Guava leaves For White Hair : ಪ್ರತಿಯೊಬ್ಬರೂ ತಮ್ಮ ಕೂದಲು ದಪ್ಪ, ಮೃದು, ಕಪ್ಪು ಮತ್ತು ಉದ್ದವಾಗಿರಬೇಕು ಎಂದು ಬಯಸುತ್ತಾರೆ. ಈ ಎಲೆಯ ನೀರು ನಿಮ್ಮ ಕೂದಲಿನ ಎಲ್ಲ ಸಮಸ್ಯೆಗಳಿಗೂ ಪರಿಹಾರ ನೀಡುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಇದು ಬಳಸಲು ತುಂಬಾ ಸುಲಭ. ಇದು ಕೂದಲಿನ ಬೆಳವಣಿಗೆಗೆ ತುಂಬಾ ಪ್ರಯೋಜನಕಾರಿ ಮತ್ತು ಪರಿಣಾಮಕಾರಿಯಾಗಿದೆ. ಕೂದಲಿನ ಎಲ್ಲ ಸಮಸ್ಯೆಗಳಿಗೂ ಪರಿಹಾರ ಪೇರಲ ಎಲೆಗಳಿಲ್ಲಿದೆ. ಪೇರಲ ಎಲೆಯಿಂದ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಬಹುದು.
ಪೇರಲ ಎಲೆಗಳಲ್ಲಿ ಅನೇಕ ಪೋಷಕಾಂಶಗಳಿವೆ. ಇದು ಜೀವಸತ್ವಗಳು, ಖನಿಜಗಳು ಮತ್ತು ಫೈಬರ್ ಅನ್ನು ಹೊಂದಿರುತ್ತದೆ. ಇದು ಕೂದಲು ಮತ್ತು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ. ಕೂದಲಿಗೆ ಪೇರಲ ಎಲೆಗಳನ್ನು ಹಲವು ರೀತಿಯಲ್ಲಿ ಬಳಸಬಹುದು.
ಪೇರಲ ಎಲೆಗಳ ಹೇರ್ ಪ್ಯಾಕ್: 15 ರಿಂದ 20 ಪೇರಲ ಎಲೆಗಳನ್ನು ತೊಳೆದು ಒಣಗಿಸಿ. ಮಿಕ್ಸಿಯಲ್ಲಿ ನೀರಿನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ಕೂದಲಿನ ಬುಡಕ್ಕೆ ಹಚ್ಚಿಕೊಳ್ಳಿ. ಕೆಲವು ನಿಮಿಷಗಳ ಕಾಲ ಬೆರಳುಗಳಿಂದ ಮಸಾಜ್ ಮಾಡಿ. 30-40 ನಿಮಿಷಗಳ ಕಾಲ ಹಾಗೆ ಬಿಟ್ಟು, ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಸೌಮ್ಯವಾದ ಶಾಂಪೂ ಬಳಸಿ. ಇದನ್ನು ವಾರಕ್ಕೆ ಎರಡು ಬಾರಿ ಮಾಡಿ.
ತೆಂಗಿನೆಣ್ಣೆ ಜೊತೆ ಪೇರಲ ಎಲೆ: ಕೆಲವು ಪೇರಲ ಎಲೆಗಳನ್ನು ತೊಳೆದು ಬ್ಲೆಂಡರ್ನಲ್ಲಿ ಹಾಕಿ ದಪ್ಪ ಪೇಸ್ಟ್ ತಯಾರಿಸಿ ಪಕ್ಕಕ್ಕೆ ಇಡಿ. ಒಂದು ಚಿಕ್ಕ ಈರುಳ್ಳಿ ಹಾಕಿ ಪ್ಯೂರಿ ಮಾಡಿ. ಅದನ್ನು ಬಟ್ಟೆಯಲ್ಲಿ ಹಾಕಿ ರಸವನ್ನು ಹಿಂಡಿ. ಈರುಳ್ಳಿ ರಸದಲ್ಲಿ ಪೇರಲ ಎಲೆಗಳ ಪೇಸ್ಟ್ ಮತ್ತು ತೆಂಗಿನೆಣ್ಣೆಯನ್ನು ಮಿಶ್ರಣ ಮಾಡಿ. ಇದನ್ನು ಹಚ್ಚಿ, ಅರ್ಧ ಗಂಟೆಯ ನಂತರ ತೊಳೆಯಿರಿ.
ಪೇರಲ ಎಲೆಯ ನೀರು : ಒಂದಷ್ಟು ಪೇರಲ ಎಲೆಗಳನ್ನು ತೆಗೆದುಕೋಮಡು ತೊಳೆಯಿರಿ. ಇದನ್ನು ಒಂದು ಲೀಟರ್ ನೀರಿನಲ್ಲಿ 15 - 20 ನಿಮಿಷ ಕುದಿಸಿ, ತಣ್ಣಗಾಗುವ ವರೆಗೆ ಬಿಡಿ. ನಂತರ ಫಿಲ್ಟರ್ ಮಾಡಿ ಮತ್ತು ಬಾಟಲಿಯಲ್ಲಿ ಸಂಗ್ರಹಿಸಿ. ಸ್ಪ್ರೇ ಬಾಟಲಿಯ ಸಹಾಯದಿಂದ ಕೂದಲಿನ ಬೇರುಗಳಿಗೆ ಹಚ್ಚಿ, 10 ನಿಮಿಷ ಕಾಲ ಮಸಾಜ್ ಮಾಡಿ. ನಂತರ ಸರಳ ನೀರಿನಿಂದ ಕೂದಲನ್ನು ತೊಳೆಯಿರಿ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE KANNADA NEWS ಇದನ್ನು ಖಚಿತಪಡಿಸುವುದಿಲ್ಲ.