Big Discount On SUVs: ಕಾರು ಖರೀದಿಗೆ ಬೆಸ್ಟ್ ಟೈಮ್ ಇದು! 5 ಕಾರುಗಳ ಮೇಲೆ ಭರ್ಜರಿ 3 ಲಕ್ಷ ರೂ.ಗಳ ರಿಯಾಯಿತಿ!

ಕಾರು ಖರೀದಿಸಲು ಬಯಸುವವರಿಗೆ ಈ ತಿಂಗಳು ಬೆಸ್ಟ್ ಟೈಮ್ ಆಗಿದೆ. ಏಕೆಂದರೆ ಹಲವು ದೊಡ್ಡ ದೊಡ್ಡ ಎಸ್ಯುವಿ ಕಾರುಗಳ ಮೇಲೆ ಭರ್ಜರಿ 3 ಲಕ್ಷ ರೂ.ಗಳ ಭಾರಿ ಡಿಸ್ಕೌಂಟ್ ನೀಡಲಾಗುತ್ತಿದೆ. ನೀವೂ ಕೂಡ ಹೊಸ ಎಸ್ಯುವಿ ಹುಡುಕಾಟದಲ್ಲಿದ್ದರೆ, ನಾವು ನಿಮಗಾಗಿ ಮಾರ್ಚ ತಿಂಗಳಲ್ಲಿ ಅತಿ ಹೆಚ್ಚು ರಿಯಾಯಿತಿ ಹೊಂದಿರುವ ಕಾರುಗಳ ಪಟ್ಟಿಯನ್ನೇ ತಂದಿದ್ದೇವೆ. ಬನ್ನಿ ಆ ಕಾರುಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,

Huge Discount On Cars: ಕಾರು ಖರೀದಿಸಲು ಬಯಸುವವರಿಗೆ ಈ ತಿಂಗಳು ಬೆಸ್ಟ್ ಟೈಮ್ ಆಗಿದೆ. ಏಕೆಂದರೆ ಹಲವು ದೊಡ್ಡ ದೊಡ್ಡ ಎಸ್ಯುವಿ ಕಾರುಗಳ ಮೇಲೆ ಭರ್ಜರಿ 3 ಲಕ್ಷ ರೂ.ಗಳ ಭಾರಿ ಡಿಸ್ಕೌಂಟ್ ನೀಡಲಾಗುತ್ತಿದೆ. ನೀವೂ ಕೂಡ ಹೊಸ ಎಸ್ಯುವಿ ಹುಡುಕಾಟದಲ್ಲಿದ್ದರೆ, ನಾವು ನಿಮಗಾಗಿ ಮಾರ್ಚ ತಿಂಗಳಲ್ಲಿ ಅತಿ ಹೆಚ್ಚು ರಿಯಾಯಿತಿ ಹೊಂದಿರುವ ಕಾರುಗಳ ಪಟ್ಟಿಯನ್ನೇ ತಂದಿದ್ದೇವೆ. ಬನ್ನಿ ಆ ಕಾರುಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,

 

ಇದನ್ನೂ ಓದಿ-7th Pay Commission: ಸರ್ಕಾರಿ ನೌಕರರ ವೇತನದಲ್ಲಿ 1,20,000 ಹೆಚ್ಚಳ, ಮಾರ್ಚ್ ತಿಂಗಳ ವೇತನದಲ್ಲಿ ಸಿಗಲಿದೆ ಈ ಹಣ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

1. Citroen C5 Aircross: ಸಿಟ್ರೋಯೆನ್ ಇತ್ತೀಚೆಗೆ ತನ್ನ C5 Aircross SUV ಯ ಹೊಸ ಆವೃತ್ತಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ ಮತ್ತು ಹಿಂದಿನ ಮಾದರಿಯ ಯುನಿಟ್‌ಗಳ ಖರೀದಿಯ ಮೇಲೆ ಭರ್ಜರಿ ರೂ 3 ಲಕ್ಷದವರೆಗೆ ರಿಯಾಯಿತಿಯನ್ನು ನೀಡುತ್ತಿದೆ. C5 ಏರ್‌ಕ್ರಾಸ್ ಒಂದು ಅತ್ಯುತ್ತಮ SUV ಆಗಿದೆ. ಈ SUV ಯ ಆರಂಭಿಕ ಎಕ್ಸ್ ಶೋ ರೂಂ ಬೆಲೆ 37.17 ಲಕ್ಷ ರೂ.  

