Indian Railways: ಅತ್ಯಧಿಕ ಸಂಖ್ಯೆಯ ಪ್ಲಾಟ್‌ಫಾರ್ಮ್‌ ಹೊಂದಿರುವ ಭಾರತದ ರೈಲ್ವೆ ನಿಲ್ದಾಣಗಳು

Railway Stations with Highest Platforms: ದಿನನಿತ್ಯದ ಆಧಾರದ ಮೇಲೆ ಭಾರತದಲ್ಲಿ ಸುಮಾರು 23 ಮಿಲಿಯನ್ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಹೀಗಾಗಿ ರೈಲ್ವೆಗಳು ದೇಶದ ಕೋಟ್ಯಂತರ ಜನರ ಪ್ರಮುಖ ಪ್ರಯಾಣದ ಮೂಲಗಳಾಗಿವೆ.

ನವದೆಹಲಿ: ಸುಮಾರು 177 ವರ್ಷಗಳ ಹಿಂದೆ ಸ್ಥಾಪನೆಯಾದ ಭಾರತೀಯ ರೈಲ್ವೆ ವಿಶ್ವದ ಅತಿದೊಡ್ಡ ರೈಲು ಜಾಲಗಳಲ್ಲಿ ಒಂದಾಗಿದೆ. ದೇಶದಾದ್ಯಂತ ಇರುವ ರೈಲು ಮಾರ್ಗಗಳ ಉದ್ದವು ಸುಮಾರು 68 ಸಾವಿರ ಕಿಲೋ ಮೀಟರ್‍ಗಳಿಂತಲೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಇದು ಕೋಟ್ಯಂತರ ಪ್ರಯಾಣಿಕರಿಗೆ ಭಾರತದಾದ್ಯಂತ ಅನುಕೂಲಕರ ಪ್ರಯಾಣವನ್ನು ಒದಗಿಸುತ್ತದೆ. ದಿನನಿತ್ಯದ ಆಧಾರದ ಮೇಲೆ ಭಾರತದಲ್ಲಿ ಸುಮಾರು 23 ಮಿಲಿಯನ್ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಹೀಗಾಗಿ ರೈಲ್ವೆಗಳು ದೇಶದ ಕೋಟ್ಯಂತರ ಜನರ ಪ್ರಮುಖ ಪ್ರಯಾಣದ ಮೂಲಗಳಾಗಿವೆ. ದೇಶದ ಕೆಲವು ರೈಲ್ವೆ ನಿಲ್ದಾಗಳು ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚಿನ ಸಂಖ್ಯೆಯ ಪ್ಲಾಟ್‌ಫಾರ್ಮ್‍ಗಳನ್ನು ಹೊಂದಿವೆ. ಇವುಗಳ ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಪಶ್ಚಿಮ ಬಂಗಾಳದ ಹೌರಾ ಜಂಕ್ಷನ್ ರೈಲು ನಿಲ್ದಾಣ(HWH)ವು ಅತಿಹೆಚ್ಚು ಅಂದರೆ 23 ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿದೆ. ಕೋಲ್ಕತ್ತಾದ ಸೀಲ್ದಾಹ್ ರೈಲು ನಿಲ್ದಾಣ (SDAH)ವು  21 ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿದೆ.

2 /5

ಮಹಾರಾಷ್ಟ್ರದ ಛತ್ರಪತಿ ಶಿವಾಜಿ ಟರ್ಮಿನಸ್ (CST) ಒಟ್ಟು 18 ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿದೆ. ಅದೇ ರೀತಿ ಚೆನ್ನೈನ ಸೆಂಟ್ರಲ್ ರೈಲು ನಿಲ್ದಾಣ (MAS)ವು 17 ಪ್ಲಾಟ್‌ಫಾರ್ಮ್‌ಗಳನ್ನುಹೊಂದಿದೆ.

3 /5

ಹೊಸ ದೆಹಲಿ ರೈಲು ನಿಲ್ದಾಣ (NDLS)ವು 16 ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿದ್ದು, ಅಹಮದಾಬಾದ್ ಜಂಕ್ಷನ್ ರೈಲು ನಿಲ್ದಾಣ (ADI)ದಲ್ಲಿ 12 ಪ್ಲಾಟ್‌ಫಾರ್ಮ್‌ಗಳಿವೆ.

4 /5

ಪಶ್ಚಿಮ ಬಂಗಾಳದ ಖರಗ್‌ಪುರ ಜಂಕ್ಷನ್ ರೈಲು ನಿಲ್ದಾಣ (KGP)ವು 12 ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿದ್ದು, ಉತ್ತರ ಪ್ರದೇಶದ ಕಾನ್ಪುರ್ ಸೆಂಟ್ರಲ್ ರೈಲು ನಿಲ್ದಾಣ (CNB)ದಲ್ಲಿ 10 ಪ್ಲಾಟ್‌ಫಾರ್ಮ್‌ಗಳಿವೆ.

5 /5

ಉತ್ತರಪ್ರದೇಶದ ಪ್ರಯಾಗ್‍ರಾಜ್ (ಅಲಹಾಬಾದ್) ಜಂಕ್ಷನ್ ರೈಲು ನಿಲ್ದಾಣ(ALD)ವು 10 ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿದ್ದರೆ, ಬಿಹಾರಾದ ಪಾಟ್ನಾ ಜಂಕ್ಷನ್ ರೈಲು ನಿಲ್ದಾಣ (PNBE)ದಲ್ಲಿ 10 ಪ್ಲಾಟ್‌ಫಾರ್ಮ್‌ಗಳಿವೆ.