Great Business Ideas: ಶೂನ್ಯ ಬಂಡವಾಳದಿಂದ ಈ ಬ್ಯುಸಿನೆಸ್ ಆರಂಭಿಸಿ ಕೈತುಂಬಾ ಗಳಿಸಿ

Great Business Ideas: ಶೂನ್ಯ ಬಂಡವಾಳದ ಮೂಲಕವೂ ನೀವು ವ್ಯವಹಾರ ಪ್ರಾರಂಭಿಸಿ ಕೈತುಂಬಾ ಹಣ ಗಳಿಸಬಹುದು. ನೀವು ತಂತ್ರಜ್ಞಾನ ಉಪಯೋಗಿಸಿಕೊಂಡು ಇಂದು ಹಲವಾರು ರೀತಿಯಲ್ಲಿ ಹಣ ಗಳಿಸಬಹುದು. ​

ನವದೆಹಲಿ: ಇಂದು ಬಹುತೇಕರು ಸ್ವತಂ ಉದ್ಯೋಗ ಮಾಡಲು ಬಯಸುತ್ತಾರೆ. ಆದರೆ ಅನೇಕರು ಬಂಡವಾಳದ ಸಮಸ್ಯೆಯಿಂದ ಕೈಚೆಲ್ಲಿ ಕುಳಿತುಕೊಳ್ಳುತ್ತಾರೆ. ಶೂನ್ಯ ಬಂಡವಾಳದ ಮೂಲಕವೂ ನೀವು ವ್ಯವಹಾರ ಪ್ರಾರಂಭಿಸಿ ಕೈತುಂಬಾ ಹಣ ಗಳಿಸಬಹುದು. ನೀವು ತಂತ್ರಜ್ಞಾನ ಉಪಯೋಗಿಸಿಕೊಂಡು ಇಂದು ಹಲವಾರು ರೀತಿಯಲ್ಲಿ ಹಣ ಗಳಿಸಬಹುದು. ಯಾವುದೇ ಬಂಡವಾಳ ಇಲ್ಲದೆ ನೀವೂ ಸಹ ಮಾಡಬಹುದಾದ ಟಾಪ್ 5 ಬ್ಯುಸಿನೆಸ್ ಐಡಿಯಾಗಳ ಬಗ್ಗೆ ಇಂದು ನಾವು ನಿಮಗೆ ತಿಳಿಸಿಕೊಡಲಿದ್ದೇವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

1 /5

ಇಂದು ಯುಟ್ಯೂಬ್‌ ಬಗ್ಗೆ ಗೊತ್ತಿಲ್ಲದೇ ಇರುವವರು ಯಾರೂ ಇಲ್ಲ. ಪ್ರತಿಯೊಬ್ಬರಿಗೂ ಯುಟ್ಯೂಬ್ ಪರಿಚಯವಿರುತ್ತದೆ. ಯುಟ್ಯೂಬ್‌ ವಿಶ್ವದ ಅತಿದೊಡ್ಡ ವಿಡಿಯೋ ವೇದಿಕೆಯಾಗಿದೆ. 230 ದಶಲಕ್ಷಕ್ಕೂ ಹೆಚ್ಚು ಜನರು ಬಳಸುವ ಯುಟ್ಯೂಬ್‍ನಲ್ಲಿ ನೀವೇ ಸ್ವತಂ ಚಾನೆಲ್ ಆರಂಭಿಸುವ ಮೂಲಕ ಕೈತುಂಬಾ ಆದಾಯ ಗಳಿಸಬಹುದು. ಇದಕ್ಕೆ ಜನರಿಗೆ ಇಷ್ಟವಾಗುವ ಕಟೆಂಡ್ ಬತ್ಗೆ ನೀವು ಗಮನಹರಿಸಬೇಕು.  

