Yashasvi Jaiswal Mumbai Home Tour: ಟೀಂ ಇಂಡಿಯಾದ ಯುವ ಆರಂಭಿಕ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್ ಪ್ರಸಕ್ತ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಇಲ್ಲಿಯವರೆಗೆ 100 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 500+ ರನ್ ಗಳಿಸಿದ್ದಾರೆ. ಈ 22ರ ಹರೆಯದ ಬ್ಯಾಟ್ಸ್ಮನ್ ಕಳೆದ ವರ್ಷವಷ್ಟೇ ಕುಟುಂಬ ಸಮೇತ ಮುಂಬೈನ ಐಷಾರಾಮಿ ಅಪಾರ್ಟ್ಮೆಂಟ್’ಗೆ ಸ್ಥಳಾಂತರಗೊಂಡಿದ್ದರು. ಅಂದಹಾಗೆ ಆ ಐಷಾರಾಮಿ ಮನೆ ಹೇಗಿದೆ ಎಂಬುದನ್ನು ನಾವಿಂದು ಫೋಟೋ ಸಮೇತ ಮಾಹಿತಿ ನೀಡಲಿದ್ದೇವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಪ್ರಸಕ್ತ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಯಶಸ್ವಿ ಜೈಸ್ವಾಲ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ರಾಜ್ಕೋಟ್ ಟೆಸ್ಟ್ನಲ್ಲಿ ಇಂಗ್ಲೆಂಡ್’ನ ಬೌಲರ್ಗಳು ಈ 22 ವರ್ಷದ ಬ್ಯಾಟ್ಸ್ಮನ್ ಮುಂದೆ ಮಂಡಿಯೂರಿದ್ದು ಸುಳ್ಳಲ್ಲ. ಎರಡನೇ ಇನ್ನಿಂಗ್ಸ್’ನಲ್ಲಿ ಅಜೇಯ 214 ರನ್’ಗಳ ಅದ್ಭುತ ಇನ್ನಿಂಗ್ಸ್ ಆಡಿದ ಅವರು, ಹಿಂದಿನ ಪಂದ್ಯದಲ್ಲಿ ಅಂದರೆ ವಿಶಾಖಪಟ್ಟಣಂನಲ್ಲಿಯೂ ದ್ವಿಶತಕ ಗಳಿಸಿದ್ದರು. ಇದುವರೆಗೆ 3 ಪಂದ್ಯಗಳ 6 ಇನ್ನಿಂಗ್ಸ್’ಗಳಲ್ಲಿ 545 ರನ್ ಗಳಿಸಿದ್ದಾರೆ.
ಯಶಸ್ವಿ ಜೈಸ್ವಾಲ್ ಸ್ಟಾರ್ ಆಗುವ ಕಥೆ ಕನಸಿಗಿಂತ ಕಡಿಮೆಯಿಲ್ಲ. ಟೆಂಟ್ ಹೌಸ್’ನಲ್ಲಿ ವಾಸಿಸುವುದರಿಂದ ಹಿಡಿದು ಟೀಮ್ ಇಂಡಿಯಾಗೆ ಪ್ರವೇಶಿಸುವವರೆಗೆ ಮತ್ತು ಮುಂಬೈನಲ್ಲಿ ಐಷಾರಾಮಿ 5 BHK ಅಪಾರ್ಟ್ಮೆಂಟ್ ಹೊಂದುವವರೆಗೆ, ಯಶಸ್ವಿ ಬಡಜನರ ಬದುಕಿಗೆ ಪ್ರೇರೇಪಣೆಯಾಗಿದ್ದಾರೆ.
ಯಶಸ್ವಿ ಜೈಸ್ವಾಲ್ ಮುಂಬೈನ ಥಾಣೆಯಲ್ಲಿ 1500 ಚದರ ಅಡಿ ಅಪಾರ್ಟ್ಮೆಂಟ್ ಹೊಂದಿದ್ದು, ಇದನ್ನು ಯುರೋಪಿಯನ್ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಕಳೆದ ವರ್ಷವಷ್ಟೇ ಅವರು ತಮ್ಮ ಕುಟುಂಬದೊಂದಿಗೆ ಈ ಐಷಾರಾಮಿ 5 ಬೆಡ್ರೂಮ್ ಅಪಾರ್ಟ್ಮೆಂಟ್’ಗೆ ಸ್ಥಳಾಂತರಗೊಂಡಿದ್ದರು.
ಹೊಸ ಮನೆಗೆ ಶಿಫ್ಟ್ ಆಗುವುದರ ಜೊತೆಗೆ, ಯಶಸ್ವಿ ಕೆಲವು ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ. ಅದ್ಭುತವಾದ ಮನೆಯನ್ನು ಅಲಂಕರಿಸಿದ್ದಕ್ಕಾಗಿ ನೆಸ್ಟರ್ರಾ ಹೋಮ್ ಡೆಕೋರ್’ಗೆ ಧನ್ಯವಾದ ಕೂಡ ಹೇಳಿದ್ದಾರೆ.
ಯಶಸ್ವಿ ಜೈಸ್ವಾಲ್ ಭಾರತದ T20 ಮತ್ತು ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ್ದು, ಇಲ್ಲಿಯವರೆಗೆ ಸಾಕಷ್ಟು ರನ್ ಗಳಿಸಿದ್ದಾರೆ. 7 ಟೆಸ್ಟ್ ಪಂದ್ಯಗಳಲ್ಲಿ 70 ಕ್ಕಿಂತ ಹೆಚ್ಚಿನ ಸರಾಸರಿಯೊಂದಿಗೆ 861 ರನ್ ಗಳಿಸಿದ್ದರೆ, ಇದರಲ್ಲಿ 2 ದ್ವಿಶತಕ, 3 ಶತಕ ಹಾಗೂ ಅರ್ಧ ಶತಕ ಸೇರಿದೆ. ಇನ್ನೊಂದೆಡೆ 17 T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ, 160 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್’ನಲ್ಲಿ 4 ಅರ್ಧ ಶತಕ ಮತ್ತು 1 ಶತಕದೊಂದಿಗೆ 502 ರನ್ ಗಳಿಸಿದ್ದಾರೆ.