Diwali 2023 ಬಳಿಕ ಶನಿ-ಗುರುವಿನ ನೆರನಡೆ ಆರಂಭ, ಈ ರಾಶಿಗಳ ಜನರ ಮನೆಯಲ್ಲಿ ಕುಣಿ-ನಲಿಯಲಿದ್ದಾಳೆ ತಾಯಿ ಲಕುಮಿ!

Guru-Shani Margi After Diwali 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಬರುವ ದೀಪಾವಳಿ ಹಬ್ಬದ ಬಳಿಕ ಶನಿ ಹಾಗೂ ಗುರುಗ್ರಹಗಳ ನೆರನಡೆ ಆರಂಭವಾಗಲಿದ್ದು, 3 ರಾಶಿಗಳ ಜನರಿಗೆ ಅವರ ಈ ಸ್ಥಿತಿ ಪರಿವರ್ತನೆ ಸಾಕಷ್ಟು ಲಾಭಗಳನ್ನು ತಂದುಕೊಡಲಿದೆ. (Spiritual News In Kannada)

ಬೆಂಗಳೂರು: ವೈದಿಕ ಜೋತಿಷ್ಯ ಪಂಚಾಂಗದ ಪ್ರಕಾರ ಎಲ್ಲಾ ನವಗ್ರಹಗಳು ಕಾಲಕಾಲಕ್ಕೆ ತಮ್ಮ ನಡೆಯನ್ನು ಪರಿವರ್ತಿಸಿ ವಕ್ರನಡೆ ಮತ್ತು ನೆರನಡೆಯನ್ನು ಅನುಸರಿಸುತ್ತವೆ. ಮುಂಬರುವ ದೀಪಾವಳಿ ಹಬ್ಬದ ಬಳಿಕ ಗುರು ಹಾಗೂ ಶನಿ ಗ್ರಹಗಳು ನೆರನಡೆಯನ್ನು ಅನುಸರಿಸಲಿವೆ. ನವೆಂಬರ್ 4, 2023 ರಂದು ಶನಿ ನೆರನಡೆಯನ್ನು ಅನುಸರಿಸಿದರೆ, ದೇವಗುರು ಬೃಹಸ್ಪತಿ ಡಿಸೆಂಬರ್ 31, 2023 ರಂದು ನೆರನಡೆ ಅನುಸರಿಸಲಿದ್ದಾನೆ. ಇದರಿಂದ 3 ರಾಶಿಗಳ ಜನರ ಜೇವಣದಲ್ಲಿ ಆಕಸ್ಮಿಕ ಧನಲಾಭ ಯೋಗಗಳು ನಿರ್ಮಾಣಗೊಳ್ಳುತ್ತಿದ್ದು, ಅವರ ಅದೃಷ್ಟ ಸೂರ್ಯನಂತೆ ಹೊಳೆಯಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ (Spiritual News In Kannada)

 

ಇದನ್ನೂ ಓದಿ-ಜನವರಿ 2024ರವರೆಗೆ ಅಸ್ತ ಭಾವದಲ್ಲಿನ ಮಂಗಳ, ಈ ರಾಶಿಗಳ ಧನರಿಗೆ ಧನಕುಬೇರ ನಿಧಿ ಪ್ರಾಪ್ತಿಯ ಯೋಗ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

Guru-Shani Margi After Diwali 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಬರುವ ದೀಪಾವಳಿ ಹಬ್ಬದ ಬಳಿಕ ಶನಿ ಹಾಗೂ ಗುರುಗ್ರಹಗಳ ನೆರನಡೆ ಆರಂಭವಾಗಲಿದ್ದು, 3 ರಾಶಿಗಳ ಜನರಿಗೆ ಅವರ ಈ ಸ್ಥಿತಿ ಪರಿವರ್ತನೆ ಸಾಕಷ್ಟು ಲಾಭಗಳನ್ನು ತಂದುಕೊಡಲಿದೆ. (Spiritual News In Kannada)

