International Yoga Day 2021: ಲಡಾಖ್‌ನಲ್ಲಿ 18000 ಅಡಿ ಎತ್ತರದಲ್ಲಿ ಐಟಿಬಿಪಿ ಸಿಬ್ಬಂದಿಯ ಯೋಗ ಪ್ರದರ್ಶನ

                     

ಭಾರತ ಸೇರಿದಂತೆ ವಿಶ್ವದಾದ್ಯಂತ ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನವನ್ನು (Internation Yoga Day) ಆಚರಿಸಲಾಗುತ್ತದೆ ಮತ್ತು ಎಲ್ಲರೂ ಅದರಲ್ಲಿ ಉತ್ಸಾಹದಿಂದ ಭಾಗವಹಿಸುತ್ತಾರೆ. ಇಂದು (ಸೋಮವಾರ) ಅಂತರರಾಷ್ಟ್ರೀಯ ಯೋಗ ದಿನಾಚರಣೆಯಂದು, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಸಿಬ್ಬಂದಿ ಲಡಾಖ್‌ನಲ್ಲಿ 18000 ಅಡಿ ಎತ್ತರದಲ್ಲಿ ಯೋಗವನ್ನು ಪ್ರದರ್ಶಿಸಿದರು. ಇದಲ್ಲದೆ, ಐಟಿಬಿಪಿ ಸಿಬ್ಬಂದಿ ಲಡಾಖ್ ಮತ್ತು ಅರುಣಾಚಲ ಪ್ರದೇಶದ ಪಂಗೊಂಗ್ ತ್ಸೋ ಸರೋವರದ ದಡದಲ್ಲಿ ಕುದುರೆಗಳೊಂದಿಗೆ ಯೋಗ ಮಾಡಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /7

ಅಂತರರಾಷ್ಟ್ರೀಯ ಯೋಗ ದಿನದಂದು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಸಿಬ್ಬಂದಿ ಲಡಾಖ್‌ನಲ್ಲಿ 18000 ಅಡಿ ಎತ್ತರದಲ್ಲಿ ಯೋಗ ಪ್ರದರ್ಶಿಸಿದರು. (ಫೋಟೋ ಮೂಲ- ಎಎನ್‌ಐ)

2 /7

ಆರು ವರ್ಷಗಳ ಹಿಂದೆ, ಪ್ರಧಾನಿ ನರೇಂದ್ರ ಮೋದಿಯವರ ಉಪಕ್ರಮದ ಮೇರೆಗೆ ವಿಶ್ವಸಂಸ್ಥೆಯು ಜೂನ್ 21 ಅನ್ನು ಅಂತರರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲು ಕರೆ ನೀಡಿತು ಮತ್ತು ವಿಶ್ವದ ಎಲ್ಲಾ ದೇಶಗಳು ಈ ಅಭಿಯಾನಕ್ಕೆ ಸೇರಿಕೊಂಡವು. (ಫೋಟೋ ಮೂಲ- ಎಎನ್‌ಐ)  

3 /7

ಜೂನ್ 21 ರ ದಿನದ ಒಂದು ವಿಶೇಷತೆಯೆಂದರೆ, ಇದು ವರ್ಷದ 365 ದಿನಗಳಲ್ಲಿ ಅತಿ ಉದ್ದದ ದಿನವಾಗಿದೆ ಮತ್ತು ಯೋಗದ ನಿರಂತರ ಅಭ್ಯಾಸವು ಒಬ್ಬ ವ್ಯಕ್ತಿಗೆ ದೀರ್ಘಾಯುಷ್ಯವನ್ನು ನೀಡುತ್ತದೆ, ಆದ್ದರಿಂದ ಈ ದಿನವನ್ನು ಅಂತರರಾಷ್ಟ್ರೀಯ ಯೋಗ ದಿನವೆಂದು (Internation Yoga Day) ಆಚರಿಸುವ ನಿರ್ಧಾರವನ್ನು ಮಾಡಲಾಯಿತು. (ಫೋಟೋ ಮೂಲ- ಎಎನ್‌ಐ) ಇದನ್ನೂ ಓದಿ-  Yoga For Weight Loss: ತೂಕ ಕಡಿಮೆ ಮಾಡಲು ಸಹಾಯಕವಾಗುವ 5 ಉತ್ತಮ ಯೋಗಾಸನಗಳಿವು

4 /7

ಅಂತರರಾಷ್ಟ್ರೀಯ ಯೋಗ ದಿನ 2021 ರ ವಿಷಯವೆಂದರೆ 'ಯೋಗ ಫಾರ್ ವೆಲ್ನೆಸ್'. ದೇಹವನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿಡುವುದು ಈ ವಿಷಯದ ಉದ್ದೇಶವಾಗಿದೆ. ಕರೋನಾ ಅವಧಿಯಲ್ಲಿ ಯೋಗವು ಜನರಿಗೆ ಭರವಸೆಯ ಕಿರಣವಾಯಿತು ಎಂದು ಪ್ರಧಾನಿ ಮೋದಿ ಹೇಳಿದರು. (ಫೋಟೋ ಮೂಲ- ಎಎನ್‌ಐ) ಇದನ್ನೂ ಓದಿ- ಒತ್ತಡದಿಂದ ದೂರವಿರಲು ನಿತ್ಯ ಕೇವಲ 10 ನಿಮಿಷ ಮಾಡಿ ಈ ಆಸನ

5 /7

ಅಂತರರಾಷ್ಟ್ರೀಯ ಯೋಗ ದಿನಾಚರಣೆಯ (Internation Yoga Day) ಸಂದರ್ಭದಲ್ಲಿ, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಸಿಬ್ಬಂದಿ ಲಡಾಖ್‌ನ ಪಂಗೊಂಗ್ ತ್ಸೋ ಸರೋವರದ ದಡದಲ್ಲಿ ಯೋಗವನ್ನು ಪ್ರದರ್ಶಿಸಿದರು. (ಫೋಟೋ ಮೂಲ- ಎಎನ್‌ಐ)

6 /7

ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿ, ಸೈನಿಕರು ತಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿಡಲು ನೈಜ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಯೋಗವನ್ನು ಪ್ರದರ್ಶಿಸಿದರು. (ಫೋಟೋ ಮೂಲ- ಎಎನ್‌ಐ)

7 /7

ಅಂತರರಾಷ್ಟ್ರೀಯ ಯೋಗ ದಿನ: ಅರುಣಾಚಲ ಪ್ರದೇಶದ ಲೋಹಿತ್‌ಪುರದ ಪ್ರಾಣಿ ತರಬೇತಿ ಶಾಲೆಯಲ್ಲಿ (ಎಟಿಎಸ್) ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಸಿಬ್ಬಂದಿ ಕುದುರೆಗಳೊಂದಿಗೆ ಯೋಗ ಮಾಡಿದರು. (ಫೋಟೋ ಮೂಲ- ಎಎನ್‌ಐ)