Photos : ಮುಸ್ಲಿಮರ ಪವಿತ್ರ ದೇಶದಲ್ಲಿ ಶಿವನ ಆರಾಧನೆಗೆ ದೇಗುಲ, ನಾಳೆಯಿಂದ ಭಕ್ತರ ಪ್ರವೇಶಕ್ಕೆ ಮುಕ್ತ

Hindu Timple in Dubai : ದುಬೈನ ಜೆಬೆಲ್ ಅಲಿಯಲ್ಲಿ ನಿರ್ಮಿಸಲಾದ ಹೊಸ ಹಿಂದೂ ದೇವಾಲಯಕ್ಕೆ ಇಂದಿನಿಂದ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

ದುಬೈ (ಯುಎಇ): ದುಬೈನ ಜೆಬೆಲ್ ಅಲಿಯಲ್ಲಿ ನಿರ್ಮಿಸಲಾದ ಹೊಸ ಹಿಂದೂ ದೇವಾಲಯಕ್ಕೆ ಇಂದಿನಿಂದ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ದೇವಾಲಯದ ಅಡಿಪಾಯವನ್ನು ಫೆಬ್ರವರಿ 2020 ರಲ್ಲಿ ಹಾಕಲಾಯಿತು. ಇಂದು ದಸರಾ ಪ್ರಯುಕ್ತ ಈ ದೇವಾಲಯವನ್ನು ಉದ್ಘಾಟಿಸಲಾಗಿದೆ. ಈ ಪ್ರದೇಶದಲ್ಲಿ ಪೂಜಾ ಸ್ಥಳವನ್ನು ಹೊಂದುವ ದಶಕಗಳ ಭಾರತೀಯರ ಕನಸು ಈ ಮೂಲಕ ಈಡೇರಿದೆ. 

1 /8

ದುಬೈನ ಜೆಬೆಲ್ ಅಲಿಯಲ್ಲಿ ನಿರ್ಮಿಸಲಾದ ಹೊಸ ಹಿಂದೂ ದೇವಾಲಯಕ್ಕೆ ಇಂದಿನಿಂದ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

2 /8

ದೇವಾಲಯದ ಅಡಿಪಾಯವನ್ನು ಫೆಬ್ರವರಿ 2020 ರಲ್ಲಿ ಹಾಕಲಾಯಿತು. ಇಂದು ದಸರಾ ಪ್ರಯುಕ್ತ ಈ ದೇವಾಲಯವನ್ನು ಉದ್ಘಾಟಿಸಲಾಗಿದೆ.

3 /8

ಈ ಪ್ರದೇಶದಲ್ಲಿ ಪೂಜಾ ಸ್ಥಳವನ್ನು ಹೊಂದುವ ದಶಕಗಳ ಭಾರತೀಯರ ಕನಸು ಈ ಮೂಲಕ ಈಡೇರಿದೆ. 

4 /8

ದಸರಾ ಹಬ್ಬದ ದಿನವಾದ ಅಕ್ಟೋಬರ್ 5 ರಿಂದ ಸಾರ್ವಜನಿಕರಿಗೆ ಅಧಿಕೃತವಾಗಿ ದೇವಾಲಯವು ತೆರೆಯಲಿದೆ. ಎಲ್ಲಾ ಧರ್ಮದ ಜನರೆ ಪ್ರವೇಶಕ್ಕೂ ಇಲ್ಲಿ ಅವಕಾಶ ಕಲ್ಪಿಸಲಾಗುವುದು. ಮುಸ್ಲಿಂ ರಾಷ್ಟ್ರ ದುಬೈನಲ್ಲಿ ಭವ್ಯ ಹಿಂದೂ ದೇಗುಲ ಇದೀಗ ಉದ್ಘಾಟನೆಯಾಗಿದೆ.   

5 /8

ಒಂಬತ್ತು ಎತ್ತರದ ಬಿಳಿ ಅಮೃತಶಿಲೆಯ ಶಿಖರಗಳು, ಅಲಂಕೃತ ಕಂಬಗಳು ಸೇರಿದಂತೆ ದೇವಾಲಯದ ಗೋಡೆಗಳ ಮೇಲೆ ಸಂಸ್ಕೃತ ಶ್ಲೋಕಗಳನ್ನ ಕೆತ್ತಲಾಗಿದ್ದು ಅನೇಕ ವಿಶೇಷತೆಗಳಿಂದ ಕೂಡಿದೆ. 

6 /8

ಹತ್ತಾರು ಆನೆಗಳು ಮತ್ತು ಎತ್ತರದ ಕಾಂಕ್ರೀಟ್ ಕಂಬಗಳು, ವಿಸ್ತಾರವಾದ ಅಷ್ಟಭುಜಾಕೃತಿಯ ಪ್ರಾರ್ಥನಾ ಮಂದಿರ, ವಿಶಿಷ್ಟ ವೇದಿಕೆ ದೇವಾಲಯಕ್ಕೆ ಮತ್ತಷ್ಟು ಮೆರಗು ನೀಡಿದೆ. 

7 /8

ದೇವಾಲಯದ ಬಾಗಿಲುಗಳನ್ನು ಅಡಿಕೆ ಮರದಿಂದ ನಿರ್ಮಿಸಲಾಗಿದೆ. ಅಮೃತಶಿಲೆಯಲ್ಲಿ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ. 

8 /8

ದೇಗುಲದಲ್ಲಿ ಒಂದು ಜ್ಞಾನ ಕೊಠಡಿ, 1 ಸಮುದಾಯ ಕೇಂದ್ರವಿದೆ. ಮದುವೆಗಳು, ಹೋಮ, ಹವನಗಳು ಸೇರಿದಂತೆ ಇತರ ಖಾಸಗಿ ಕಾರ್ಯಕ್ರಮಗಳನ್ನು ಮಾಡಲು ಇಲ್ಲಿ ಅವಕಾಶ ನೀಡಲಾಗುವುದು.