2 /5

ಮೇಷ ರಾಶಿ: ಶನಿ ನಿಮ್ಮ ಜಾತಕದ ಆದಾಯ ಭಾವದಲ್ಲಿ ಹಾಗೂ ಗುರು ನಿಮ್ಮ ಜಾತಕದ ಲಗ್ನ ಭಾವದಲ್ಲಿ ನೇರನಡೆ ಅನುಸರಿಸಲಿದ್ದಾರೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಜಬರ್ದಸ್ತ್ ಹೆಚ್ಚಳ ಸಂಭವಿಸಲಿದೆ. ಆದಾಯದ ಹೊಸ ಮೂಲಗಳು ತೆರೆದುಕೊಳ್ಳಲಿವೆ. ಹಳೆ ಹೂಡಿಕೆಗಳಿಂದಲೂ ಕೂಡ ನಿಮಗೆ ಸಾಕಷ್ಟು ಲಾಭ ಸಿಗಲಿದೆ. ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸದಲ್ಲಿ ಹೆಚ್ಚಳವನ್ನು ನೀವು ಕಾಣಬಹುದು. ಘನತೆ-ಗೌರವ-ಪ್ರತಿಷ್ಠೆ ಹೆಚ್ಚಾಗಲಿದೆ. ವ್ಯಾಪಾರದಲ್ಲಿ ಧನಲಾಭದ ಎಲ್ಲಾ ಲಕ್ಷಣಗಳು ಗೋಕರಿಸುತ್ತಿವೆ.

3 /5

ಮಿಥುನ ರಾಶಿ: ಶನಿ ನಿಮ್ಮ ಜಾತಕದ ಭಾಗ್ಯ ಸ್ಥಾನದಲ್ಲಿ ಹಾಗೂ ಗುರು ನಿಮ್ಮ ಜಾತಕದ ಏಕಾದಶ ಭಾವದಲ್ಲಿ ನೆರನಡೆಯನ್ನು ಅನುಸರಿಸಲಿದ್ದಾರೆ. ಇದರಿಂದ ನಿಮ್ಮ ಆದಾಯ ದುಪಟ್ಟಾಗಲಿದೆ. ದೀರ್ಘಾವಧಿಯಿಂದ ನೆನೆಗುದಿಗೆ ಬಿದ್ದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ. ಈ ಅವಧಿಯಲ್ಲಿ ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಪ್ರಾಪ್ತಿಯಾಗಲಿದೆ. ಹೊಸ ಕೆಲಸ ಆರಂಭಿಸಲು ಇದು ಸುವರ್ಣಕಾಲ. ಭವಿಷ್ಯದಲ್ಲಿ ಅದರಿಂದ ನಿಮಗೆ ಉತ್ತಮ ಪರಿಣಾಮಗಳು ಪ್ರಾಪ್ತಿಯಾಗಲಿವೆ, 

4 /5

ಸಿಂಹ ರಾಶಿ: ಶನಿ ನಿಮ್ಮ ಜಾತಕದ ಸಪ್ತಮ ಭಾವದಲ್ಲಿ ನೇರನಡೆ ಅನುಸರಿಸಿದರೆ, ಗುರು ನಿಮ್ಮ ಜಾತಕದಲ್ಲಿ ನವಾಮಾಂಶನಾಗಿ ನೇರ ನಡೆ ಆರಂಭಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಪ್ರೇಮ ಸಂಬಂಧಗಳಲ್ಲಿ ಸಾಕಷ್ಟು ಸುಮಧುರತೆ ಇರಲಿದೆ. ಬಾಳಸಂಗಾತಿಯ ಜೊತೆಗಿನ ನಿಮ್ಮ ಹೊಂದಾಣಿಕೆ ಸಾಕಷ್ಟು ಹೆಚ್ಚಾಗಲಿದೆ. ಅವರ ಸಲಹೆ ಪಡೆದು ಮಾಡುವ ಎಲ್ಲಾ ಕೆಲಸಗಳು ಯಶಸ್ಸು ಪ್ರಾಪ್ತಿಯಾಗಲಿದೆ. ಕೆಲಸ ಕಾರ್ಯಗಳ ನಿಮಿತ್ತ ಯಾತ್ರೆ ಸಂಭವಿಸುವ ಸಾಧ್ಯತೆ ಇದೆ. ಬಿಸ್ನೆಸ್ ನಲ್ಲಿ ಮನಸೋ ಇಚ್ಛೆ ಲಾಭ ನಿಮ್ಮದಾಗಲಿದೆ. ಹೂಡಿಕೆಗಾಗಿ ಈ ಸಮಯ ಸಾಕಷ್ಟು ಅನುಕೂಲಕರವಾಗಿದೆ. 

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)