲ್ಲಿ ಪರಿಚಯಿಸಲಾಗಿದೆ. ಕೇವಲ 9,999 ರೂ.ಗೆ ನೀವು ಈ ಫೋನ್ ಖರೀದಿಯಬಹುದು. ಈ ಫೋನ್ ಖರೀದಿಯ ಮೇಲೆ ಕಂಪನಿಯು ಐಟೆಲ್ ಐಕಾನ್ ಸ್ಮಾರ್ಟ್ ವಾಚ್‌ಅನ್ನು ಉಚಿತವಾಗಿ ನೀಡುತ್ತಿದೆ. 

Itel S24 launched in India: ಭಾರತೀಯ ಮಾರುಕಟ್ಟೆಗೆ ಐಟೆಲ್ ಕಂಪನಿಯು ತನ್ನ ಹೊಸ ಸ್ಮಾರ್ಟ್‌ಫೋನ್‌ಅನ್ನು ಅತಿ ಕಡಿಮೆ ಬೆಲೆಗೆ ಬಿಡುಗಡೆಗೊಳಿಸಿದೆ. Itel S24 ಹೆಸರಿನ ಈ ಸ್ಮಾರ್ಟ್‌ಫೋನ್‌ ಕೇವಲ 10,000 ರೂ.ಗೆ ಸಿಗಲಿದೆ. ಇದು ಅತ್ಯಂತ ಕಡಿಮೆ ಬೆಲೆಗೆ 108MP ಕ್ಯಾಮೆರಾ ಹೊಂದಿರುವ ಮೊದಲ ಸ್ಮಾರ್ಟ್‌ಫೋನ್ ಆಗಿದೆ. ಇದರ ಮತ್ತಷ್ಟು ವೈಶಿಷ್ಟ್ಯಗಳು ಮತ್ತು ಬೆಲೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ಈ ಸ್ಮಾರ್ಟ್‌ಫೋನ್ 8GB RAM ಮತ್ತು 128GB ಸ್ಟೋರೇಜ್‌ನೊಂದಿಗೆ ಕೇವಲ ಒಂದೇ ಕಾನ್ಫಿಗರೇಶನ್‌ನಲ್ಲಿ ಪರಿಚಯಿಸಲಾಗಿದೆ. ಕೇವಲ 9,999 ರೂ.ಗೆ ನೀವು ಈ ಫೋನ್ ಖರೀದಿಯಬಹುದು. ಈ ಫೋನ್ ಖರೀದಿಯ ಮೇಲೆ ಕಂಪನಿಯು ಐಟೆಲ್ ಐಕಾನ್ ಸ್ಮಾರ್ಟ್ ವಾಚ್‌ಅನ್ನು ಉಚಿತವಾಗಿ ನೀಡುತ್ತಿದೆ. ಇದಲ್ಲದೆ ಕಂಪನಿಯು‌ ಗ್ರಾಹಕರಿಗೆ ನೋ ಕಾಸ್ಟ್ EMI ಆಯ್ಕೆಗಳನ್ನು ಸಹ ನೀಡುತ್ತಿದೆ. ಇದು ಡ್ಯುಯಲ್ DTS ಸ್ಪೀಕರ್‌ಗಳು, ಮೀಡಿಯಾ ಟೆಕ್ ಹೆಲಿಯೊ ಪ್ರೊಸೆಸರ್ ಮತ್ತು ಇತರ ವೈಶಿಷ್ಟ್ಯಗಳು ಈ ಹ್ಯಾಂಡ್‌ಸೆಟ್‌ನಲ್ಲಿ ಲಭ್ಯವಿದೆ. ಆದರೆ ಈ ಸ್ಮಾರ್ಟ್ಫೋನ್ 4G ನೆಟ್ವರ್ಕ್ ಸಪೋರ್ಟ್ ಮಾಡುತ್ತದೆ. 

