RCB Player Shreyanka Patil Real Age: ಭಾನುವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್ 2024 ಪಂದ್ಯದಲ್ಲಿ ಶ್ರೇಯಾಂಕಾ ಪಾಟೀಲ್ 3.3 ಓವರ್ ಬೌಲ್ ಮಾಡಿ 12 ರನ್ ನೀಡಿ 4 ವಿಕೆಟ್ ಪಡೆದು ದೊಡ್ಡ ದಾಖಲೆ ನಿರ್ಮಿಸಿದ್ದಾರೆ. ಇದೀಗ ಈ ಬೆಂಗಳೂರು ಬೆಡಗಿಯ ನಿಜವಾದ ವಯಸ್ಸಿನ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ..
ಭಾನುವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್ 2024 (ಡಬ್ಲ್ಯುಪಿಎಲ್ 2024) ಫೈನಲ್ ಪಂದ್ಯದಲ್ಲಿ ಶ್ರೇಯಾಂಕಾ ಪಾಟೀಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಊಹಿಸಲೂ ಸಾಧ್ಯವಾಗದ ಸಾಧನೆ ಮಾಡಿದ್ದಾರೆ.
ಶ್ರೇಯಾಂಕಾ ಪಾಟೀಲ್ ಅವರು 31 ಜುಲೈ 2002 ರಂದು ಕರ್ನಾಟಕದ ಬೆಂಗಳೂರಿನಲ್ಲಿ ಜನಿಸಿದರು. ಸದ್ಯ ಇವರಿಗೆ 21 ವರ್ಷ.. ವಿರಾಟ್ ಕೊಹ್ಲಿಯವರನ್ನು ರೋಲ್ ಮಾಡೆಲ್ ಆಗಿ ಇಟ್ಟುಕೊಂಡ ಈ ಚೆಲುವೆ ತನ್ನ 9 ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದರು.
ಇನ್ನು ಶ್ರೇಯಾಂಕಾ ಪಾಟೀಲ್ ಅತ್ಯುತ್ತಮ ಆಫ್ ಸ್ಪಿನ್ ಬೌಲರ್. ಭಾರತದ ಪರ 2 ಏಕದಿನ ಪಂದ್ಯಗಳಲ್ಲಿ 4 ವಿಕೆಟ್ ಹಾಗೂ 6 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಂದ 8 ವಿಕೆಟ್ ಪಡೆದಿದ್ದಾರೆ..
ವಿದೇಶಿ ಲೀಗ್‌ಗೆ ಒಪ್ಪಂದ ಮಾಡಿಕೊಂಡ ಮೊದಲ ಭಾರತೀಯ ಮಹಿಳಾ ಕ್ರಿಕೆಟಿರ್ ಶ್ರೇಯಾಂಕಾ ಪಾಟೀಲ್.. ನಿನ್ನೆ ನಡೆದ ಪಂದ್ಯದಲ್ಲಿ 3.3 ಓವರ್ ಬೌಲ್ ಮಾಡಿ 12 ರನ್ ನೀಡಿ 4 ವಿಕೆಟ್ ತಮ್ಮ ಖಾತೆಯಲ್ಲಿ ಸೇರಿಸಿಕೊಂಡು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಮ್ಯಾಗ್ ಲ್ಯಾನಿಂಗ್ (23), ಮಿನ್ನು ಮಣಿ (5), ಅನುರಾಧಾ ರೆಡ್ಡಿ (10) ಮತ್ತು ತಾನಿಯಾ ಭಾಟಿಯಾ (0) ಅವರನ್ನು ಫೈನಲ್ ಪಂದ್ಯದಲ್ಲಿ ಶ್ರೇಯಾಂಕಾ ಪಾಟೀಲ್ ಔಟ್ ಮಾಡಿದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಶ್ರೇಯಾಂಕಾ ಪಾಟೀಲ್ ಅವರಿಗೆ ಡಬ್ಲ್ಯುಪಿಎಲ್ 2024 ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿದ್ದಕ್ಕಾಗಿ ಪರ್ಪಲ್ ಕ್ಯಾಪ್ ಪ್ರಶಸ್ತಿ ಮತ್ತು 5 ಲಕ್ಷ ರೂ. ನೀಡಲಾಗಿದೆ.. WPL 2024 ರಲ್ಲಿ ಶ್ರೇಯಾಂಕಾ ಪಾಟೀಲ್ ಗರಿಷ್ಠ 13 ವಿಕೆಟ್ ಪಡೆದು... ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡು.. ಇದಕ್ಕಾಗಿ ಅವರು ಹೆಚ್ಚುವರಿಯಾಗಿ 5 ಲಕ್ಷ ರೂ. ಪಡೆದಿದ್ದಾರೆ..