2 /5

2. Jeep Meridian: ಜೀಪ್ ಮೆರಿಡಿಯನ್ ಒಂದು ಅಮೇರಿಕನ್ SUV ಆಗಿದೆ. ಇದರ ಆಯ್ದ ರೂಪಾಂತರಗಳು ರೂ 2.5 ಲಕ್ಷದವರೆಗೆ ರಿಯಾಯಿತಿಯನ್ನು ಹೊಂದಿವೆ. ಜೀಪ್ ಮೆರಿಡಿಯನ್ ಭಾರತೀಯ ಮಾರುಕಟ್ಟೆಯಲ್ಲಿ ಮಹೀಂದ್ರ ಸ್ಕಾರ್ಪಿಯೋ ಮೇಲೆ ಮತ್ತು ಟೊಯೋಟಾ ಫಾರ್ಚುನರ್ ಕೆಳಗಿನ ಸ್ಥಾನ ಪಡೆದಿದೆ. ಜೀಪ್ ಮೆರಿಡಿಯನ್ ಎಸ್‌ಯುವಿ ಬೆಲೆಗಳು ರೂ. 30.10 ಲಕ್ಷದಿಂದ ಪ್ರಾರಂಭವಾಗುತ್ತವೆ (ಎಕ್ಸ್ ಶೋ ರೂಂ).  

3 /5

3. Volkswagen Tiguan: ಫೋಕ್ಸ್‌ವ್ಯಾಗನ್ ಟಿಗುವಾನ್ ಭಾರತೀಯ ಮಾರುಕಟ್ಟೆಯಲ್ಲಿ ಜೀಪ್ ಮೆರಿಡಿಯನ್ ಮತ್ತು ಸ್ಕೋಡಾ ಕೊಡಿಯಾಕ್‌ನೊಂದಿಗೆ ಸ್ಪರ್ಧಿಸುತ್ತದೆ. ಕಂಪನಿಯು ಈ SUV ಮೇಲೆ 1.85 ಲಕ್ಷದವರೆಗೆ ರಿಯಾಯಿತಿಯನ್ನು ನೀಡುತ್ತಿದೆ. VW Tiguan SUV ನ ಆರಂಭಿಕ ಎಕ್ಸ್ ಶೋ ರೂಂ ಬೆಲೆ 33.49 ಲಕ್ಷ ರೂ.  

4 /5

4. Jeep Compass: ಏಪ್ರಿಲ್ 2023 ರ ಮೊದಲು ಈ SUV ಖರೀದಿಯಲ್ಲಿ 1.5 ಲಕ್ಷದವರೆಗೆ ಉಳಿಸುವ ಅವಕಾಶವನ್ನು ಜೀಪ್ ಕಂಪನಿ ನಿಮಗೆ ನೀಡುತ್ತಿದೆ. ಜೀಪ್ ಕಂಪಾಸ್ ಎಸ್‌ಯುವಿಯ ಆರಂಭಿಕ ಎಕ್ಸ್ ಶೋ ರೂಂ ಬೆಲೆ 20.99 ಲಕ್ಷ ರೂ. ಈ ಬಜೆಟ್‌ನಲ್ಲಿ ಇದು ಪವರ್ಫುಲ್ SUV ಕಾರುಗಳಲ್ಲಿ ಒಂದಾಗಿದೆ.  

5 /5

5. MG Astor: ಎಂಜಿ ಆಸ್ಟರ್ ADAS ವೈಶಿಷ್ಟ್ಯದೊಂದಿಗೆ ಬರುವ ಅಗ್ಗದ ಕಾರುಗಳಲ್ಲಿ ಒಂದಾಗಿದೆ. ಕಂಪನಿಯು ಮಾರ್ಚ್ ತಿಂಗಳಲ್ಲಿ ಈ SUV ಖರೀದಿಯ ಮೇಲೆ 1.5 ಲಕ್ಷದವರೆಗೆ ಉಳಿತಾಯವನ್ನು ನೀಡುತ್ತಿದೆ. MG Astor SUV ನ ಆರಂಭಿಕ ಎಕ್ಸ್ ಶೋ ರೂಂ ಬೆಲೆ 10.51 ಲಕ್ಷ ರೂ.