Indian Railways Rules: ರೈಲು ಯಾತ್ರೆಯ ವೇಳೆ ಟಿಕೆಟ್ ಜೊತೆಗೆ ಸಿಗುವ ಈ ಲಾಭಗಳು ನಿಮಗೆ ತಿಳಿದಿವೆಯೇ?

Indian Railways Rules:ರೈಲು ಯಾತ್ರೆಯ ವೇಳೆ ಟಿಕೆಟ್ ತೆಗೆದುಕೊಳ್ಳುವ ಮೂಲಕ ನೀವು ಏಕಕಾಲದಲ್ಲಿ ಹಲವು ಸೌಲಭ್ಯಗಳು (Indian Railways Latest Rules) ಸಿಗುತ್ತವೆ. ಇವುಗಳ ಬಗ್ಗೆ ತಿಳಿದುಕೊಳ್ಳುವುದು ನಿಮ್ಮ ಅಧಿಕಾರ. ಏಕೆಂದರೆ, ನಿಮಗೆ ಯಾವತ್ತಾದರೂ ಒಮ್ಮೆ ಇವುಗಳ ಅವಶ್ಯಕತೆ ಬಂದೆ ಬರುತ್ತದೆ.

Indian Railways Rules: ನೀವು ಕೂಡ ರೈಲಿನಲ್ಲಿ(Indian Railways) ಪ್ರಯಾಣಿಸುತ್ತಿದ್ದರೆ, ನೀವು ಈ ಸುದ್ದಿಯನ್ನು ತಪ್ಪದೆ ಓದಲೇ ಬೇಕು. ರೈಲು ಟಿಕೆಟ್ ತೆಗೆದುಕೊಳ್ಳುವ ಮೂಲಕ ನೀವು ಏಕಕಾಲಕ್ಕೆ ಹಲವು ಸೌಲಭ್ಯಗಳನ್ನು ಪಡೆಯುತ್ತೀರಿ, ಆದರೆ ಈ ವಿಶೇಷ ಸೌಲಭ್ಯಗಳ (Indian Railways Facilities) ಬಗ್ಗೆ ತಿಳಿದುಕೊಳ್ಳುವುದು ನಿಮ್ಮ ಅಧಿಕಾರ ಮತ್ತು ನಿಮಗೆ ಯಾವುದೇ ಸಮಯದಲ್ಲಿ ನಿಮಗೆ ಇವುಗಳ ಅವಶ್ಯಕತೆ ಬೀಳಬಹುದು. ಹಾಗಾದರೆ ಬನ್ನಿ ರೈಲು ಟಿಕೆಟ್‌ಗಳೊಂದಿಗೆ ನೀವು ಯಾವ ಸೌಲಭ್ಯಗಳನ್ನು ಪಡೆಯಬಹುದು ಎಂಬುದನ್ನು ತಿಳಿದುಕೊಳ್ಳೋಣ.

 

ಇದನ್ನೂ ಓದಿ-Indian Railways : ಅಕ್ಟೋಬರ್ 1 ರಿಂದ ಭಾರತೀಯ ರೈಲ್ವೆ ಟೈಮ್ ಟೇಬಲ್ ಚೇಂಜ್ : ಹೊಸ ವೇಳಾಪಟ್ಟಿ ಇಲ್ಲಿದೆ ನೋಡಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

1 /5

1. ಇನ್ಸುರೆನ್ಸ್ - ಐಆರ್‌ಸಿಟಿಸಿ (IRCTC) ವೆಬ್‌ಸೈಟ್ ಅಥವಾ ಮೊಬೈಲ್ ಆಪ್ ಮೂಲಕ ನೀವು ಒಂದು ವೇಳೆ ಟಿಕೆಟ್ ಕಾಯ್ದಿರಿಸಿದಾಗ (IRCTC Ticket Reservation), ನಿಮಗೆ ವಿಮೆ ಬಗ್ಗೆ ಕೇಳಲಾಗುತ್ತದೆ. ನೀವು ಈ ವಿಮೆಯನ್ನು ತೆಗೆದುಕೊಂಡರೆ ನೀವು ಅನೇಕ ರೀತಿಯ ಸೌಲಭ್ಯಗಳನ್ನು ಪಡೆಯುತ್ತೀರಿ. ವಿಮೆಯ ಅಡಿಯಲ್ಲಿ, ರೈಲು ಅಪಘಾತದಲ್ಲಿ ಸಾವು ಅಥವಾ ತಾತ್ಕಾಲಿಕ ಅಂಗವೈಕಲ್ಯದ ಸಂದರ್ಭದಲ್ಲಿ 10 ಲಕ್ಷ ರೂ.ಗಳ ಪರಿಹಾರ ಲಭ್ಯವಿರುತ್ತದೆ. ಆದರೆ ಶಾಶ್ವತ ಭಾಗಶಃ ಅಂಗವೈಕಲ್ಯದ ಸಂದರ್ಭದಲ್ಲಿ 7.5 ಲಕ್ಷ ವಿಮಾ ರಕ್ಷಣೆಯು ನೀಡಲಾಗುತ್ತದೆ. ಇನ್ನೊಂದೆಡೆ ಆಸ್ಪತ್ರೆಗೆ ಮತ್ತು ಚಿಕಿತ್ಸೆಗಾಗಿ ಎರಡು ಲಕ್ಷ ರೂಪಾಯಿಗಳವರೆಗೆ ಲಭ್ಯವಿದೆ. ಇದರ ಹೊರತಾಗಿ, ಕಳ್ಳತನ, ದೌರ್ಜನ್ಯದ ಅಡಿಯಲ್ಲಿ ವಿಮಾ ರಕ್ಷಣೆಯು ಸಹ ಸಿಗುತ್ತದೆ ಮತ್ತು ಈ ವಿಮೆ ಪಡೆಯಲು ನೀವು ಕೇವಲ 49 ಪೈಸೆಗಳನ್ನು ಖರ್ಚು ಮಾಡುವ ಮೂಲಕ ಪಡೆಯಬಹುದು.