2 /5

ನಿಮಗೆ ಬರೆಯುವ ಕೌಶಲ್ಯವಿದ್ದರೆ ಸ್ವಂತ ಬ್ಲಾಗ್‌ ರಚಿಸಿ ಕೈತುಂಬಾ ಹಣ ಮಾಡಬಹುದು. ನಿಮ್ಮದೇ ಬ್ಲಾಗ್‌ ಆರಂಭಿಸುವ ಮೂಲಕ ನೀವು ಇಲ್ಲಿ ಹಣ ಗಳಿಸಬಹುದು. ನಿಮ್ಮ ಆಲೋಚನೆಗಳು, ಕಲಿಕೆ ಅಥವಾ ಭಾವನೆಗಳನ್ನು ನೀವು ಜನರೊಂದಿಗೆ ಹಂಚಿಕೊಳ್ಳಬಹುದು. ಜನರಿಗೆ ಇಷ್ಟವಾಗುವ ವಿಷಯಗಳ ಬಗ್ಗೆ ಬರೆಯುವ ಮೂಲಕ ಅಥವಾ ಮಾಹಿತಿ ನೀಡುವ ಮೂಲಕ ನೀವು ಹಣ ಗಳಿಸಬಹುದು.

3 /5

ಶೂನ್ಯ ಬಂಡವಾಳದಿಂದ ಆದಾಯ ಗಳಿಸುವ ಮತ್ತೊಂದು ಐಡಿಯಾ ಎಂದರೆ ನಿಮ್ಮ ವಾಹನವನ್ನು ಬಾಡಿಗೆಗೆ ನೀಡುವುದು. ಇಂದು ದೇಶದಲ್ಲಿ ಹಲವಾರು ಖಾಸಗಿ ಕಂಪನಿಗಳು ಈ ರೀತಿಯ ಸೇವನೆಗಳನ್ನು ಲಕ್ಷಾಂತರ ಗ್ರಾಹಕರಿಗೆ ನೀಡುತ್ತಿರುತ್ತವೆ. ನೀವು ಆ ಕಂಪನಿಗಳೊಂದಿಗೆ ಟೈ ಅಪ್ ಆಗಿ ಕೈತುಂಬಾ ಹಣ ಗಳಿಸಬಹುದು.

4 /5

ಇಂದು ಸೋಶಿಯಲ್‌ ಮೀಡಿಯಾ ತುಂಬಾ ಜನಪ್ರಿಯವಾಗಿವೆ. ನಿಮಗೆ ಈ ಕೌಶಲ್ಯವಿದ್ದರೆ ದೊಡ್ಡ ಮೊತ್ತದ ಆದಾಯವನ್ನು ಗಳಿಸಬಹುದು. ಇದಕ್ಕಾಗಿ ನೀವು ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರಬೇಕು. ಹೆಚ್ಚು ಹೆಚ್ಚು ಫಾಲೋವರ್ಸ್‍ಗಳನ್ನು ಸಂಪಾದಿಸಿದರೆ ನಿಮ್ಮ ಸಂಪಾದನೆಯೂ ಹೆಚ್ಚುತ್ತದೆ.

5 /5

ನೀವು ಯಾವುದೇ ವೃತ್ತಿಪರ ಕೌಶಲ್ಯಗಳು ಅಥವಾ ಹೆಚ್ಚಿನ ಅರ್ಹತೆ ಹೊಂದಿರದಿದ್ದರೂ ಕಂಪ್ಯೂಟರ್‌ ಬಗ್ಗೆ ಸ್ವಲ್ಪ ಜ್ಞಾನ ಹೊಂದಿದ್ದರೆ ಸಾಕು ಡೇಟಾ ಎಂಟ್ರಿ ಕೆಲಸದ ಮೂಲಕ ನೀವು ಕೈತುಂಬಾ ಹಣ ಗಳಿಸಬಹುದು. ಸಾಮಾನ್ಯವಾಗಿ ಈ ಉದ್ಯೋಗಕ್ಕೆ ಗಂಟೆಗಳ ಆಧಾರದ ಮೇಲೆ ಹಣ ಪಾವತಿಸಲಾಗುತ್ತದೆ. ಹೀಗಾಗಿ ನೀವು ಹೆಚ್ಚು ಕೆಲಸ ಮಾಡಿ ಹೆಚ್ಚು ಹಣ ಗಳಿಸಬಹುದು.