ವರದಿಗಳ ಪ್ರಕಾರ ‘ಸೇಕ್ರೆಡ್ ಗೇಮ್ಸ್’ನ 2ನೇ ಸೀಸನ್ನಲ್ಲಿ ಪಂಕಜ್ ತ್ರಿಪಾಠಿ ‘ಗುರೂಜಿ’ ಪಾತ್ರಕ್ಕಾಗಿ 12 ಕೋಟಿ ರೂ. ತೆಗೆದುಕೊಂಡಿದ್ದಾರೆ.
ನವದೆಹಲಿ: ಇಂದು ಸಿನಿಮಾ ಕ್ರೇಜ್ನಷ್ಟೆ, OTT ಶೋಗಳು ಸಹ ಸಖತ್ ಸೌಂಡ್ ಮಾಡುತ್ತಿವೆ. ಬಹುತೇಕರು ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಡಿಸ್ನಿ + ಹಾಟ್ಸ್ಟಾರ್ನಂತಹ ಪ್ಲಾಟ್ಫಾರ್ಮ್ಗಳಲ್ಲಿ ಸಿನಿಮಾ ಸೇರಿದಂತೆ ವೆಬ್ ಸರಣಿಗಳನ್ನು ನೋಡುತ್ತಾ ಎಂಜಾಯ್ ಮಾಡುತ್ತಿದ್ದಾರೆ. OTT ಪ್ರಪಂಚದ ಅತ್ಯಂತ ಜನಪ್ರಿಯ & ವೆಬ್ ಸಿರೀಸ್ನ ನಟರು ಎಷ್ಟು ಹಣ ಗಳಿಸುತ್ತಾರೆ? ಅನ್ನೋದನ್ನು ತಿಳಿಯಬೇಕೆಂಬುದು ಪ್ರತಿಯೊಬ್ಬರ ಕುತೂಹಲವಾಗಿರುತ್ತದೆ. ಈ ಬಗೆಗಿನ ಮಾಹಿತಿ ಇಲ್ಲಿದೆ ನೋಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
‘ಆಶ್ರಮ 3’ರ ವೆಬ್ ಸಿರೀಸ್ನಲ್ಲಿ ‘ಬಾಬಾ ನಿರಾಲಾ’ ಪಾತ್ರ ನಿರ್ವಹಿಸುತ್ತಿರುವ ಬಾಬಿ ಡಿಯೋಲ್ ಪ್ರಸ್ತುತ ತಮ್ಮ ವೆಬ್ ಸಿರೀಸ್ನ 3ನೇ ಸೀಸನ್ನ ಯಶಸ್ಸನ್ನು ಆನಂದಿಸುತ್ತಿದ್ದಾರೆ. ವರದಿಗಳ ಪ್ರಕಾರ ಬಾಬಿ ಈ ಸೀಸನ್ಗೆ 2 ಕೋಟಿ ರೂ. ತೆಗೆದುಕೊಂಡಿದ್ದಾರಂತೆ.
ಅಲಿ ಫಜಲ್ 'ಮಿರ್ಜಾಪುರ' ಶೋನಲ್ಲಿ ‘ಗುಡ್ಡು ಭಯ್ಯಾ’ ಪಾತ್ರದಿಂದ ಸಖತ್ ಹೆಸರು ಮಾಡಿದ್ದಾರೆ. ವರದಿಗಳ ಪ್ರಕಾರ 'ಮಿರ್ಜಾಪುರ' ವೆಬ್ ಸಿರೀಸ್ನ ಪ್ರತಿ ಸಂಚಿಕೆಗೆ ಅಲಿ 12 ಲಕ್ಷ ರೂ. ಪಡೆದುಕೊಂಡಿದ್ದಾರಂತೆ. ಅಂದರೆ ಮೊದಲ ಸೀಸನ್ನ 9 ಸಂಚಿಕೆಗಳಿಗೆ ಅಲಿ ಸುಮಾರು 1 ಕೋಟಿ ರೂ.ಗೂ ಹೆಚ್ಚು ಸಂಭಾವನೆ ಪಡೆದುಕೊಂಡಿದ್ದಾರಂತೆ.
‘ಸೇಕ್ರೆಡ್ ಗೇಮ್ಸ್ ಸೀಸನ್ 1’ರಲ್ಲಿ ರಾಧಿಕಾ ಅವರು RAW ಏಜೆಂಟ್ ಆಗಿದ್ದ ‘ಅಂಜಲಿ ಮಾಥುರ್’ ಪಾತ್ರ ನಿರ್ವಹಿಸಿದ್ದಾರೆ. ವರದಿಗಳ ಪ್ರಕಾರ ‘ಸೇಕ್ರೆಡ್ ಗೇಮ್ಸ್ ಸೀಸನ್ 1’ಕ್ಕೆ ರಾಧಿಕಾ ಆಪ್ಟೆಗೆ 4 ಕೋಟಿ ರೂ. ಸಂಭಾವನೆ ನೀಡಲಾಗಿದೆಯಂತೆ.
ಖ್ಯಾತ ಬಾಲಿವುಡ್ ನಟ ಪಂಕಜ್ ತ್ರಿಪಾಠಿ ಅವರು ಅನೇಕ ಚಲನಚಿತ್ರಗಳು ಮತ್ತು OTT ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಅದ್ಭುತ ನಟನೆ ಮೂಲಕ ಅವರು ಪ್ರೇಕ್ಷಕರ ಮನಸೆಳೆದಿದ್ದಾರೆ. ವರದಿಗಳ ಪ್ರಕಾರ ‘ಸೇಕ್ರೆಡ್ ಗೇಮ್ಸ್’ನ 2ನೇ ಸೀಸನ್ನಲ್ಲಿ ಪಂಕಜ್ ತ್ರಿಪಾಠಿ ‘ಗುರೂಜಿ’ ಪಾತ್ರಕ್ಕಾಗಿ 12 ಕೋಟಿ ರೂ. ತೆಗೆದುಕೊಂಡಿದ್ದಾರೆ. ಅದೇ ರೀತಿ ‘ಮಿರ್ಜಾಪುರದ 2ನೇ’ ಸೀಸನ್ ನಲ್ಲಿ ‘ಕಾಲಿನ್ ಭಯ್ಯಾ’ ಪಾತ್ರ ನಿರ್ವಹಿಸಲು ಪಂಕಜ್ ತ್ರಿಪಾಠಿಗೆ 10 ಕೋಟಿ ರೂ.ಗಳನ್ನು ನೀಡಲಾಗಿದೆಯಂತೆ.
ಹಿಂದಿ ಚಲನಚಿತ್ರಗಳಲ್ಲಿ ದೊಡ್ಡ ಹೆಸರು ಮಾಡಿರುವ ನಟ ಸೈಫ್ ಅಲಿ ಖಾನ್ ಅವರು ‘ಸೇಕ್ರೆಡ್ ಗೇಮ್ಸ್’ ವೆಬ್ ಸಿರೀಸ್ ಮೂಲಕ OTT ಜಗತ್ತಿಗೆ ಪ್ರವೇಶಿಸಿದರು. ಈ ವೆಬ್ ಸರಣಿಯಲ್ಲಿ ಅವರು ತಮ್ಮ ಅದ್ಭುತ ನಟನೆ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ ‘ಸೇಕ್ರೆಡ್ ಗೇಮ್ಸ್’ನ ಪ್ರತಿ ಸೀಸನ್ಗೆ ಸೈಫ್ 15 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದಾರಂತೆ.