ಹೋಳಿ ಹುಣ್ಣಿಮೆ ದಿನ ಈ ಸಣ್ಣ ಕೆಲಸ ಮಾಡಿ.. ನಿಮ್ಮ ಮನೆಯಲ್ಲಿರುವ ದಾರಿದ್ರ್ಯ ನಿವಾರಣೆಯಾಗುತ್ತದೆ..!

Holi 2024 Pooja Vidhi : ಹೋಳಿ ಹಬ್ಬದ ದಿನ ಮಾಡುವ ಪೂಜೆಗಳು ಜೀವನದಲ್ಲಿ ಪಾಸಿಟಿವ್ ಫಲಿತಾಂಶಗಳನ್ನು ತರುತ್ತವೆ.‌  ಈ ದಿನದಂದು ಮಾಡುವ ಒಂದು ಪುಟ್ಟ ಕೆಲಸ ನಿಮ್ಮ ಹಣೆಬರಹವನ್ನೇ ಬದಲಿಸಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

ಹೋಳಿ ಹುಣ್ಣಿಮೆ ಪೂಜಾ ವಿಧಾನ - ಹಿಂದೂ ಸಂಪ್ರದಾಯದಲ್ಲಿ ಹಬ್ಬಗಳಿಗೆ ಸಾಕಷ್ಟು ಪ್ರಾಮುಖ್ಯತೆ ನೀಡಲಾಗಿದೆ. ಒಂದೊಂದು ಹಬ್ಬಕ್ಕೂ ಅದರದೇ ಆದ ಮಹತ್ವವಿದೆ. ಈ ಹಬ್ಬಗಳ ಸಮಯದಲ್ಲಿ ನಾವು ಮಾಡುವ ಕೆಲವು ಕೆಲಸಗಳು ನಮ್ಮ ಅದೃಷ್ಟವನ್ನು ಬದಲಿಸಬಹುದು. 

2 /8

ಒಡೆದ ಕನ್ನಡಕ - ಮನೆಯಲ್ಲಿ ಒಡೆದ ಗಾಜು ಇರುವುದು ಅಶುಭ ಸಂಕೇತ. ಇದು ನೆಗೆಟಿವ್‌ ಎನರ್ಜಿಯನ್ನು ಆಕರ್ಷಿಸುತ್ತದೆ. ಇದರಿಂದ ಮನೆಯಲ್ಲಿ ಅಶಾಂತಿ ಮೂಡುತ್ತದೆ. ಕುಟುಂಬದ ಸದಸ್ಯರ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಹೋಳಿ ಹಬ್ಬದ ಪೂಜೆಗಾಗಿ ಮನೆಯನ್ನು ಸ್ವಚ್ಛಗೊಳಿಸುವಾಗ ಒಡೆದ ಗಾಜುಗಳಿದ್ದರೆ, ಅವುಗಳನ್ನು ಹೊರಗೆ ಎಸೆಯಬೇಕು.

3 /8

ಬಣ್ಣಗಳು - ಹೋಳಿ ಬಣ್ಣಗಳ ಹಬ್ಬ. ಹೋಳಿ ಹುಣ್ಣಿಮೆ ಪೂಜೆಯಲ್ಲಿ ಹಳದಿ ಅಥವಾ ಕಿತ್ತಳೆಯಂತಹ ಗಾಢ ಬಣ್ಣಗಳನ್ನು ಬಳಸುವುದರಿಂದ ಅದೃಷ್ಟ ಹೊಳೆಯುತ್ತದೆ. ಈ ಬಣ್ಣಗಳು ಸಂತೋಷ ಮತ್ತು ಸಮೃದ್ಧಿಯ ಸಂಕೇತ. 

4 /8

ಸರಿಯಾದ ದಿಕ್ಕು - ಹೋಳಿ ಹುಣ್ಣಿಮೆಯ ಉತ್ತರ ಅಥವಾ ಪೂರ್ವ ದಿಕ್ಕನ್ನು ಆಯ್ಕೆ ಮಾಡಿಕೊಳ್ಳಬೇಕು. ಈ ದಿಕ್ಕುಗಳು ಮಂಗಳಕರ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಇದರಿಂದ ಪೂಜೆಯ ಫಲ ದೊರೆಯುತ್ತದೆ.

5 /8

ಪೂಜಾ ಕೊಠಡಿ - ಪೂಜಾ ಕೊಠಡಿ ಮನೆಯ ಈಶಾನ್ಯ ದಿಕ್ಕಿನಲ್ಲಿರುವುದು ಉತ್ತಮ. ಈಶಾನ್ಯ‌ ದಿಕ್ಕನ್ನು ಅತ್ಯಂತ ಪವಿತ್ರ ಎಂದು ಪರಿಗಣಿಸುವ ಕಾರಣ ಈ ದಿಕ್ಕಿನಲ್ಲಿ ಹೋಳಿ ಪೂಜೆಯನ್ನು ಮಾಡುವುದರಿಂದ ದೇವರ ಅನುಗ್ರಹ ದೊರೆಯುತ್ತದೆ. 

6 /8

ಮನೆಯನ್ನು ಸ್ವಚ್ಛಗೊಳಿಸಿ - ಚಪ್ಪಲಿ ಮತ್ತು ಬೂಟುಗಳನ್ನು ಮನೆ ಬಾಗಿಲ ಬಳಿ ಇಡಬೇಡಿ, ಅಲ್ಲದೇ ಹಳೆಯ ಅನುಪಯುಕ್ತ ವಸ್ತುಗಳನ್ನು ಮನೆಯಿಂದ ಹೊರಗೆ ಹಾಕಿ. ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ. 

7 /8

ಪೂಜಾ ಕೋಣೆಯ ಅಲಂಕಾರ - ಹೋಳಿ ಹುಣ್ಣಿಮೆ ಪೂಜೆಯ ಅಲಂಕಾರಕ್ಕೆ ನೈಸರ್ಗಿಕ ಹೂವುಗಳು ಮತ್ತು ಎಲೆಗಳಿಗೆ ಆದ್ಯತೆ ನೀಡಿ. ಚೆಂಡು ಹೂವು ಮತ್ತು ಗುಲಾಬಿ ಹೂವಿನಿಂದ ದೇವರಮನೆ ಅಲಂಕರಿಸಿದರೆ ಅದರ ಪರಿಮಳದಿಂದ ಶಾಂತಿಯುತ ವಾತಾವರಣವನ್ನು ಸೃಷ್ಟಿಯಾಗುತ್ತದೆ. ಶುದ್ಧ ತುಪ್ಪದಿಂದ ಮಾಡಿದ ಸಿಹಿಯನ್ನು ದೇವರಿಗೆ ನೈವೇದ್ಯ ಮಾಡಿ. 

8 /8

ತುಪ್ಪದ ದೀಪ - ಈ ದಿನದಂದು ದೇವರಿಗೆ ತುಪ್ಪದ ದೀಪಗಳನ್ನು ಬೆಳಗಿ. ಇದರಿಂದ ನಕಾರಾತ್ಮಕತೆ ದೂರವಾಗುತ್ತದೆ.