Reliance Jio eSIM: Jio ಬಳಕೆದಾರರಿಗೊಂದು ಸಂತಸದ ಸುದ್ದಿ, ಕರೆ ಮಾಡಲು ಫೋನ್ ಗೆ ಬೇಕಿಲ್ಲ ಸಿಮ್

Reliance Jio eSIM - ಭಾರತೀಯ ಮಾರುಕಟ್ಟೆಯಲ್ಲಿರುವ ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರಿಗೆ ಸಾಧನಗಳಲ್ಲಿ eSIM ಬೆಂಬಲ ಒದಗಿಸುತ್ತಿವೆ. 

ನವದೆಹಲಿ:  Reliance Jio eSIM - ಭಾರತೀಯ ಮಾರುಕಟ್ಟೆಯಲ್ಲಿರುವ ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರಿಗೆ ಸಾಧನಗಳಲ್ಲಿ eSIM ಬೆಂಬಲ ಒದಗಿಸುತ್ತಿವೆ. eSIM ಅಥವಾ ಎಂಬೆಡೆಡ್ ಸಬ್ ಸ್ಕ್ರೈಬರ್ ಐಡೆಂಟಿಟಿ ಮಾಡ್ಯೂಲ್  ಅನ್ನು ನೇರವಾಗಿ ಫೋನ್‌ಗೆ ಎಂಬೆಡ್ ಮಾಡಲಾಗುತ್ತದೆ. ಫೋನ್‌ನಲ್ಲಿ ಈ ರೀತಿಯ ಸಿಮ್‌ಗಳನ್ನು ನೀಡಿದರೆ, ಫೋನ್ ನಲ್ಲಿನ ಉಳಿಸುತ್ತದೆ, ಹಾಗೆಯೇ ಪ್ರತ್ಯೇಕ ಸಿಮ್ ಟ್ರೇ ಮಾಡುವ ಅಗತ್ಯವಿಲ್ಲ. ಇದು ಯಾವುದೇ ಮೊಬೈಲ್ ಸಾಧನದ ರಿಮೋಟ್ ಸಿಮ್ ಒದಗಿಸುವಿಕೆಯನ್ನು ಶಕ್ತಗೊಳಿಸುತ್ತದೆ. ಅಂದರೆ, eSIM ಬಳಕೆದಾರರು ಫೋನ್‌ಗೆ ಸಿಮ್ ಸೇರಿಸದೆಯೇ ಟೆಲಿಕಾಂ ಸೇವೆಗಳನ್ನು ಬಳಸಬಹುದು. ಇತ್ತೀಚಿನ ದಿನಗಳಲ್ಲಿ, eSIM ಅನೇಕ ಫೋನ್‌ಗಳಲ್ಲಿ ಟ್ರೆಂಡಿಂಗ್ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ, ನೀವು Reliance Jio ಬಳಕೆದಾರರಾಗಿದ್ದರೆ, ನೀವೂ ಕೂಡ ನಿಮ್ಮ ಹತ್ತಿರದ ಯಾವುದೇ ಜಿಯೋ ಅಂಗಡಿಯಿಂದ ಈ ರೀತಿಯ ಸಿಮ್ ಪಡೆದುಕೊಳ್ಳಬಹುದು. ಈ eSIM ಗಳನ್ನು ಫೋನ್ ನಲ್ಲಿ ಹೇಗೆ ಸಕ್ರೀಯಗೊಳಿಸಬಹುದು ಎಂಬುದರ ಕುರಿತು ಇಲ್ಲಿದೆ ವಿಸ್ತ್ರತ ಮಾಹಿತಿ.

 

ಇದನ್ನೂ ಓದಿ- JIOPHONE 2021 - ಟೆಲಿಕಾಂ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಮುಂದಾದ Reliance Jio

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /3

1. Jio e SIM ಹೇಗೆ ಪಡೆಯಬೇಕು? (How To Buy Jio eSIM) - ಒಂದು ವೇಳೆ ನೀವೂ ಕೂಡ Reliance Jio eSIM ಲಾಭ ಪಡೆಯಲು ಬಯಸುತ್ತಿದ್ದರೆ, ನೀವು ನಿಮ್ಮ ಹತ್ತಿರದಲ್ಲಿರುವ Reliance Digital ಅಥವಾ Jio Store ಗೆ ಭೇಟಿ ನೀಡಬೇಕು. ಅಲ್ಲಿ ನೀವು ನಿಮ್ಮ ಫೋಟೋ ಹಾಗೂ ಐಡಿ ಪ್ರೂಫ್ ನೀಡಬೇಕು. ಒಂದು ವೇಳೆ ನಿಮ್ಮ ಹತ್ತಿರದಲ್ಲಿರುವ ಜಿಯೋ ಸ್ಟೋರ್ ಬಗ್ಗೆ ನಿಮಗೆ ಮಾಹಿತಿ ಇಲ್ಲ ಎಂದಾದರೆ ನೀವು ಟೆಲ್ಕೋ ನೀಡಿರುವ ಟೂಲ್ ಅನ್ನು ಉಪಯೋಗಿಸಬಹುದು. ಇದು ನಿಮಗೆ ನಿಮ್ಮ ಹತ್ತಿರದಲ್ಲಿರುವ ಟೆಲಿಕಾಂ ಕಚೇರಿ ಪತ್ತೆಹಚ್ಚಲು ಸಹಾಯ ಮಾಡುತ್ತದೆ.

