High Profile Rave Party: Aryan Khan ಜೊತೆಗೆ ಬಂಧನಕ್ಕೋಳಗಾದ Munmun Dhamecha ಯಾರು ಗೊತ್ತಾ? ಇಲ್ಲಿದೆ ಡೀಟೇಲ್ಸ್

High Profile Rave Party - ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಶನಿವಾರ ಮುಂಬೈನ ಕರಾವಳಿ ತೀರದಲ್ಲಿ ಹಡಗೊಂದರಲ್ಲಿ ನಡೆಯುತ್ತಿದೆ ಎನ್ನಲಾದ ಹೈಪ್ರೊಫೈಲ್ ರೇವ್ ಪಾರ್ಟಿಯೊಂದರ (High Profile Rave Party) ಮೇಲೆ ದಾಳಿ ನಡೆಸಿತ್ತು.

ನವದೆಹಲಿ: High Profile Rave Party - ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಶನಿವಾರ ಮುಂಬೈನ ಕರಾವಳಿ ತೀರದಲ್ಲಿ ಹಡಗೊಂದರಲ್ಲಿ ನಡೆಯುತ್ತಿದೆ ಎನ್ನಲಾದ ಹೈಪ್ರೊಫೈಲ್ ರೇವ್ ಪಾರ್ಟಿಯೊಂದರ (High Profile Rave Party) ಮೇಲೆ ದಾಳಿ ನಡೆಸಿತ್ತು. ಅದಾದ ಬಳಿಕ NCB ಅಧಿಕಾರಿಗಳು 8 ಜನರನ್ನು ತನ್ನ ವಶಕ್ಕೆ ಪಡೆದುಕೊಂಡಿದ್ದರು. ಭಾನುವಾರ ಸಂಜೆಯವರೆಗೆ ಮುಂಬೈನ NCB ಕಚೇರಿಯಲ್ಲಿ ಈ ಎಂದು ಜನರನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದೆ. ಈ ಎಂಟು ಜನರಲ್ಲಿ ಖ್ಯಾತ ಬಾಲಿವುಡ್ ನಟ ಶಾರುಕ್ ಖಾನ್ (Shah Rukh Khan) ಅವರ ಪುತ್ರ ಆರ್ಯನ್ ಖಾನ್ (Aryan Khan) ಕೂಡ ಶಾಮೀಲಾಗಿದ್ದಾರೆ. ಅವರನ್ನು ಹೊರತುಪಡಿಸಿ ಮತ್ತೊಂದು ಹೆಸರು ಭಾರಿ ಸುದ್ದಿ ಮಾಡಿದೆ ಎಂದರೆ ಅದು ಮುನ್ ಮುನ್ ಧಮೇಚಾ (Munmun Dhamecha). ಯಾರು ಈ ಮುನ್ ಮುನ್ ಧಮೇಚಾ? ಈ ಪ್ರಕಾರದ ಜೊತೆಗೆ ಆಕೆ ಹೇಗೆ ಸಂಬಂಧ ಹೊಂದಿದ್ದಾಳೆ ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ. 

 

ಇದನ್ನೂ ಓದಿ-Mumbai Drug Case Updates: ಆರ್ಯನ್ ಖಾನ್ ಸೇರಿದಂತೆ 3 ಆರೋಪಿಗಳು ಅಕ್ಟೋಬರ್ 7 ರವರೆಗೆ ಎನ್‌ಸಿಬಿ ವಶಕ್ಕೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /9

ಮುನ್ ಮುನ್ ಧಮೇಚಾ ಯಾರು? - ಮುನ್ಮುನ್ ಧಮೇಚ ಓರ್ವ ವೃತ್ತಿಪರ ಮಾಡೆಲ್ ಆಗಿದ್ದಾಳೆ. 39 ವರ್ಷದ ಮುನ್ಮುನ್ ಅವರನ್ನು ಅಕ್ಟೋಬರ್ 3 ರಂದು ಮಧ್ಯಾಹ್ನ 2 ಗಂಟೆಗೆ ಎನ್ ಸಿಬಿ ಬಂಧಿಸಿದೆ. ಇತ್ತೀಚಿನ ವರದಿಗಳ ಪ್ರಕಾರ, ಮುನ್ಮುನ್ ಅಕ್ಟೋಬರ್ 7 ರವರೆಗೆ ಬಂಧನದಲ್ಲಿರಲಿದ್ದಾರೆ.

