ಇಶಾ ಅಂಬಾನಿ ಲೆಹಂಗದ ಮೇಲೆ ಸಂಸ್ಕೃತ ಶ್ಲೋಕ..ಇದರ ಅರ್ಥವೇನು ಗೊತ್ತಾ..?

Isha Ambani: ಅನಂತ್ ಅಂಬಾನಿ ಅವರ ವಿವಾಹ ಸಮಾರಂಭದ ಅಂಗವಾಗಿ ಶಿವಶಕ್ತಿ ಪೂಜೆ ನೆರವೇರಿಸಲಾಯಿತು. ಈ ಪೂಜೆಗೆ ಇಶಾ ಅಂಬಾನಿ ತೊಟ್ಟಿದ್ದ ಲೆಹೆಂಗಾ ಈಗ ಎಲ್ಲರ ಗಮನ ಸೆಳೆದಿದೆ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /7

ಅನಂತ್ ಅಂಬಾನಿ ಅವರ ವಿವಾಹ ಸಮಾರಂಭದ ಅಂಗವಾಗಿ ಶಿವಶಕ್ತಿ ಪೂಜೆ ನೆರವೇರಿಸಲಾಯಿತು. ಈ ಪೂಜೆಗೆ ಇಶಾ ಅಂಬಾನಿ ತೊಟ್ಟಿದ್ದ ಲೆಹೆಂಗಾ ಈಗ ಎಲ್ಲರ ಗಮನ ಸೆಳೆದಿದೆ.   

2 /7

ಅಂಬಾನಿ ಮನೆಯಲ್ಲಿ ನಡೆಯುತ್ತಿರುವ ವಿವಾಹ ಮಹೋತ್ಸವದ ಬಗ್ಗೆ ಇಡೀ ದೇಶವೇ ಮಾತನಾಡುತ್ತಿದೆ. ಈ ಸಂಭ್ರಮಾಚರಣೆಯಲ್ಲಿ ಎಲ್ಲರೂ ತೊಟ್ಟಿದ್ದ ಬಟ್ಟೆ, ಆಭರಣಗಳು ವಿಶೇಷ ಆಕರ್ಷಣೆಯಾಗಿದ್ದವು. ಅದರಲ್ಲೂ ಅಂಬಾನಿ ಮಗಳಾದ ಇಶಾ ಅಂಬಾನಿ ತೊಟ್ಟ ಒಂದೊಂದು ಉಡುಗೆಯೂ ಮನೆಮಾತಾದವು.  

3 /7

ಮದುವೆಗೂ ಮುನ್ನ ಮುಂಬೈನ ತಮ್ಮ ಐಷಾರಾಮಿ ನಿವಾಸ ಆಂಟಿಲಿಯಾದಲ್ಲಿ ಅಂಬಾನಿ ಕುಟುಂಬ ಆಯೋಜಿಸಿದ್ದ ಶಿವಶಕ್ತಿ ಪೂಜೆಯಲ್ಲಿ ಇಶಾ ಅಂಬಾನಿ ಧರಿಸಿದ್ದ ಲೆಹೆಂಗಾ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಸಂಪ್ರದಾಯದೊಂದಿಗೆ ಆಧುನಿಕತೆಯನ್ನು ಸಂಯೋಜಿಸುವ ವಿಶೇಷ ವಿನ್ಯಾಸದ ಲೆಹೆಂಗಾವನ್ನು ಇಶಾ ಧರಿಸಿದ್ದು ಎಲ್ಲರ ಕಣ್ಣು ಇಶಾ ಅವರ ಉಡುಗೆ ಮೇಲೆಯೇ ಇತ್ತು.  

4 /7

ಕರಕುಶಲ ಮತ್ತು ನೇಯ್ಗೆ ತಂತ್ರಗಳನ್ನು ಅನುಸರಿಸಿ ಇಶಾ ಅಂಬಾನಿ ಅವರ ಈ ಲೆಹೆಂಗಾವನ್ನು ವಿಶಿಷ್ಟ ರೀತಿಯಲ್ಲಿ ತಯಾರಿಸಲಾಗಿದೆ. ವೈದಿಕ ಮಂತ್ರಗಳನ್ನು ಸಹ ಸಾಂಪ್ರದಾಯಿಕ ರೀತಿಯಲ್ಲಿ ಈ ಲೆಹಂಗದ ಮೇಲೆ ಹಚ್ಚೆ ಹಾಕಲಾಗಿದೆ. ಲೆಹೆಂಗಾದ ಪ್ರತಿಯೊಂದು ಭಾಗವನ್ನು ಅದ್ಭುತ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ದೆಹಲಿ ಮೂಲದ ವಿಂಟೇಜ್ ಕೋ ಈ ಸಾಂಪ್ರದಾಯಿಕ ಲೆಹೆಂಗಾವನ್ನು ವಿನ್ಯಾಸಗೊಳಿಸಿದೆ. ಈ ಲೆಹೆಂಗಾವನ್ನು 'ಟ್ರೀ ಆಫ್ ಲೈಫ್' ಥೀಮ್‌ನೊಂದಿಗೆ ವಿನ್ಯಾಸಗೊಳಿಸಲಾಗಿದೆ.  

