ಎಳನೀರನ್ನು ಆರೋಗ್ಯಕ್ಕೆ ಬಹಳಷ್ಟು ಒಳ್ಳೆಯದು ಎಂದು ಹೇಳಲಾಗುತ್ತದೆ. ಆದರೆ ಅತಿಯಾದರೆ ಅಮೃತವೂ ವಿಷ ಎಂಬಂತೆ, ಎಳನೀರನ್ನು ಮಿತಿಗಿಂತ ಹೆಚ್ಚು ಕುಡಿದರೆ ದೇಹಕ್ಕೆ ಹಾನಿಕಾರ ಖಂಡಿತ. ಯಾವ ರೀತಿ ಅಪಾಯವನ್ನು ತಂದೊಡ್ಡುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
ಎಳನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಶೀತದಂತಹ ಸಮಸ್ಯೆಗಳು ಬರುವುದು ಖಂಡಿತ. ಇವಿಷ್ಟೇ ಅಲ್ಲದೆ, ಕಡಿಮೆ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು ತೆಂಗಿನ ನೀರನ್ನು ಕುಡಿಯಬಾರದು.
ಎಳನೀರಿನಲ್ಲಿ ಪೊಟ್ಯಾಸಿಯಮ್ ಹೇರಳವಾಗಿದ್ದು, ಮಿತಿಯಲ್ಲಿ ಸೇವಿಸದಿದ್ದರೆ ಮೂತ್ರಪಿಂಡದ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಎಳನೀರನ್ನು ಹೆಚ್ಚು ಕುಡಿದರೆ ದೇಹದ ಎಲೆಕ್ಟ್ರೋಲೈಟ್ಗಳನ್ನು ಅಸಮತೋಲನಗೊಳ್ಳಬಹುದು. ಬಳಿಕ ದೇಹದಲ್ಲಿ ಪೊಟ್ಯಾಸಿಯಂ ಹೆಚ್ಚಾದರೆ ಆ ವ್ಯಕ್ತಿ ಪಾರ್ಶ್ವವಾಯುವಿಗೆ ತುತ್ತಾಗುವ ಸಾಧ್ಯತೆಯಿದೆ.
ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫಾರ್ಮೇಶನ್ ವೆಬ್ಸೈಟ್ನಲ್ಲಿ ಪ್ರಕಟವಾದ ವರದಿಯ ಪ್ರಕಾರ ಕೆಲವರಿಗೆ ತೆಂಗಿನ ಮರದಿಂದ ಅಲರ್ಜಿ ಉಂಟಾಗುತ್ತದೆಯಂತೆ.
ಹೆಚ್ಚು ಎಳನೀರನ್ನು ಕುಡಿದರೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಇದು ಹೊಟ್ಟೆಯ ತೊಂದರೆ ಮತ್ತು ಅಸಿಡಿಟಿಗೆ ಕಾರಣವಾಗಬಹುದು.