2 /9

ಮುನ್ಮುನ್ ಓರ್ವ ಬಿಸಿನೆಸ್ ಕುಟುಂಬದಿಂದ ಬಂದಿದ್ದಾಳೆ - ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಓರ್ವ ಉದ್ಯಮಿಯ ಕುಟುಂಬದ ಜೊತೆಗೆ ಮುನ್ಮುನ್ ಸಂಬಂಧಹೊಂದಿದ್ದಾಳೆ. ಪ್ರಸ್ತುತ ಸಾಗರ್ ಜಿಲ್ಲೆಯ ಆಕೆಯ ಮನೆಯಲ್ಲಿ ಕುಟುಂಬದ ಯಾವುದೇ ಸದಸ್ಯರು ವಾಸಿಸುವುದಿಲ್ಲ. ವೃತ್ತಿಪರವಾಗಿ ಮುನ್ಮುನ್ ಓರ್ವ ಮಾಡೆಲ್ ಆಗಿದ್ದು, ಆಗಾಗ ಸಾಮಾಜಿಕ ಮಾಧ್ಯಮಗಳಲ್ಲಿ ಅವಳು ತನ್ನ ಭಾವಚಿತ್ರಗಳನ್ನು ಹಂಚಿಕೊಳ್ಳುತ್ತಾಳೆ.

3 /9

ಮುನ್ಮುನ್ ಕುಟುಂಬ - ಮುನ್ಮುನ್ ಧಮೇಚಾ ತಾಯಿ ಕಳೆದ ವರ್ಷ ನಿಧನರಾಗಿದ್ದಾರೆ. ಆಕೆಗೆ ಪ್ರಿನ್ಸ್ ಧಮೇಚಾ ಹೆಸರಿನ ಸಹೋದರನಿದ್ದಾನೆ. ಆತ ದೆಹಲಿಯಲ್ಲಿ ಕೆಲಸ ಮಾಡುತ್ತಾನೆ. ಹಲವು ವರ್ಷಗಳ ಹಿಂದೆಯೇ ಮುನ್ಮುನ್ ತಂದೆ ಮೃತಪಟ್ಟಿದ್ದಾರೆ.

4 /9

ಸಾಗರ್ ಜಿಲ್ಲೆಯ ರಹವಾಸಿ ಮುನ್ಮುನ್ - ಮುನ್ಮುನ್ ತನ್ನ ಶಾಲಾ ಶಿಕ್ಷಣ ಸಾಗರ್ ಜಿಲ್ಲೆಯಲ್ಲಿಯೇ ಪೂರ್ಣಗೊಳಿಸಿದ್ದಾಳೆ. ಆದರೆ, ಸಾಗರ್ ಜಿಲ್ಲೆಯಲ್ಲಿ ತುಂಬಾ ಕಡಿಮೆ ಜನರಿಗೆ ಮುನ್ಮುನ್ ಕುರಿತು ಮಾಹಿತಿ ಇದೆ. ಬಳಿಕ 6 ವರ್ಷಗಳ ಹಿಂದೆ ಆಕೆ ತನ್ನದೆಹಲಿ ಸಹೋದರನ ಬಳಿ ತೆರಳುವುದಕ್ಕು ಮುನ್ನ ಕೆಲ ಕಾಲ ಭೂಪಾಲ್ ನಲ್ಲಿ ವಾಸವಾಗಿದ್ದಳು.

5 /9

ಇನ್ಸ್ಟಾಗ್ರಾಮ್ ನಲ್ಲಿ ಭಾರಿ ಸಕ್ರೀಯಳಾಗಿದ್ದಾಳೆ ಮುನ್ಮುನ್ - ಮುನ್ಮುನ್ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭಾರಿ ಸಕ್ರೀಯಳಾಗಿದ್ದಾಳೆ ಹಾಗೂ 10.3 ಸಾವಿರ ಹಿಂಬಾಲಕರನ್ನು ಹೊಂದಿದ್ದಾಳೆ. ಸೆಪ್ಟೆಂಬರ್ 22 ರಂದು ಮುನ್ಮುನ್ ತನ್ನ ಕೊನೆಯ ಪೋಸ್ಟ್ ಹಂಚಿಕೊಂಡಿದ್ದಳು. ಇದಲ್ಲದೆ ಅವಳು ತನ್ನ ಹಲವು ಗ್ಲಾಮರಸ್ ಭಾವಚಿತ್ರಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾಳೆ.  

