Hunter 350 Photos: ಮನಸೂರೆಗೊಳಿಸಲಿದೆ Royal Enfield ನ ಹೊಸ ಬೈಕ್, ಲುಕ್ ಮತ್ತು ವಿನ್ಯಾಸ ಬಹಿರಂಗಗೊಳಿಸುವ 5 ಚಿತ್ರಗಳು ಇಲ್ಲಿವೆ

Royal Enfield Hunter 350: ಬೈಕ್ ನಲ್ಲಿ 349 ಸಿಸಿ ಇಂಜಿನ್ ನೀಡಲಾಗಿದೆ. ಇದು ಕಂಪನಿ ಬಿಡುಗಡೆ ಮಾಡಿರುವ ಅತ್ಯಂತ ಹಗುರ ಮತ್ತು ಎರಡನೇ ಅಗ್ಗದ ಬೈಕ್ ಆಗಿದೆ ಎನ್ನಲಾಗುತ್ತಿದೆ. ಈ ಬೈಕ್ ನ ಒಟ್ಟು ತೂಕ 181 ಕೆ.ಜಿಗಳಾಗಿದೆ. ಹೋಲಿಕೆಗಾಗಿ ಹೇಳುವುದಾದರೆ, ಕಂಪನಿಯ ಕ್ಲಾಸಿಕ್ ಮಾಡೆಲ್ ಬೈಕ್ ನ ತೂಕ 195ಕೆ.ಜಿ ಇದೆ. 
 

Royal Enfield Hunter 350 Photos: ರಾಯಲ್ ಎನ್‌ಫೀಲ್ಡ್ ಹಂಟರ್ 350 ಭಾರತದಲ್ಲಿ ಬಿಡುಗಡೆಯಾಗಿದೆ. ಇದನ್ನು ಎರಡು ರೂಪಾಂತರಗಳಾಗಿರುವ - ರೆಟ್ರೋ ಮತ್ತು ಮೆಟ್ರೋ ಸಿರೀಸ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಬೈಕಿನ ಬೆಲೆಯು 1.49 ಲಕ್ಷದಿಂದ ಪ್ರಾರಂಭವಾಗುತ್ತದೆ ಮತ್ತು 1.69 ಲಕ್ಷದವರೆಗೆ (ಎಕ್ಸ್ ಶೋ ರೂಂ) ವರೆಗೆ ಇರಲಿದೆ. ಕಂಪನಿಯು ಹಂಟರ್ 350 ಬುಕ್ಕಿಂಗ್ ಅನ್ನು ಸಹ ಪ್ರಾರಂಭಿಸಿದೆ. ಇದರ ಟೆಸ್ಟ್ ಡ್ರೈವ್ ಆಗಸ್ಟ್ 10 ರಿಂದ ಪ್ರಾರಂಭವಾಗಲಿದೆ. ಇದಕ್ಕೆ 349 ಸಿಸಿ ಎಂಜಿನ್ ನೀಡಲಾಗಿದ್ದು, ಇದು ಕಂಪನಿ ಬಿಡುಗಡೆ ಮಾಡಿರುವ ಅತ್ಯಂತ ಹಗುರವಾದ ಬೈಕ್ ಆಗಿದೆ. ಇದರ ತೂಕ ಕೇವಲ 181 ಕೆಜಿ ಇದೆ. ಹೋಲಿಕೆಗಾಗಿ ಹೇಳುವುದಾದರೆ, ಕಂಪನಿಯ ಕ್ಲಾಸಿಕ್ 350 ಸುಮಾರು 195 ಕೆಜಿ ತೂಗುತ್ತದೆ. ಇಂದು ನಾವು ನಿಮಗೆ ಇಲ್ಲಿ ಬೈಕ್ ನ 5 ಚಿತ್ರಗಳ ಮೂಲಕ ಅದರ ನೋಟ ಮತ್ತು ವಿನ್ಯಾಸದ ಕುರಿತು ಮಾಹಿತಿಯನ್ನು ನೀಡಲು ಪ್ರಯತ್ನಿಸುತ್ತಿದ್ದೇವೆ.

 

ಇದನ್ನೂ ಓದಿ-Brezza vs Venue: 8 ಲಕ್ಷದೊಳಗಿನ ಸಣ್ಣ SUV ಗಳಿಗೆ ದೊಡ್ಡ ಸ್ಪರ್ಧೆ, ಯಾವುದನ್ನು ಖರೀದಿಸಬೇಕು?

