ಖಾಸಗಿ ಅಂಗದಲ್ಲಿ ತುರಿಕೆ ಸಮಸ್ಯೆಗೆ ಮನೆಮದ್ದು

ನೀವು ನಿಮ್ಮ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳನ್ನು ಬಳಸಿಯೂ ಕೂಡ   ಜನನಾಂಗಗಳಲ್ಲಿ ತುರಿಕೆ ಸಮಸ್ಯೆಗೆ ಪರಿಹಾರವನ್ನು ಪಡೆಯಬಹುದು.

ನೈರ್ಮಲ್ಯ, ಬೇಸಿಗೆಯಲ್ಲಿ ಅತಿಯಾದ ಬೆವರುವಿಕೆ, ಬಿಗಿಯಾದ ಉಡುಪುಗಳನ್ನು ಧರಿಸುವುದು ಹೀಗೆ ಹಲವು ಕಾರಣಗಳಿಂದಾಗಿ ಖಾಸಗಿ ಅಂಗದಲ್ಲಿ ತುರಿಕೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಪುರುಷರು ಹಾಗೂ ಮಹಿಳೆಯರೂ ಇಬ್ಬರಲ್ಲೂ ಕೂಡ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆಯು ಹಲವು ಬಾರಿ ಜನರನ್ನು ಮುಜುಗರಕ್ಕೆ ಒಳಗಾಗುವಂತೆಯೂ ಮಾಡುತ್ತದೆ. ಇದನ್ನು ತಪ್ಪಿಸಲು ಮಾರುಕಟ್ಟೆಯಲ್ಲಿ ಹಲವು ಔಷಧಿಗಳು ಲಭ್ಯವಿದೆ. ಆದರೆ, ನೀವು ನಿಮ್ಮ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳನ್ನು ಬಳಸಿಯೂ ಕೂಡ   ಜನನಾಂಗಗಳಲ್ಲಿ ತುರಿಕೆ ಸಮಸ್ಯೆಗೆ ಪರಿಹಾರವನ್ನು ಪಡೆಯಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ ಮತ್ತು ಆಂಟಿವೈರಲ್ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿರುವ ಟೀ ಟ್ರೀ ಆಯಿಲ್ ಅನ್ನು ಖಾಸಗಿ ಭಾಗದಲ್ಲಿ ಹಚ್ಚಿ ಸ್ವಲ್ಪ ಸಮಯದ ನಂತರ ಶುದ್ಧವಾದ ನೀರಿನಿಂದ ವಾಶ್ ಮಾಡಿ. ಈ ರೀತಿ ಮಾಡುವುದರಿಂದ ಜನನಾಂಗಗಳಲ್ಲಿ ತುರಿಕೆ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.

2 /5

ಆಯುರ್ವೇದದಲ್ಲಿ ಬೇವಿನ ಸೊಪ್ಪನ್ನು ಔಷಧೀಯ ಗುಣಗಳ ಆಗರ ಎಂದು ಬಣ್ಣಿಸಲಾಗಿದೆ. ಅದರಲ್ಲಿರುವ ಆಂಟಿಫಂಗಲ್ ಗುಣಲಕ್ಷಣಗಳು ಸೋಂಕು ಮತ್ತು ತುರಿಕೆಗೆ ದಿವ್ಯೌಷಧ ಎಂಬುದರಲ್ಲಿ ಅನುಮಾನವೇ ಇಲ್ಲ. ಇದಕ್ಕಾಗಿ, ನೀವು ಸ್ನಾನ ಮಾಡುವ ನೀರಿನಲ್ಲಿ ಬೇವಿನ ಎಲೆಗಳನ್ನು ಹಾಕಿ ಒಂದು ಗಂಟೆ ಬಿಟ್ಟು ಆ ನೀರಿನಿಂದ ಸ್ನಾನ ಮಾಡಿ. 

3 /5

ರೋಸ್ಮರಿ ಎನ್ನುವುದು ಒಂದು ಸುವಾಸನಾಭರಿತ, ನಿತ್ಯ ಹರಿದ್ವರ್ಣ ಸಸ್ಯ. ಚೂಪಾದ ಎಲೆ ಹೊಂದಿರುವ ರೋಸ್‌ಮರಿ ಬಿಳಿ, ಗುಲಾಬಿ, ನೀಲಿ ಹಾಗೂ ನೇರಳೆ ಬಣ್ಣದ ಹೂವು ಬಿಡುತ್ತದೆ. ಈ ರೋಸ್‌ಮರಿ ಎಲೆಗಳು ಚರ್ಮದ ಸಮಸ್ಯೆಗಳಿಗೆ ನೈಸರ್ಗಿಕ ಮನೆಮದ್ದಾಗಿದೆ. ವಿಟಮಿನ್ ಎ, ವಿಟಮಿನ್ ಬಿ ಮತ್ತು ವಿಟಮಿನ್ ಸಿ ನಂತಹ ಪೋಷಕಾಂಶಗಳನ್ನು ಹೊಂದಿರುವ ರೋಸ್ಮರಿ ಎಲೆಗಳನ್ನು ನೀರಿನಲ್ಲಿ ಕುದಿಸಿ ಅದು ತಣ್ಣಗಾದ ನಂತರ ಆ ನೀರಿನಿಂದ ಸ್ನಾನ ಮಾಡುವುದರಿಂದ ತುರಿಕೆ ಸಮಸ್ಯೆಯಿಂದ ಪರಿಹಾರ ದೊರೆಯುತ್ತದೆ.

4 /5

ಸಾಮಾನ್ಯವಾಗಿ ತೂಕ ಇಳಿಕೆಯಲ್ಲಿ ಪರಿಣಾಮಕಾರಿ ಎಂದು ಪರಿಗಣಿಸಲ್ಪಟ್ಟಿರುವ ಆಪಲ್ ಸೈಡರ್ ವಿನೆಗರ್ ಕೂಡ ಚರ್ಮದ ಸಮಸ್ಯೆಗಳನ್ನು ನಿವಾರಿಸಲು ಬಹಳ ಪರಿಣಾಮಕಾರಿ ಆಗಿದೆ. ಇದಕ್ಕಾಗಿ ಒಂದು ಲೋಟ ನೀದಿರಲ್ಲಿ ಎರಡು ಚಮಚ ಆಪಲ್ ಸೈಡರ್ ವಿನೆಗರ್ ಅನ್ನು ಹಾಕಿ ಪ್ರತಿ ದಿನ ಈ ನೀರಿನಿಂದ ಖಾಸಗಿ ಅಂಗವನ್ನು ವಾಶ್ ಮಾಡುವುದರಿಂದ ತುರಿಕೆ ಸಮಸ್ಯೆಗೆ ಮುಕ್ತಿ ದೊರೆಯಲಿದೆ.

5 /5

ಸಾಮಾನ್ಯವಾಗಿ ಯಾವುದೇ ಸಣ್ಣ ಪುಟ್ಟ ಗಾಯವಾದಾಗ ಮೊದಲು ಕೊಬ್ಬರಿ ಎಣ್ಣೆಯನ್ನು ಬಳಸುತ್ತೇವೆ. ಜನನಾಂಗದಲ್ಲಿನ ತುರಿಕೆಗೂ ಕೂಡ ಕೊಬ್ಬರಿ ಎಣ್ಣೆ ಅತ್ಯುತ್ತಮ ಮನೆಮದ್ದಾಗಿದೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.