Mobile Data Speed Trick: ನಿಮ್ಮ ಸ್ಮಾರ್ಟ್ ಫೋನ್ ನಲ್ಲಿಯೂ ಕೊಡ ಇಂಟರ್ನೆಟ್ ವೇಗ ಕಡಿಮೆ ಇದೆಯೇ, ಈ ರೀತಿ ಹೆಚ್ಚಿಸಿ

How to Increase Mobile Internet Speed: ತಂತ್ರಜ್ಞಾನದ ಈ ಯುಗದಲ್ಲಿ ಸ್ಮಾರ್ಟ್ ಫೋನ್ ಹಾಗೂ ಇಂಟರ್ನೆಟ್ ಬಳಸದೆ ಇರುವ ಯಾವುದೇ ವ್ಯಕ್ತಿ ಇರುವುದು ತೀರಾ ವಿರಳ. 

How to Increase Mobile Internet Speed: ತಂತ್ರಜ್ಞಾನದ ಈ ಯುಗದಲ್ಲಿ ಸ್ಮಾರ್ಟ್ ಫೋನ್ ಹಾಗೂ ಇಂಟರ್ನೆಟ್ ಬಳಸದೆ ಇರುವ ಯಾವುದೇ ವ್ಯಕ್ತಿ ಇರುವುದು ತೀರಾ ವಿರಳ. ಆದರೆ, ಹಲವು ಬಾರಿ ನಮ್ಮ ಸ್ಮಾರ್ಟ್ ಫೋನ್ ಗಳಲ್ಲಿಯೂ ಕೂಡ ಇಂಟರ್ನೆಟ್ ವೇಗ ತುಂಬಾ ಕಡಿಮೆ ಇರುತ್ತದೆ. ಇದರಿಂದ ಹಲವು ಕೆಲಸಗಳಲ್ಲಿ ಅಡಚಣೆ ಎದುರಾಗುತ್ತದೆ. ಹೀಗಾಗಿ ಇಂದು ನಾವು ನಿಮಗೆ ಹೇಳಲು ಹೊರಟಿರುವ ಇಂಟರ್ನೆಟ್ ಟ್ರಿಕ್ ಬಳಸಿ ನೀವು ನಿಮ್ಮ ಸ್ಮಾರ್ಟ್ ಫೋನ್ ಇಂಟರ್ನೆಟ್ ವೇಗವನ್ನು ಸೂಪರ್ ಫಾಸ್ಟ್ ಗೆ ಪರಿವರ್ತಿಸಬಹುದು.

 

ಇದನ್ನೂ ಓದಿ-Cheapest Recharge: ಮಾರುಕಟ್ಟೆಗೆ ಎರಡು ಹೊಸ ಪ್ಲಾನ್ ಬಿಡುಗಡೆ ಮಾಡಿದ ವೊಡಾಫೋನ್-ಐಡಿಯಾ

 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

1 /5

1. ಇಂಟರ್ನೆಟ್ ಸ್ಪೀಡ್ ಏಕೆ ಕಡಿಮೆಯಾಗುತ್ತದೆ? - ನಿಮ್ಮ ಫೋನ್‌ನಲ್ಲಿ  ಇಂಟರ್ನೆಟ್ ವೇಗವು ಕಡಿಮೆಯಾಗಲು ಕಾರಣ, ನಿಮ್ಮ ಸ್ಮಾರ್ಟ್ ಫೋನ್ ನಿಧಾನವಾದ ನೆಟ್‌ವರ್ಕ್ ಬ್ಯಾಂಡ್‌ವಿಡ್ತ್ ಅನುಸರಿಸುತ್ತಿದೆ ಎಂದರ್ಥ, ನೆಟ್‌ವರ್ಕ್ ಪೂರೈಕೆದಾರರು ವಿಭಿನ್ನ ಬ್ಯಾಂಡ್‌ವಿಡ್ತ್‌ಗಳ ನೆಟ್‌ವರ್ಕ್‌ಗಳನ್ನು ಹೊಂದಿರುತ್ತಾರೆ, ಇವುಗಳಲ್ಲಿ 3G, 4G ಮತ್ತು LTE ಶಾಮೀಲಾಗಿವೆ.

