ವಿಶ್ವ ಅಥ್ಲೆಟಿಕ್ಸ್ ಕಿರಿಯರ ವಿಭಾಗದಲ್ಲಿ ಐತಿಹಾಸಿಕ ದಾಖಲೆ ಬರೆದ ಹಿಮಾ ದಾಸ್-In Pics

  

  • Jul 13, 2018, 16:07 PM IST
1 /8

ಫಿನ್ ಲ್ಯಾಂಡ್'ನಲ್ಲಿ ನಡೆಯುತ್ತಿರುವ ಐಎಎಎಫ್ ಅಂಡರ್ 20 ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್'ನ ಮಹಿಳೆಯರ 400ಮೀ. ಓಟದಲ್ಲಿ ಭಾರತದ ಯುವ ಓಟಗಾರ್ತಿ ಹಿಮಾ ದಾಸ್ ಚಿನ್ನದ ಪದಕ ಗೆದ್ದಿದ್ದಾರೆ. ಇದರೊಂದಿಗೆ ಈ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳಾ ಓಟಗಾರ್ತಿ ಎಂಬ ಹೆಗ್ಗಳಿಕೆಗೆ ಹಿಮಾ ಪಾತ್ರರಾಗಿದ್ದಾರೆ. ಆ ಅದ್ಭುತ ಕ್ಷಣದ ಛಾಯಾಚಿತ್ರಗಳು ನಿಮಗಾಗಿ... (All photos credit: Facebook/ Athletics Federation of India

2 /8

ಚಿನ್ನದ ಸಾಧನೆಯ ಹಾದಿಯಲ್ಲಿ ಹಿಮಾ ದಾಸ್.

3 /8

ಅಂಡರ್ 20 ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್'ನ ಮಹಿಳೆಯರ 400ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದ ಹಿಮಾ ದಾಸ್ ಸಂಭ್ರಮಿಸಿದ ಕ್ಷಣ.

4 /8

ಅಂಡರ್ 20 ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್'ನ ಮಹಿಳೆಯರ 400ಮೀ. ಓಟದಲ್ಲಿ ಪ್ರಥಮ ಸ್ಥಾನ ಗಳಿಸಿದ ಹಿಮಾ, ಭಾರತದ ಬಾವುಟ ಹಿಡಿದು ಟ್ರ್ಯಾಕ್ ಮೇಲೆ ಓಡಿ ವಿಜಯವನ್ನು ಸಂಭ್ರಮಿಸಿದರು.

5 /8

6 /8

7 /8

ಚಿನ್ನ ಗೆದ್ದ ಸಂದರ್ಭದ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಹಿಮಾ ದಾಸ್ ಚಿನ್ನ ಗೆದ್ದಿರುವುದು ಖುಷಿಯಾಗಿದೆ.  ನನಗೆ ಪ್ರೋತ್ಸಾಹ ನೀಡಿದ ದೇಶದ ಜನತೆ ಹಾಗೂ ಕೋಚ್'ಗೆ ಧನ್ಯವಾದ ಅರ್ಪಿಸುತ್ತೇನೆ ಎಂದ ಹಿಮಾ ಕಣ್ಣಲ್ಲಿ ಆನಂದಭಾಷ್ಪ ತುಂಬಿತ್ತು.

8 /8

ಅಸ್ಸಾಂ ರಾಜ್ಯದ ನಾಗೊನ್ ಜಿಲ್ಲೆಯ ದಿಂಗ್ ಗ್ರಾಮದ ರೈತರೊಬ್ಬರ ಪುತ್ರಿಯಾದ ಹಿಮಾ ಏಪ್ರಿಲ್ನಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾಕೂಟದ 400 ಮೀ. ಓಟದ ಫೈನಲ್ ಸ್ಪರ್ಧೆಯಲ್ಲಿ  51.32 ಸೆಕೆಂಡುಗಳಲ್ಲಿ ಕ್ರಮಿಸಿ 6 ನೇ ಸ್ಥಾನ ಗಳಿಸಿದ್ದರು. ಅಲ್ಲದೆ, ಗುವಾಹಟಿಯಲ್ಲಿ ನಡೆದ ರಾಷ್ಟ್ರೀಯ ಅಂತರರಾಜ್ಯ ಚಾಂಪಿಯನ್ಶಿಪ್ನಲ್ಲಿ 400 ಮೀ. ಓಟವನ್ನು ಕೇವಲ 51.13 ಸೆಕೆಂಡುಗಳಲ್ಲಿ ಕ್ರಮಿಸಿದ್ದ ಹಿಮಾ ಅಲ್ಲಿಯೂ ಕೂಡ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದರು.