ಭಾರತದ ಮೊದಲ 'ಶ್ವಾನ' ಉದ್ಯಾನ

ಮನುಷ್ಯರಿಗಾಗಿ ಉದ್ಯಾನವನಗಳಿರುವಂತೆಯೇ ಶ್ವಾನಗಳಿಗೂ ವಿಶೇಷವಾದ ಪಾರ್ಕ್ ಹೈದರಾಬಾದ್'ನಲ್ಲಿ ಸಿದ್ಧವಾಗಿದೆ. 

  • Oct 23, 2018, 15:45 PM IST

ಇದು ದೇಶದ "ಮೊದಲ ಶ್ವಾನ ಉದ್ಯಾನ"ವಾಗಿದ್ದು, ಗ್ರೇಟರ್ ಹೈದರಾಬಾದ್ ಮುನಿಸಿಪಲ್ ಕಾರ್ಪೋರೇಶನ್ (ಜಿಎಚ್ಎಂಸಿ) ಇದನ್ನು ನಿರ್ಮಿಸಿದೆ.

1 /5

ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಹೈದರಾಬಾದ್'ನಲ್ಲಿ ಶ್ವಾನಗಳಿಗಾಗಿ ವಿಶೇಷ ಪಾರ್ಕ್ ಸಿದ್ಧವಾಗಿದ್ದು, ಅಕ್ಟೋಬರ್ 18 ರಂದು ಅದನ್ನು ಲೋಕಾರ್ಪಣೆ ಮಾಡಲಾಗಿದೆ. ಇದು ದೇಶದ "ಮೊದಲ ಶ್ವಾನ ಉದ್ಯಾನ"ವಾಗಿದ್ದು, ಗ್ರೇಟರ್ ಹೈದರಾಬಾದ್ ಮುನಿಸಿಪಲ್ ಕಾರ್ಪೋರೇಶನ್ (ಜಿಎಚ್ಎಂಸಿ) ಇದನ್ನು ನಿರ್ಮಿಸಿದೆ. 1.3 ಎಕರೆಯಲ್ಲಿ ನಿರ್ಮಿಸಿರುವ ಈ ಶ್ವಾನ ಉದ್ಯಾನಕ್ಕೆ  1.1 ಕೋಟಿ ವೆಚ್ಚ ತಗುಲಿದ್ದು, ಹೈದರಾಬಾದ್ ನಗರದ ಪಶ್ಚಿಮ ಭಾಗದಲ್ಲಿರುವ ಕೊಂಡಾಪುರ ಪ್ರದೇಶದಲ್ಲಿ ಈ ಡಾಗ್ ಪಾರ್ಕ್ ಇದೆ. "ನಾಯಿ ಮಾಲೀಕರಿಂದ ಸಾಕಷ್ಟು ವಿನಂತಿಗಳು ತಮ್ಮ ಮನರಂಜನೆಗಾಗಿ ತಮ್ಮ ನಾಯಿಗಳಲ್ಲಿ ತರುವಂತಹ ಸ್ಥಳವಾಗಿದೆ, ಏಕೆಂದರೆ ಸಾಮಾನ್ಯ ಉದ್ಯಾನವನಗಳಲ್ಲಿ ಜನರು ವಿವಿಧ ಕಾರಣಗಳಿಂದ ನಾಯಿಗಳ ಅಸ್ತಿತ್ವವನ್ನು ಆಕ್ಷೇಪಿಸುತ್ತಾರೆ" ಎಂದು ಡಿ.ಹರಿಚಂಡನ, ಐಎಎಸ್, ಝೋನಲ್ ಕಮಿಷನರ್ ಹೇಳಿದ್ದಾರೆ.

2 /5

"ಈ ಉದ್ಯಾನವನದಿಂದ ನಾಯಿಗಳು ಮತ್ತು ಅದರ ಮಾಲೀಕರು ಇಬ್ಬರಿಗೂ ಪ್ರಯೋಜನಗಳಿವೆ, ಅವುಗಳು ವಿಶ್ರಾಂತಿ ಪಡೆಯಬಹುದು ಮತ್ತು ಯಾವುದೇ ನಾಯಿಗೆ ವೈದ್ಯಕೀಯ ಚಿಕಿತ್ಸೆ ಅಗತ್ಯವಿರುವಾಗ ಆ ಸೇವೆ ಇಲ್ಲಿ ಲಭ್ಯವಾಗಲಿದೆ".

3 /5

ಉದ್ಯಾನದ ವೈಮಾನಿಕ ನೋಟ.

4 /5

ಈ ಉದ್ಯಾನವನವು ನಾಯಿಗಳಿಗೆ ವಿವಿಧ ಮನರಂಜನಾ ಚಟುವಟಿಕೆಗಳ ಆಯ್ಕೆಗಳನ್ನು ಹೊಂದಿದೆ.

5 /5

ವಾಕಿಂಗ್ ಟ್ರ್ಯಾಕ್ ಜೊತೆಗೆ ಶ್ವಾನಗಳಿಗಾಗಿ ಕ್ಲಿನಿಕ್, ತರಬೇತಿ ಮತ್ತು ವ್ಯಾಯಾಮ ಉಪಕರಣಗಳು, ಸ್ಪ್ಲಾಶ್ ಪೂಲ್, ಬಯಲು ರಂಗಮಂದಿರ ಹಾಗೂ ದೊಡ್ಡ ಮತ್ತು ಸಣ್ಣ ಶ್ವಾನಗಳಿಗಾಗಿ ಪ್ರತ್ಯೇಕ ಆವರಣಗಳು ಕೂಡಾ ಈ ಪಾರ್ಕ್'ನಲ್ಲಿದೆ.