2 /3

2. ಹೊಸ Jio eSIM ಹೇಗೆ ಸಕ್ರೀಯಗೊಳಿಸಬೇಕು? (How To Activate eSIM) - ಹೊಸ Jio eSIM ಸಂಪರ್ಕವನ್ನು ಸಕ್ರಿಯಗೊಳಿಸಲು, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಒಂದು ವೈಶಿಷ್ಟ್ಯವನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. eSIM ಹೊಂದಾಣಿಕೆಯ ಡಿವೈಸ್ ಗಳು ಈ ಸಿಮ್ ಅನ್ನು ಸ್ವಯಂಚಾಲಿತವಾಗಿ ಕಾನ್ಫಿಗರ್ ಮಾಡಿಕೊಳ್ಳುತ್ತವೆ. ಒಂದು ವೇಳೆ ನೀವು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿರುವ  eSIM ಅನ್ನು ಆಕಸ್ಮಿಕವಾಗಿ ಅಳಿಸಿದರೆ, ನೀವು ಮತ್ತೆ ಹತ್ತಿರದ ರಿಲಯನ್ಸ್ ಡಿಜಿಟಲ್ ಮತ್ತು ಜಿಯೋ ಅಂಗಡಿಗೆ ಹೋಗಿ ಅದನ್ನು ಮತ್ತೆ ಸಕ್ರಿಯಗೊಳಿಸಬೇಕಾಗುತ್ತದೆ. ಈ ಬಾರಿಯೂ ಕೂಡ ನೀವು  ಫೋಟೋ ಮತ್ತು ಐಡಿ ಪ್ರೂಫ್‌ನ ಪ್ರತಿ ನೀಡಬೇಕಾಗುತ್ತದೆ.

3 /3

3. ಭೌತಿಕ SIM ಕಾರ್ಡ್ ಅನ್ನು eSIM ಆಗಿ ಪರಿವರ್ತಿಸಬಹುದೇ? - ಈಗ ನೀವು ಭೌತಿಕ SIM ಕಾರ್ಡ್ ಅನ್ನು eSIM ಆಗಿ ಪರಿವರ್ತಿಸಬಹುದೇ? ಎಂಬುದರ ಕುರಿತು ಯೋಚಿಸುತ್ತಿರಬಹುದು. ಇದರ ಉತ್ತರ ಹೌದು! ನೀವು ನಿಮ್ಮ Reliance Jio ಭೌತಿಕ SIM ಕಾರ್ಡ್ ಅನ್ನು ನಿಮ್ಮ ಡಿವೈಸ್ ನಿಂದ ಒಂದು SMS ಕಳುಹಿಸುವ ಮೂಲಕ eSIM ಗೆ ಪರಿವರ್ತಿಸಬಹುದು. ಏಕೆಂದರೆ ಈಗಾಗಲೇ ನಿಮ್ಮ ಡಿವೈಸ್ ನಲ್ಲಿ ಕನೆಕ್ಷನ್ ಸಕ್ರೀಯವಾಗಿದ್ದು, ಸಿಮ್ ಕಾನ್ಫಿಗರ್ ಕೂಡ ಆಗಿರುತ್ತದೆ. ಇದೆ ಪ್ರೋಸೆಸ್ ಅನ್ನು ಬಳಸಿ ನೀವು ನಿಮ್ಮ Jio eSIM ಅನ್ನು ಮತ್ತೆ ನಾರ್ಮಲ್ ಭೌತಿಕ SIM ಕಾರ್ಡ್ ಆಗಿ ಪರಿವರ್ತಿಸಬಹುದು. ಆದರೆ, ಬಳಕೆದಾರರು Jio eSIM ಸೇವೆಗಳನ್ನು ಆನಂದಿಸಲು ಮೊದಲು ತಮ್ಮ ಡಿವೈಸ್ eSIM ಬಳಕೆಯನ್ನು ಸಮರ್ಥಿಸುತ್ತದೆಯೋ ಇಲ್ಲವೋ ಎಂಬುದನ್ನು ಮೊದಲು ತಿಳಿಯಬೇಕಾಗಲಿದೆ.