Holi Celebration: ಹೋಳಿ ರಂಗಲ್ಲಿ ಮಿಂದೆದ್ದ ಟೀಂ ಇಂಡಿಯಾ: ಕೊಹ್ಲಿ, ರೋಹಿತ್ ರಂಗಿನಾಟದ ಫೋಟೋ ನೋಡಿ

Team India Holi Celebration: ದೇಶಾದ್ಯಂತ ಹೋಳಿ ಉತ್ಸವದ ಆಚರಣೆ ಜೋರಾಗಿ ನಡೆದಿದೆ. ಪ್ರಪಂಚವೇ ಬಣ್ಣದೋಕುಳಿಯಲ್ಲಿ ಮಿಂದೆದ್ದಿದೆ. ಬಾಲಿವುಡ್ ಸ್ಟಾರ್’ಗಳು, ಸೆಲೆಬ್ರಿಟಿಗಳು, ಕ್ರಿಕೆಟಿಗರು ಹೋಳಿ ಉತ್ಸವದ ಆಚರಣೆ ಮಾಡಿದ್ದಾರೆ. ಇನ್ನು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಮುಂಚಿತವಾಗಿ ಟೀಮ್ ಇಂಡಿಯಾದ ಆಟಗಾರರು ಹೋಳಿಯೊಂದಿಗೆ ಹೆಚ್ಚಿನ ಆಡಂಬರದಿಂದ ಆಚರಿಸಿದ್ದಾರೆ.

1 /5

ಟೀಂ ಇಂಡಿಯಾ ಓಪನರ್ ಶುಭ್ಮನ್ ಗಿಲ್ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ, ಟೀಮ್ ಇಂಡಿಯಾದ ಎಲ್ಲಾ ಆಟಗಾರರು ಹೋಳಿ ಹಬ್ಬವನ್ನು ಆಚರಿಸುತ್ತಿದ್ದಾರೆ.

2 /5

ಶುಭ್ಮನ್ ಗಿಲ್ ಟೀಮ್ ಇಂಡಿಯಾ ಬಸ್‌’ನ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ವಿರಾಟ್ ಕೊಹ್ಲಿಯಿಂದ ಹಿಡಿದು ರೋಹಿತ್ ಶರ್ಮಾವರೆಗೆ ಹೋಳಿಯ ಬಣ್ಣಗಳಲ್ಲಿ ಮಿಂದೆದ್ದಾರೆ.

3 /5

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ಹೋಳಿ ಸಂದರ್ಭದಲ್ಲಿ ಎಲ್ಲಾ ಅಭಿಮಾನಿಗಳಿಗೆ ಶುಭಕೋರಿದ್ದಾರೆ. “ಮೋಜು, ಸಂತೋಷ, ಸ್ನೇಹಿತರು ಮತ್ತು ಕುಟುಂಬದ ಜೊತೆ ದಿನಕಳೆಯಿರಿ. ನೀವೆಲ್ಲರೂ ಅದನ್ನು ಶ್ರದ್ಧೆಯಿಂದ ಆನಂದಿಸಲು ಬಯಸುತ್ತೀರಿ. ಮಸ್ತ್ ಆಗಿ ಹೋಳಿ ಆಡಿ, ಆದರೆ ಎಚ್ಚರವಹಿಸಿ” ಎಂದು ಹೇಳಿದ್ದಾರೆ.

4 /5

ಬಾರ್ಡರ್-ಗವಾಸ್ಕರ್ ಟ್ರೋಫಿಯ ಕೊನೆಯ ಟೆಸ್ಟ್ ಪಂದ್ಯವನ್ನು ಮಾರ್ಚ್ 9 ರಿಂದ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.

5 /5

ಈ ಸರಣಿಯಲ್ಲಿ ಟೀಂ ಇಂಡಿಯಾ ಪ್ರಸ್ತುತ 2–1 ಮುನ್ನಡೆಯಲ್ಲಿದೆ. ಸರಣಿ ಕೊನೆಯದ ಮೇಲೆ ಜಗತ್ತಿನ ಕಣ್ಣುಬಿದ್ದಿದೆ.