2 /5

Itel S24 ಸ್ಮಾರ್ಟ್‌ಫೋನ್ 6.6 ಇಂಚಿನ LCD ಪ್ಯಾನೆಲ್‌ನೊಂದಿಗೆ ಬರುತ್ತದೆ. ಇದು HD+ ರೆಸಲ್ಯೂಶನ್ ಮತ್ತು 90Hz ರಿಫ್ರೆಶ್ ರೇಟ್‌ಅನ್ನು ಬೆಂಬಲಿಸುತ್ತದೆ. Mali G52 GPU, 8GB LPDDR4x RAM ಮತ್ತು 128GB eMMC ಸ್ಟೋರೇಜ್ ಜೊತೆಗೆ ಮೈಕ್ರೊ SD ಕಾರ್ಡ್ ಮೂಲಕ ವಿಸ್ತರಿಸಬಹುದಾದ MediaTek Helio G91 ಮೂಲಕ ಹ್ಯಾಂಡ್‌ಸೆಟ್ ಕಾರ್ಯನಿರ್ವಹಿಸಲಿದೆ. 

3 /5

ಕ್ಯಾಮರಾ ವಿಭಾಗದಲ್ಲಿ 108MP ಪ್ರೈಮರಿ Samsung ISOCELL HM6 ಸೆನ್ಸಾರ್ ಮತ್ತು QVGA ಡೆಪ್ತ್ ಸೆನ್ಸಾರ್ ಒಳಗೊಂಡಿರುವ ಫೋನ್‌ನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಇದೆ. ಈ ಕ್ಯಾಮೆರಾ EIS (Electronic image stabilization) ಬೆಂಬಲಿಸುತ್ತದೆ. ಆದರೆ ಮುಂಭಾಗ ಮತ್ತು ಹಿಂಭಾಗದಲ್ಲಿ ಫ್ಲ್ಯಾಷ್‌ಲೈಟ್ ಒದಗಿಸಲಾಗಿದೆ. ಇದಲ್ಲದೆ ಫೋನ್‌ನ ಮುಂಭಾಗದಲ್ಲಿ 8MP ಸೆನ್ಸಾರ್ ಲಭ್ಯವಿದೆ.

4 /5

ಈ ಸ್ಮಾರ್ಟ್ಫೋನ್ 18W ಫಾಸ್ಟ್ ಚಾರ್ಜಿಂಗ್ ಬೆಂಬಲಿಸುವ 5000mAh ಬ್ಯಾಟರಿ ಹೊಂದಿದೆ. ಸಾಫ್ಟ್‌ವೇರ್‌ಗೆ ಸಂಬಂಧಿಸಿದಂತೆ ಇದು Android 13 ಆಧರಿಸಿದ itel OS 13.5ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದಲ್ಲದೇ ಸೋಶಿಯಲ್ ಟರ್ಬೊ, ಗೇಮ್ ಮೋಡ್, ಡ್ಯುಯಲ್ ಆಯಪ್, ವಿಡಿಯೋ ಅಸಿಸ್ಟೆಂಟ್, ಕಿಡ್ಸ್ ಮೋಡ್, ಪೀಕ್ ಪ್ರೂಫ್, ಸ್ಮಾರ್ಟ್ ಪ್ಯಾನೆಲ್ ಮತ್ತಿತರ ಫೀಚರ್‌ಗಳು ಇದರಲ್ಲಿ ಲಭ್ಯವಿವೆ.

5 /5

Itel S24 ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಹೊಂದಿದೆ. ಸಾಧನದಲ್ಲಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಸಿಮ್, 4G, WiFi 802.11 a/b/g/n, ಬ್ಲೂಟೂತ್ 5.0, GPS, GLONASS, ಗೆಲಿಲಿಯೋ, BDS, 3.5mm ಆಡಿಯೋ ಜ್ಯಾಕ್ ಮತ್ತು ಚಾರ್ಜಿಂಗ್‌ಗಾಗಿ USB 2.0 ಪೋರ್ಟ್ ಸೇರಿವೆ. ಇದರಲ್ಲಿ ಸ್ಟಿರಿಯೊ ಸ್ಪೀಕರ್ ಸೆಟಪ್ ಸಹ ಒದಗಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಶೀಘ್ರವೇ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.