Guru Gochar: ಜ್ಯೋತಿಷ್ಯ ಶಾಸ್ತ್ರದಲ್ಲಿ, ಮಂಗಳಕರ ಗ್ರಹ ಎಂದು ಪರಿಗಣಿಸಲಾಗಿರುವ ಗುರು ಗ್ರಹವನ್ನು ದೇವ ಗುರು ಎಂತಲೂ ಕರೆಯಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರು ಸಂಚಾರಕ್ಕೆ ಬಹಳ ಮಹತ್ವವಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ವೈದಿಕ ಜ್ಯೋತಿಷ್ಯದಲ್ಲಿ ಅತ್ಯಂತ ಮಂಗಳಕರ ಗ್ರಹ ಎಂದು ಕರೆಯಲ್ಪಡುವ ಗುರು ಗ್ರಹವು ಮುಂದಿನ ವರ್ಷ ಮೇ 1, 2024 ರಂದು ಶುಕ್ರನ ರಾಶಿಚಕ್ರ ಚಿಹ್ನೆಯಾದ ವೃಷಭ ರಾಶಿಗೆ ಪರಿವರ್ತನೆ ಹೊಂದಲಿದೆ.
ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಗುರು ಸಂಕ್ರಮಣದ ಬೆಲೆ ಗುರುವಿನ ದೃಷ್ಟಿ ಯಾವ ರಾಶಿಯವರ ಮೇಲೆ ಬೀಳುತ್ತದೆಯೋ ಅವರು ಶುಭ ಫಲಗಳನ್ನು ಅನುಭವಿಸುತ್ತಾರೆ ಎಂದು ನಂಬಲಾಗಿದೆ.
ಇದೀಗ ಮುಂದಿನ ವರ್ಷ ಮೇ 1, 2024 ರಂದು ಮಧ್ಯಾಹ್ನ 2:29 ಕ್ಕೆ ವೃಷಭ ರಾಶಿಗೆ ಸಾಗಲಿರುವ ಗುರು ಈ ಸಮಯದಲ್ಲಿ ಕೆಲವು ರಾಶಿಯವರ ಭವಿಷ್ಯವನ್ನು ಬೆಳಗಿಸಲಿದ್ದಾನೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವೆಂದರೆ...
ವೃಷಭ ರಾಶಿಯಲ್ಲಿ ಗುರುವಿನ ಸಂಚಾರವು ಮೇಷ ರಾಶಿಯವರ ಅದೃಷ್ಟವನ್ನು ಬಳಪಡಿಸಲಿದೆ. ಈ ಸಂಯದಲ್ಲಿ ಧನ ಯೋಗ ಪ್ರಾಪ್ತಿಯಾಗಲಿದ್ದು ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ. ಪೂರ್ವಜರ ಆಸ್ತಿಯಿಂದ ಲಾಭವಾಗಲಿದೆ. ನೀವು ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುತ್ತೀರಿ. 2024ರಲ್ಲಿ ನೀವು ಶುಭ ಸುದ್ದಿಗಳನ್ನು ಕೂಡ ಪಡೆಯುವಿರಿ. ಕುಟುಂಬದಲ್ಲಿ ಯಾರಿಗಾದರೂ ಮದುವೆ ನಿಶ್ಚಯವಾಗಬಹುದು.
ದೇವ ಗುರು ಗುರುವಿನ ಈ ಸಂಕ್ರಮಣದ ಫಲವಾಗಿ ನಿಮ್ಮ ಕೆಲಸ ಕಾರ್ಯಗಳಲ್ಲಿ ಎದುರಾಗಿದ್ದ ತೊಡಕುಗಳಿಂದ ಪರಿಹಾರವನ್ನು ಪಡೆಯುವಿರಿ. ನಿಮ್ಮ ಆದಾಯದಲ್ಲಿ ಉತ್ತಮ ಹೆಚ್ಚಳವನ್ನು ಕಾಣುವಿರಿ, ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಲು ಬಯಸುವವರಿಗೆ ನಿಮ್ಮ ಕನಸು ನನಸಾಗಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಗೌರವವು ಹೆಚ್ಚಾಗುತ್ತದೆ. ನಿಮ್ಮ ಮೇಲಧಿಕಾರಿಗಳಿಂದ ಮನ್ನಣೆ ಪಡೆಯುವಿರಿ.
ಗುರುವು ಸಿಂಹ ರಾಶಿಯ ಅಧಿಪತಿ ಗ್ರಹ ಸೂರ್ಯ ದೇವನ ಉತ್ತಮ ಸ್ನೇಹಿತ. ಹಾಗಾಗಿ, ಗುರುವಿನ ಸಂಕ್ರಮವು ಸಿಂಹ ರಾಶಿಯವರಿಗೆ ವಿಶೇಷ ಫಲಗಳನ್ನು ನೀಡಲಿದೆ. ನೀವು ನಿಮ್ಮ ಬುದ್ಧಿವಂತಿಕೆಯನ್ನು ಸರಿಯಾಗಿ ಬಳಸಿದರೆ ಕೆಲಸದ ಸ್ಥಳದಲ್ಲಿ ಅದರ ಸಂಪೂರ್ಣ ಲಾಭವನ್ನು ಪಡೆದುಕೊಳ್ಳುತ್ತೀರಿ. ಉದ್ಯೋಗದಲ್ಲಿ ಧನಾತ್ಮಕ ಬದಲಾವಣೆಗಳಾಗಬಹುದು. ಪೂರ್ವಜರ ಆಸ್ತಿಯಿಂದ ಲಾಭ, ಹಠಾತ್ ಆರ್ಥಿಕ ಲಾಭ ಪಡೆಯುವ ಸಾಧ್ಯತೆಗಳಿವೆ. ನಿಮ್ಮ ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.