2 /5

2. ಫಸ್ಟ್ ಏಡ್ ಬಾಕ್ಸ್ - ರೈಲಿನಲ್ಲಿ ಪ್ರಯಾಣಿಸುವಾಗ ನಿಮ್ಮ ಆರೋಗ್ಯ ಹದಗೆಟ್ಟರೆ ಮತ್ತು ನಿಮಗೆ ಔಷಧಿ ಬೇಕಾದರೆ, ನೀವು TTE ಬಳಿಯಿಂದ ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು ಪಡೆದುಕೊಳ್ಳಬಹುದು. ರೈಲಿನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕರಿಗೂ ಈ ಸೌಲಭ್ಯವನ್ನು ರೈಲ್ವೇ ನೀಡಿದೆ. ಆದರೆ ಕೆಲವೇ ಜನರಿಗೆ ಈ ಸೌಲಭ್ಯದ ಬಗ್ಗೆ ತಿಳಿದಿದೆ.

3 /5

3.ವೈಫೈ - ಭಾರತೀಯ ರೈಲ್ವೆ ನಿಧಾನ ಗತಿಯಲ್ಲಿ ಅಡ್ವಾನ್ಸ್ ಆಗುತ್ತಿದೆ. ಇದರೊಂದಿಗೆ, ಇದು ತನ್ನ ಪ್ರಯಾಣಿಕರಿಗೆ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಇತ್ತೀಚಿನ ದಿನಗಳಲ್ಲಿ, ರೈಲ್ವೇ ನಿಲ್ದಾಣಗಳಲ್ಲಿ ವೈಫೈ ಸೌಲಭ್ಯವನ್ನು ಒದಗಿಸಲಾಗುತ್ತಿದ್ದು ಮತ್ತು ಅದು ಕೂಡ ಉಚಿತವಾಗಿ. ನೀವು ನಿಲ್ದಾಣದಲ್ಲಿದ್ದರೆ ಮತ್ತು ರೈಲುಗಾಗಿ ಕಾಯುತ್ತಿದ್ದರೆ, ನೀವು ರೈಲ್ವೆಯ ಈ ವಿಶೇಷ ಸೌಲಭ್ಯದ ಲಾಭವನ್ನು ಪಡೆಯಬಹುದು. ಆದರೆ, ಈ ಸೌಲಭ್ಯವು ಇನ್ನೂ ಪ್ರತಿ ನಿಲ್ದಾಣದಲ್ಲೂ ಲಭ್ಯವಿಲ್ಲ ಎಂಬುದು ಗಮನಾರ್ಹ. 

4 /5

4. ವೇಟಿಂಗ್ ರೂಮ್ -  ಪ್ರಯಾಣದ ಸಮಯದಲ್ಲಿ ನಿಮ್ಮ ರೈಲು ತಡವಾಗಿದ್ದರೆ, ಟಿಕೆಟ್ ವರ್ಗವನ್ನು ಅವಲಂಬಿಸಿ, ನೀವು ವೇಟಿಂಗ್ ರೂಮ್ ಗೆ ಹೋಗಿ ವಿಶ್ರಾಂತಿ ಪಡೆಯಬಹುದು. ಈ ಸೌಲಭ್ಯವನ್ನು ಪ್ರತಿಯೊಬ್ಬ ಪ್ರಯಾಣಿಕರಿಗೆ ರೈಲ್ವೇ ನೀಡುತ್ತದೆ. ನೀವು ಕನ್ಫರ್ಮ್ ಟಿಕೆಟ್ ಹೊಂದಿದ್ದರೆ ಮತ್ತು ನೀವು ಟಿಕೆಟ್ ಹೊಂದಿರುವ ಕ್ಲಾಸ್ ಆಧರಿಸಿ ವೇಟಿಂಗ್ ರೂಮ್ ಗೆ ಹೋಗಿ ವಿಶ್ರಾಂತಿ ಪಡೆಯಬಹುದು.

5 /5

5. ಕ್ಲಾಕ್ ರೂಮ್ - ರೇಲ್ವೆ ವಿಭಾಗದ ವತಿಯಿಂದ ರೈಲು ಪ್ರಯಾಣಿಕರಿಗೆ ಕ್ಲಾಕ್ ರೂಮ್   ಸೌಲಭ್ಯವನ್ನು ಸಹ ಪ್ರಯಾಣಿಕರಿಗೆ ಒದಗಿಸಲಾಗಿದೆ. ನೀವು ಕನ್ಫರ್ಮ್ ರೈಲು ಟಿಕೆಟ್ ಹೊಂದಿದ್ದರೆ, ನೀವು ನಿಲ್ದಾಣದಲ್ಲಿರುವ ಕ್ಲಾಕ್ ರೂಮ್ ಕೊಠಡಿಯನ್ನು ಬಳಸಬಹುದು ಮತ್ತು ನಿಮ್ಮ ಸಾಮಾನುಗಳನ್ನು ಅಲ್ಲಿ ಜಮೆ ಮಾಡಿ ರೈಲು ಬರುವ ಒಳಗೆ ನೀವು ಹತ್ತಿರದಲ್ಲಿರುವ ಮಾರುಕಟ್ಟೆಗೆ ಅಥವಾ ಪ್ರವಾಸಿ ತಾಣಕ್ಕೆ ಭೇಟಿ ನೀಡಬಹುದು.