Health benefits of Clove tea: ಲವಂಗದಲ್ಲಿ ವಿಟಮಿನ್ ‘C’ ಸೇರಿದಂತೆ ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿವೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಊಟದ ನಂತರ ಲವಂಗ ಟೀ ಸೇವಿಸುವುದು ನಿಮಗೆ ಅಗತ್ಯ ಪೋಷಕಾಂಶಗಳನ್ನು ನೀಡುತ್ತದೆ.
ನವದೆಹಲಿ: ಆರೋಗ್ಯದ ದೃಷ್ಟಿಯಿಂದ ನೈಸರ್ಗಿಕ ಟೀಗಳನ್ನು ಕುಡಿಯುವುದು ಇಂದು ಫ್ಯಾಶನ್ ಆಗಿದೆ. ಗ್ರೀನ್ ಟೀ, ಬ್ಲಾಕ್ ಟೀ, ಶುಗರ್ ಫ್ರೀ ಟೀ, ಲೆಮನ್ ಟೀ ಸೇರಿದದಂತೆ ಹಲವಾರು ವಿಧದ ಟೀಗಳಿವೆ. ಹಲವಾರು ಪ್ರಯೋಜನಗಳ ಹೊಂದಿರುವ ಟೀಗಳ ಸೇವನೆಯಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಈ ಪೈಕಿ ಲವಂಗ ಟೀ ಸಹ ಒಂದಾಗಿದೆ. ಚಳಿಗಾಲದಲ್ಲಿ ಲವಂಗ ಟೀ ಸೇವನೆಯಿಂದ ಹಲವಾರು ಪ್ರಯೋಜನಗಳಿವೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಲವಂಗದ ಟೀ ಜೀರ್ಣಕಾರಿ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ನೈಸರ್ಗಿಕ ಸಂಯುಕ್ತಗಳನ್ನು ಹೊಂದಿರುವ ಈ ಚಹಾವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ನಿಯಮಿತವಾಗಿ ಈ ಲವಂಗ ಟೀ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು.
ಲವಂಗ ಟೀ ನೈಸರ್ಗಿಕ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳ ಹೊಂದಿದೆ. ಈ ಚಹಾವನ್ನು ಕುಡಿಯುವುದರಿಂದ ಊಟದ ನಂತರ ಬಾಯಿಯಿಂದ ಬರುವ ದುರ್ಗಂಧದಿಂದ ಪರಿಹಾರ ಸಿಗಲಿದೆ. ಇದರಿಂದ ನೀವು ಉಲ್ಲಾಸದ ಅನುಭವ ಪಡೆಯಬಹುದು.
ಲವಂಗ ಟೀ ಉರಿಯೂತದಿಂದ ಮುಕ್ತಿ ನೀಡಲು ಬೇಕಾದ ಅಂಶಗಳ ಹೊಂದಿದ್ದು, ಇದು ಜೀರ್ಣಾಂಗದಲ್ಲಿ ಉರಿಯೂತ ಕಡಿಮೆ ಮಾಡಲು ಸಹಕಾರಿ. ಮಸಾಲೆಯುಕ್ತ ಆಹಾರ ಸೇವಿಸಿದ ನಂತರ ಉಂಟಾಗುವ ಉರಿಯೂತದ ಪರಿಣಾಮ ಕಡಿಮೆ ಮಾಡಲು ಇದು ಪ್ರಯೋಜನಕಾರಿ.
ಲವಂಗವನ್ನು ಜಗಿಯುವುದು ಉತ್ತಮ ಇನ್ಸುಲಿನ್ ನಿರ್ವಹಣೆಗೆ ಸಹಾಯ ಮಾಡುತ್ತದೆ. ಲವಂಗ ಟೀ ಸೇವಿಸುವುದರಿಂದ ರಕ್ತ ಪರಿಚಲನೆ ಸರಿಯಾಗುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಬಹುದಾಗಿದೆ.
ಲವಂಗದಲ್ಲಿ ವಿಟಮಿನ್ ‘ಸಿ’ ಸೇರಿದಂತೆ ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿವೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಊಟದ ನಂತರ ಲವಂಗ ಟೀ ಸೇವಿಸುವುದು ನಿಮಗೆ ಅಗತ್ಯ ಪೋಷಕಾಂಶಗಳನ್ನು ನೀಡುತ್ತದೆ. ಇದು ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಉತ್ತಮವಾಗಿದೆ.