2 /5

2. ಸೆಟ್ಟಿಂಗ್ ನಲ್ಲಿ ಈ ಬದಲಾವಣೆಗಳನ್ನು ಮಾಡಿ - ಕೆಲವೊಮ್ಮೆ ನಿಮ್ಮ ಫೋನ್ ಸ್ವಯಂಚಾಲಿತವಾಗಿ ನಿಧಾನವಾದ ಬ್ಯಾಂಡ್‌ವಿಡ್ತ್‌ಗೆ ಬದಲಾಗುತ್ತದೆ ಇದರಿಂದ ನೀವು ಯಾವಾಗಲೂ ಇಂಟರ್ನೆಟ್‌ಗೆ ಸಂಪರ್ಕ ಹೊಂದಿರುತ್ತೀರಿ. ವ್ಯಾಪ್ತಿಗೆ ಹಿಂತಿರುಗಿದ ನಂತರವೂ ಫೋನ್ ಸ್ವಯಂಚಾಲಿತವಾಗಿ ವೇಗವಾದ ಬ್ಯಾಂಡ್‌ವಿಡ್ತ್‌ನೊಂದಿಗೆ ನೆಟ್‌ವರ್ಕ್‌ಗೆ ಬದಲಾಗುವುದಿಲ್ಲ ಎಂಬುದನ್ನು ಹಲವು ಬಾರಿ ಗಮನಿಸಲಾಗಿದೆ. ನಿಮ್ಮ ಫೋನ್‌ನ ಸೆಟ್ಟಿಂಗ್‌ ವಿಭಾಗಕ್ಕೆ ಹೋಗಿ ನೀವು ಅದನ್ನು ಬದಲಾಯಿಸಬಹುದು.

3 /5

3. ಈ ಸಲಹೆಗಳನ್ನು ಅನುಸರಿಸಿ - ಮೊದಲನೆಯದಾಗಿ, ನಿಮ್ಮ ಸ್ಮಾರ್ಟ್‌ಫೋನ್‌ನ ಸೆಟ್ಟಿಂಗ್‌ ವಿಭಾಗಕ್ಕೆ ಹೋಗಿ ಮತ್ತು 'ನೆಟ್‌ವರ್ಕ್ ಆಪರೇಟರ್‌ಗಳು' ಆಯ್ಕೆಯನ್ನು ಆಯ್ದುಕೊಳ್ಳಿ. ಇಲ್ಲಿ ನೀವು 'ಸ್ವಯಂಚಾಲಿತವಾಗಿ ಆರಿಸಿ' ಹೆಸರಿನ ಆಯ್ಕೆಯನ್ನು ಗಮನಿಸುವಿರಿ, ಅದನ್ನು ಆಫ್ ಮಾಡಿ.

4 /5

4. ಈ ರೀತಿ ಮೊಬೈಲ್ ಡೇಟಾ ವೇಗವನ್ನು ಹೆಚ್ಚಿಸಿ - ನೀವು ಆ ಆಯ್ಕೆಯನ್ನು ಆಫ್ ಮಾಡಿದ ತಕ್ಷಣ, ನೆಟ್‌ವರ್ಕ್ ಪೂರೈಕೆದಾರರ ಪಟ್ಟಿ ನಿಮ್ಮ ಮುಂದೆ ಕಾಣಿಸಿಕೊಳ್ಳುತ್ತದೆ, ಅದರಲ್ಲಿ ನೀವು ನಿಮ್ಮ ಟೆಲಿಕಾಂ ಕಂಪನಿಯ ಆಯ್ಕೆಯನ್ನು ಆಯ್ದುಕೊಳ್ಳಬೇಕು. ನಿಮ್ಮ ಕಂಪನಿಯನ್ನು ಆಯ್ಕೆ ಮಾಡಿದ ನಂತರ ಫೋನ್‌ನ ಸೆಟ್ಟಿಂಗ್‌ಗಳನ್ನು ಮುಚ್ಚಿ ಮತ್ತು ನಿಮ್ಮ ಫೋನ್ ಅನ್ನು ಒಮ್ಮೆ ರೀಸ್ಟಾರ್ಟ್ ಮಾಡಿ. ಈ ರೀತಿಯಾಗಿ ನೀವು ಫೋನ್‌ನ ವೇಗವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ

5 /5

5. ಈ ವಿಷಯವನ್ನು ನೆನಪಿನಲ್ಲಿಡಿ -ಸಾಮಾನ್ಯವಾಗಿ ನೀವು ಪ್ರತಿಯೊಂದು ಸನ್ನಿವೇಶದಲ್ಲಿಯೂ ಈ ಟ್ರಿಕ್ ಅನ್ನು ಬಳಸಬಹುದು, ಆದರೆ ಕೆಲವೊಮ್ಮೆ ನೀವು ಕಂಪನಿಯು ಹೆಚ್ಚಿನ ಟವರ್ಹೊಂದಿರದ ಪ್ರದೇಶಗಳಲ್ಲಿರಬಹುದು. ಅಂತಹ ಸ್ಥಳಗಳಲ್ಲಿ , ಈ ಟ್ರಿಕ್ ಕಾರ್ಯನಿರ್ವಹಿಸುವುದಿಲ್ಲ. ಏಕೆಂದರೆ ಉತ್ತಮ ಡೇಟಾ ವೇಗವನ್ನು ನೀಡುವಲ್ಲಿ ನೆಟ್‌ವರ್ಕ್ ಪೂರೈಕೆದಾರರಿಗೆ ತೊಂದರೆ ಎದುರಾಗಬಹುದು.