 

ಬೈಕ್ ನಿಯೋ-ರೆಟ್ರೊ ವಿನ್ಯಾಸವನ್ನು ಹೊಂದಿದೆ. ಬೈಕು ದುಂಡಾಕಾರದ ಹೆಡ್‌ಲ್ಯಾಂಪ್‌ಗಳು, ಇಂಡಿಕೇಟರ್‌ಗಳು ಮತ್ತು ಉದ್ದವಾದ ಒನ್-ಪೀಸ್ ಸೀಟ್ ಅನ್ನು ಹೊಂದಿದೆ. ಇದಲ್ಲದೆ, ಡ್ಯುಯಲ್ ಟೋನ್ ಇಂಧನ ಟ್ಯಾಂಕ್ ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಬೈಕ್ ಗೆ ಆಧುನಿಕ ಆಕರ್ಷಣೆಯನ್ನು ನೀಡುತ್ತಿದೆ. ಇದು ಎಲೆಕ್ಟ್ರಿಕ್ ಸ್ಟಾರ್ಟರ್ ಮತ್ತು ಟ್ರಿಪ್ಪರ್ ನ್ಯಾವಿಗೇಷನ್ ಪಾಡ್‌ನಂತಹ ವೈಶಿಷ್ಟ್ಯಗಳನ್ನು ಸಹ ಒಳಗೊಂಡಿದೆ.

 

ಇದನ್ನೂ ಓದಿ-Royal Enfield Hunter 350 ಭಾರತದಲ್ಲಿ ಬಿಡುಗಡೆ, ಕಂಪನಿಯ ಅತ್ಯಂತ ಹಗುರ ಬೈಕ್ ನ ಬೆಲೆ ಎಷ್ಟು ಗೊತ್ತಾ?

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
  

1 /5

1. ರಾಯಲ್ ಎನ್‌ಫೀಲ್ಡ್ ಹಂಟರ್ 350 ಎರಡು ರೂಪಾಂತರಗಳಲ್ಲಿ ಅಂದರೆ, ಮೆಟ್ರೋ ಮತ್ತು ರೆಟ್ರೋದಲ್ಲಿ ಮಾರಾಟವಾಗಲಿದೆ. ರೆಟ್ರೊ ಮಾದರಿಯು ಸಿಂಗಲ್-ಟೋನ್ ಪೇಂಟ್ ಸ್ಕೀಮ್ ಅನ್ನು ಹೊಂದಿದ್ದರೆ, ಮೆಟ್ರೋ ಮಾದರಿ ಡ್ಯುಯಲ್-ಟೋನ್ ಫಿನಿಶಿಂಗ್ ಹೊಂದಿದೆ.  

2 /5

2. ರಾಯಲ್ ಎನ್‌ಫೀಲ್ಡ್ ಹಂಟರ್ 350 ನಲ್ಲಿ ಬ್ರೇಕಿಂಗ್‌ಗಾಗಿ ಎರಡು ಗಾಲಿಗಳಲ್ಲಿ ಡಿಸ್ಕ್ ಸಿಸ್ಟಂ ನೀಡಲಾಗಿದೆ. ಶಾಕ್ ಅಬ್ಸಾರ್ಬರ್‌ಗಳಿಗಾಗಿ, ಇದು ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳನ್ನು ಮತ್ತು ಆರು-ಹಂತದ ಪ್ರಿಲೋಡ್-ಹೊಂದಾಣಿಕೆ ಮಾಡಬಹುದಾದ ಹಿಂಭಾಗದ ಸ್ಪ್ರಿಂಗ್ ಅನ್ನು ಹೊಂದಿದೆ.  

3 /5

3. ಮೋಟಾರ್‌ಸೈಕಲ್ ಸ್ವಲ್ಪ ಭಾಗದಲ್ಲಿ ಡಿಜಿಟಲ್ ಆಗಿರುವ ವೃತ್ತಾಕಾರದ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹೊಂದಿದೆ. ಇದರಲ್ಲಿ ಟ್ರಿಪ್ಪರ್ ನ್ಯಾವಿಗೇಶನ್ ಕೂಡ ಇದ್ದು, ಅದು ಬ್ಲೂಟೂತ್ ಸಂಪರ್ಕದ ಮೂಲಕ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಅನ್ನು ನೀಡುತ್ತದೆ.

4 /5

4. ಹೊಸ ರಾಯಲ್ ಎನ್‌ಫೀಲ್ಡ್ ಹಂಟರ್ 350 349cc ಸಿಂಗಲ್-ಸಿಲಿಂಡರ್, ಎರಡು-ವಾಲ್ವ್, SOHC, ಏರ್/ಆಯಿಲ್-ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇಂಜಿನ್ ಅನ್ನು ಐದು-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇದು 4,000 rpm ನಲ್ಲಿ 27Nm ಟಾರ್ಕ್ ಮತ್ತು 6,100 rpm ನಲ್ಲಿ 20.2bhp ಶಕ್ತಿಯನ್ನು ಉತ್ಪಾದಿಸುತ್ತದೆ.

5 /5

5. ಬೈಕ್‌ನ ಗರಿಷ್ಠ ವೇಗ ಗಂಟೆಗೆ 114 ಕಿ.ಮೀ. ಆಗಿದೆ ಹಂಟರ್ 350 ಇತ್ತೀಚೆಗೆ ಬಿಡುಗಡೆಯಾದ TVS ರೋನಿನ್ ಮತ್ತು ಹೋಂಡಾ CB 350 RS ಮತ್ತು ಜಾವಾ 42 ಗಳೊಂದಿಗೆ ಮಾರುಕಟ್ಟೆಯಲ್ಲಿ ಸ್ಪರ್ಧೆಗಿಳಿಯಲಿದೆ.