'ಬಾಕ್ಸ್ ಆಫೀಸ್ ಸುಲ್ತಾನ್'ಗೆ 44ನೇ ಹುಟ್ಟು ಹಬ್ಬದ ಸಂಭ್ರಮ

ಫೆಬ್ರವರಿ 16, 1977 ರಂದು ಜನಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಇಂದು 44ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ.

  • Feb 16, 2020, 16:03 PM IST

ಬೆಂಗಳೂರು:ಫೆಬ್ರವರಿ 16, 1977 ರಂದು ಜನಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಇಂದು 44ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. 2019 ಈ ಸ್ಯಾಂಡಲ್ ವುಡ್ ಸೂಪರ್ಸ್ಟಾರ್ ಪಾಲಿಗೆ ಉತ್ತಮವಾಗಿ ವರ್ಷವಾಗಿ ಮುಕ್ತಾಯಗೊಂಡಿದ್ದು, ಈ ವರ್ಷದಲ್ಲಿ  ಬಿಡುಗಡೆಯಾಗಿರುವ ಅವರ ಮೂರು ಚಿತ್ರಗಳಾದ ಯಜಮಾನ, ಕುರುಕ್ಷೇತ್ರ ಹಾಗೂ ಒಡೆಯಾ ಅವರನ್ನು ಮತ್ತೊಮ್ಮೆ ಬಾಕ್ಸ್ ಆಫೀಸ್ ಸುಲ್ತಾನ ಎಂದು ಸಾಬೀತುಪಡಿಸಿವೆ.

ಬಾಕ್ಸ್ ಆಫೀಸ್ ಮೇಲೆ ಉತ್ತಮ ಪ್ರದರ್ಶನ ಕಂಡ ಈ ಮೂರು ಚಿತ್ರಗಳು ಕೇವಲ ಅಭಿಮಾನಿಗಳ ಮೆಚ್ಚುಗೆಗೆ ಮಾತ್ರ ಪಾತ್ರವಾಗದೆ ಉತ್ತಮ ವಿಮರ್ಶೆ ಪಡೆಯುವಲ್ಲಿ ಸಹ ಯಶಸ್ವಿಯಾಗಿವೆ.

ಇಂದು ಅವರ ಹುಟ್ಟುಹಬ್ಬದ ಅಂಗವಾಗಿ ಅವರ ಮುಂಬರುವ ಚಿತ್ರ 'ರಾಬರ್ಟ್' ಚಿತ್ರ ತಂಡ ಚಿತ್ರದ ಟೀಸರ್ ಬಿಡುಗಡೆಗೊಳಿಸಿ,  'ದ ಬಾಸ್' ಅಭಿಮಾನಿಗಳಿಗೆ ಉಡುಗೊರೆ ನೀಡಿದ್ದಾರೆ. ಈ ಬಹುನಿರೀಕ್ಷಿತ ಚಿತ್ರ 2020ರಲ್ಲಿ ದರ್ಶನ್ ಅಭಿನಯಿಸಿರುವ ಮೊದಲ ಬಿಗ್ ಬಜೆಟ್ ಚಿತ್ರವಾಗಿದ್ದು, ಏಪ್ರಿಲ್ 9ರಂದು ಬೆಳ್ಳಿ ಪರದೆಗೆ ಬಿಡುಗಡೆಯಾಗಲಿದೆ. ಸದ್ಯ ಈ ಚಿತ್ರ ಚಿತ್ರೀಕರಣದ ಕೊನೆಯ ಹಂತದಲ್ಲಿದೆ.

ಉಂಪತಿ ಫಿಲ್ಮ್ಸ್ ಬ್ಯಾನರ್ ಅಡಿ ಮೂಡಿಬರುತ್ತಿರುವ 'ರಾಬರ್ಟ್' ಚಿತ್ರದ ಮೂಲಕ ನಟಿ ಆಶಾ ಭಟ್ ಕನ್ನಡ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಇವರನ್ನು ಹೊರತುಪಡಿಸಿ ಶಿವರಾಜ್ ಕೆ.ಆರ್, ರವಿ ಕಿಶನ್, ಚಿಕ್ಕಣ್ಣ, ಸೋನಾಲ್  ವಿನೋದ್ ಪ್ರಭಾಕರ್, ಜಗತಿ ಬಾಬು ಮತ್ತು ದೇವರಾಜ್ ಇವರುಗಳು ಕೂಡ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಸಂಗೀತವನ್ನು ಅರ್ಜುನ್ ಜನ್ಯ ಸಂಯೋಜಿಸಿದ್ದಾರೆ.

1 /12

2 /12

3 /12

4 /12

5 /12

6 /12

7 /12

8 /12

9 /12

10 /12

11 /12

12 /12