6 /9

ಹಲವಾರು ಸೆಲಿಬ್ರಿಟಿಗಳನ್ನು ಫಾಲೋ ಮಾಡ್ತಾಳೆ - ಆದರೆ, ಇನ್ಸ್ಟಾಗ್ರಾಮ್ ಮೇಲೆ ಆಕೆಯನ್ನು ಯಾವ ಸೆಲಿಬ್ರಿಟಿ ಕೂಡ ಫಾಲೋ ಮಾಡಲ್ಲ. ಆದರೆ ಮುನ್ಮುನ್ ಮಾತ್ರ ಅಕ್ಷಯ್ ಕುಮಾರ್, ವಿಕ್ಕಿ ಕೌಶಲ್ ರಂತಹ ಇತರ ಸೆಲಿಬ್ರಿಟಿಗಳನ್ನು ಫಾಲೋ ಮಾಡುತ್ತಾಳೆ.

7 /9

ಬಾಲಿವುಡ್ ಸೆಲಿಬ್ರಿಟಿಗಳ ಜೊತೆಗೆ ಪಾರ್ಟಿ - ಹಲವು ಬಾಲಿವುಡ್ ಸೇಲಿಬ್ರಿಟಿಗಳ ಜೊತೆಗೆ ಮುನ್ ಮುನ್ ಧಮೇಚಾ ಫೋಟೋ ಕ್ಲಿಕ್ಕಿಸಿಕೊಂಡಿದ್ದಾಳೆ. ಅವುಗಳನ್ನು ಆಕೆ ತನ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್ ನಲ್ಲಿ ಪೋಸ್ಟ್ ಕೂಡ ಮಾಡಿದ್ದಾಳೆ. ಇದರಿಂದ ಆಕೆ ಬಿ-ಟೌನ್ ಸೆಲೆಬ್ ಗಳ ಜೊತೆಗೆ ಪಾರ್ಟಿಯಲ್ಲಿ ಶಾಮೀಲಾಗುತ್ತಾಳೆ ಎಂಬುದು ಸಾಬೀತಾಗುತ್ತದೆ.

8 /9

ಈ ಸೆಲಿಬ್ರಿಟಿಗಳ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾಳೆ - ವರುಣ್ ಧವನ್ (Varun Dhawan), ಅರ್ಜುನ್ ರಾಮ್ ಪಾಲ್ (Arjun Rampal), ವಿಜೆ ನಿಖಿಲ್, ಗುರು ರಂಧಾವಾ (Guru Randhawa) ಹಾಗೂ ಸುಯಶ್ ರಾಯ್ ಗಳಂತಹ ಟಿವಿ ಹಾಗೂ ಸಿನಿಮಾ ಜಗತ್ತಿನ ಜನರ ಜೊತೆಗೆ ಮುನ್ ಮುನ್ ಧಮೆಚಾ ಭಾವಚಿತ್ರಗಳಿವೆ.

9 /9

ಮುನ್ ಮುನ್ ಧಮೆಚಾ ಹಾಗೂ ಆರ್ಯನ್ ಖಾನ್ ಕನೆಕ್ಷನ್ ಏನು? - ಆರ್ಯನ್ ಖಾನ್ (Sharukh Khan Son) ಹಾಗೂ ಮುನ್ಮುನ್ ಧಮೆಚಾ ಕನೆಕ್ಷನ್ ಕುರಿತು ಹೇಳುವುದಾದರೆ, ಮುನ್ಮುನ್ ಹಾಗೂ ಆರ್ಯನ್ ಅವರನ್ನು ಒಂದೇ ರೇವ್ ಪಾರ್ಟಿಯಿಂದ ಬಂಧಿಸಲಾಗಿದೆ. ಇದಕ್ಕೂ ಮೊದಲು ಇಬ್ಬರು ಒಟ್ಟಾಗಿರುವ ಯಾವುದೇ ಭಾವಚಿತ್ರ ಇಲ್ಲ. ಅಷ್ಟೇ ಅಲ್ಲ ಖಾಸಗಿಯಾಗಿ ಇಬ್ಬರು ಪರಸ್ಪರ ಯಾವುದೇ ಸಂಬಂಧ ಹೊಂದಿಲ್ಲ. ಮುನ್ ಮುನ್ ಆರ್ಯನ್ ಗಿಂತ ವಯಸ್ಸಿನಲ್ಲಿ 15 ವರ್ಷ ದೊಡ್ಡವಳಾಗಿದ್ದಾಳೆ.