Guinness World Record: ಒಂದೇ ಬೆರಳಿನಿಂದ 129 ಕೆಜಿ ತೂಕ ಎತ್ತಿ ದಾಖಲೆ ನಿರ್ಮಿಸಿದ ವ್ಯಕ್ತಿ..!

ಗಿನ್ನೆಸ್ ವಿಶ್ವ ದಾಖಲೆಯನ್ನು ಮುರಿಯಲು ಸ್ಟೀವ್ ಕೀಲರ್ ಅವರು 8 ಸೆಕೆಂಡುಗಳ ಕಾಲ 129.50 ಕೆಜಿ (285.49 ಪೌಂಡ್) ತೂಕವನ್ನು ಡೆಡ್‌ಲಿಫ್ಟ್‌ ಮಾಡಿ ಹೊಸ ದಾಖಲೆ ಬರೆದಿದ್ದಾರೆ.

ನವದೆಹಲಿ: ಇಂಗ್ಲೆಂಡಿನ ವ್ಯಕ್ತಿಯೊಬ್ಬರು ಕೇಲವ ತಮ್ಮ ಒಂದೇ ಒಂದು ಬೆರಳಿನಿಂದ ಅತಿಹೆಚ್ಚಿನ ತೂಕವನ್ನು ಎತ್ತುವ ಮೂಲಕ(ಡೆಡ್‌ಲಿಫ್ಟ್‌) ಗಿನ್ನೆಸ್ ವಿಶ್ವ ದಾಖಲೆಯನ್ನು ಬ್ರೇಕ್ ಮಾಡಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಸ್ಟೀವ್ ಕೀಲರ್ ತನ್ನ ಮಧ್ಯದ ಬೆರಳನ್ನು ಬಳಸಿ 129.50 ಕೆಜಿ ಡೆಡ್‌ಲಿಫ್ಟ್ ಮಾಡಿದ್ದಾರೆ. ‘ಇದು ನಂಬಲಾಗದಷ್ಟು ನೋವಿನಿಂದ ಕೂಡಿದೆ. ಆದರೆ, ನನ್ನ ಬೆರಳುಗಳು ತುಂಬಾ ಬಲಶಾಲಿಯಾಗಿವೆ. ನಾನು ಎತ್ತಿರುವ ತೂಕದ ಬಗ್ಗೆ ನನಗೆ ಹೆಮ್ಮೆ ಇದೆ’ ಎಂದು ಅವರು ತಮ್ಮ ಸಾಧನೆ ಬಗ್ಗೆ ಹೇಳಿಕೊಂಡಿದ್ದಾರೆ. ಅವರು 129.50 kg (285.49 lb)ನ ತೂಕವನ್ನು 8 ಸೆಕೆಂಡುಗಳ ಕಾಲ ಡೆಡ್‌ಲಿಫ್ಟ್‌ ಮಾಡಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಸ್ಟೀವ್ ಕೀಲರ್ ಅವರು ಕೆಂಟ್ ಮೂಲದ ಸಮರ ಕಲಾವಿದ. ಫೆಬ್ರವರಿ 2022ರಲ್ಲಿ ಅವರು ಕೆಂಟ್‌ನ ಆಶ್‌ಫೋರ್ಡ್‌ನಲ್ಲಿ ಈ ದಾಖಲೆಯನ್ನು ಮುರಿಯಲು ಪ್ರಯತ್ನಿಸಿದರು. 129.50 ಕೆಜಿ (285.49 ಪೌಂಡ್) ಬೃಹತ್ ಮೊತ್ತವನ್ನು ಎತ್ತುವ ಮೂಲಕ ಸ್ಟೀವ್ ದಶಕದ ಹಳೆಯ ದಾಖಲೆಯನ್ನು ಮುರಿದಿದ್ದಾರೆ.

2 /4

ಸ್ಟೀವ್ ಒಂದೇ ಸಮಯದಲ್ಲಿ 6 ಕಬ್ಬಿಣದ ತೂಕದ ಡಿಸ್ಕ್‌ಗಳನ್ನು ಎತ್ತಿದರು. 10 ಕೆಜಿ, 20 ಕೆಜಿಯ ತಲಾ ಒಂದು, 25 ಕೆಜಿಯ ಮೂರು ಮತ್ತು 26 ಕೆಜಿ ಬಾರದ 1 ಕಬ್ಬಿಣದ ಡಿಸ್ಕ್‍ಗಳನ್ನು ಅವರು ಎತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಗಿನ್ನೆಸ್ ವಿಶ್ವ ದಾಖಲೆ ಮುರಿದ ಬಳಿಕ ಅವರು ಸಂಭ್ರಮದಿಂದ ಕುಣಿದು ಕುಪ್ಪಳಿಸಿದ್ದಾರೆ.    

3 /4

48ರ ಹರೆಯದ ಸ್ಟೀವ್ ಕೀಲರ್ ಕಳೆದ 4 ವರ್ಷಗಳಿಂದ ತರಬೇತಿ ಪಡೆಯುತ್ತಿದ್ದಾರೆ. ಸ್ಟೀವ್ ಅವರು 18ವರ್ಷ ವಯಸ್ಸಿನಿಂದಲೂ ಕರಾಟೆ ಮತ್ತು ಜೂಡೋ ಅಭ್ಯಾಸ ಮಾಡಿದ್ದಾರೆ. ಹೀಗಾಗಿ ತಮ್ಮ ಕೈಗೆ ಅತ್ಯುತ್ತಮವಾದ ಶಕ್ತಿಯಿದೆ ಎಂದುಕೊಂಡಿದ್ದ ಅವರು ದಾಖಲೆ ನಿರ್ಮಿಸಲು ನಿರ್ಧರಿಸಿದರು.

4 /4

ಹಿಂದಿನ ದಾಖಲೆ ಬೆನಿಕ್ ಇಸ್ರೇಲಿಯಾನ್ ಅವರ ಹೆಸರಿನಲ್ಲಿತ್ತು. ಅವರು 2011ರಲ್ಲಿ ತಮ್ಮ ಬಲ ಮಧ್ಯದ ಬೆರಳಿನಿಂದ 116.90 ಕೆಜಿ (257.72 ಪೌಂಡ್) ತೂಕವನ್ನು ಎತ್ತಿ ದಾಖಲೆ ಮಾಡಿದ್ದರು. ಅದೇ ವರ್ಷದಲ್ಲಿ ಬೆನಿಕ್ 121.70 kg (268.30 lb) ತೂಕ ಎತ್ತುವ ಮೂಲಕ ತಮ್ಮದೇ ದಾಖಲೆಯನ್ನು ಮುರಿದಿದ್ದರು.