5 /7

ಈ ಲೆಹೆಂಗಾವನ್ನು ಸಾಂಸ್ಕೃತಿಕ, ಸಮಕಾಲೀನ ಮತ್ತು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ. ಸಂಕೀರ್ಣವಾದ ಟ್ರೀ ಆಫ್ ಲೈಫ್ ವಿನ್ಯಾಸದಲ್ಲಿ, ನಂದಿ ಕುಳಿತಿರುವ ಆಕೃತಿಗಳು, ಒಂದು ಬದಿಯಲ್ಲಿ ದೇವಾಲಯ ಮತ್ತು ಇನ್ನೊಂದೆಡೆ ಸಾಮರಸ್ಯ ಮತ್ತು ಸಮತೋಲನವನ್ನು ಸಂಕೇತಿಸುವ ಪಕ್ಷಿಗಳು ಇವೆ. ಕಲಾತ್ಮಕ ಅಂಶಗಳು, ಹೊಲಿಗೆ ತಂತ್ರಗಳು, ವಿಂಟೇಜ್ ವಿನ್ಯಾಸದೊಂದಿಗೆ ಬಟ್ಟೆಯನ್ನು ಆಯ್ಕೆ ಮಾಡಲಾಗುತ್ತದೆ. ಇದನ್ನು ಪ್ರಾಚೀನ ನಾಣ್ಯಗಳು ಮತ್ತು ವಿಂಟೇಜ್ ಆಭರಣಗಳೊಂದಿಗೆ ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ.  

6 /7

ಈ ಲೆಹೆಂಗಾದ ಅಂಚಿನಲ್ಲಿ "ಕರ್ಮಣ್ಯೇ ವಾಧಿಕರ್ತೆ, ಮಾ ಫಲೇಷು ಕದಾ ಚನ" ಎಂಬ ಸ್ಲೋಕಾವನ್ನು ಕಾಣಬಹುದು. ಇದರ ಅರ್ಥ "ನೀವು ಏನನ್ನಾದರೂ ಮಾಡಲು ಹಕ್ಕನ್ನು ಹೊಂದಿದ್ದೀರಿ, ಆದರೆ ಆ ಕ್ರಿಯೆಗಳ ಫಲಕ್ಕೆ ನೀವು ಅರ್ಹರಲ್ಲ". ಈ ಸಂದೇಶವು ಆಧ್ಯಾತ್ಮಿಕತೆ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೆಚ್ಚಿಸುತ್ತದೆ. ಸಮೃದ್ಧಿಯನ್ನು ಸೂಚಿಸುತ್ತದೆ. ಈ ವಿಶಿಷ್ಟ ಉಡುಗೆ ವೈದಿಕ ಸ್ತೋತ್ರಗಳು ಮತ್ತು ಸಾಂಸ್ಕೃತಿಕ ಪರಂಪರೆಯ ಪವಿತ್ರತೆಯನ್ನು ತಿಳಿಸುತ್ತದೆ. ಪ್ರತಿ ಹೆಜ್ಜೆಯಲ್ಲೂ ಭಾರತೀಯ ಸಂಪ್ರದಾಯ ಗೋಚರಿಸುತ್ತಿರುವುದು ಗಮನಾರ್ಹ.  

7 /7

ಈ ಉಡುಪನ್ನು ತಯಾರಿಸಲು, ಇಶಾ ಸ್ವತಃ ಪ್ರಸಿದ್ಧ ಸ್ಟೈಲಿಸ್ಟ್ ಅನೈತಾ ಶ್ರಾಫ್ ಅದಾಜಾನಿಯಾ ಅವರೊಂದಿಗೆ ಅನೇಕ ಚರ್ಚೆಗಳನ್ನು ನಡೆಸಿ, ಅಂತಿಮವಾಗಿ ಅದನ್ನು ಈ ರೀತಿ ವಿನ್ಯಾಸಗೊಳಿಸಲಾಗಿದೆ. ಈ ಲೆಹೆಂಗಾವನ್ನು ಪೂರ್ಣಗೊಳಿಸಲು ಸುಮಾರು 4000 ಗಂಟೆಗಳನ್ನು ತೆಗೆದುಕೊಂಡಿತ್ತಂತೆ. ಲೆಹೆಂಗಾಗೆ ಹೊಂದಿಕೆಯಾಗುವಂತೆ ಇಶಾಟೆಂಪಲ್‌ ಜ್ಯುವೆಲರಿ  ಧರಿಸಿದ್ದರು. ಹಣೆಗೆ ಕುಂಕುಮ ಹಚ್ಚಿಕೊಂಡು ಸಾಂಪ್ರದಾಯಿಕವಾಗಿಯೂ ಆಧುನಿಕವಾಗಿಯೂ ಕಾಣುವ ಮೂಲಕ ಫ್ಯಾಷನ್ ಐಕಾನ್ ಆದರು.