ವಿಶ್ವದ ಪ್ರಮುಖ ತಂತ್ರಜ್ಞಾನ ಕಂಪನಿ ಗೂಗಲ್ ತನ್ನ ಬಳಕೆದಾರರಿಗೆ ಮತ್ತೊಂದು ಸೌಲಭ್ಯವನ್ನು ನೀಡಿದೆ.
ನವದೆಹಲಿ: ವಿಶ್ವದ ಪ್ರಮುಖ ತಂತ್ರಜ್ಞಾನ ಕಂಪನಿ ಗೂಗಲ್ ತನ್ನ ಬಳಕೆದಾರರಿಗೆ ಮತ್ತೊಂದು ಸೌಲಭ್ಯವನ್ನು ನೀಡಿದೆ. ಗೂಗಲ್ ತನ್ನ photos ಅಪ್ಲಿಕೇಶನ್ಗೆ ಹೊಸ editor ಸೇರಿಸಿದೆ, ಇದರಿಂದ ನೀವು ಫೋಟೋಗಳನ್ನು ಮೊದಲಿಗಿಂತ ಉತ್ತಮ ರೀತಿಯಲ್ಲಿ ಎಡಿಟ್ ಮಾಡಬಹುದಾಗಿದೆ. ಸುದ್ದಿಯ ಪ್ರಕಾರ, ಗೂಗಲ್ ಈ ಎಡಿಟರ್ ಅನ್ನು ಆಂಡ್ರಾಯ್ಡ್ನಲ್ಲಿನ ಫೋಟೋಗಳ ಅಪ್ಲಿಕೇಶನ್ಗೆ ಸೇರಿಸಿದೆ, ಇದರಿಂದ ಗ್ರ್ಯಾನುಲರ್ ಅಡ್ಜೆಸ್ಟ್ ಮೆಂಟ್ ಮಾಡುವುದು ಎಂದಿಗಿಂತಲೂ ಸುಲಭವಾಗಿದೆ.
ಗೂಗಲ್ನ ತನ್ನ ಎಡಿಟರ್ ವೈಶಿಷ್ಟ್ಯಕ್ಕೆ ಹೊಸ ಟ್ಯಾಬ್ ಅನ್ನು ಸೇರಿಸಿದ್ದು, ಇದು ಬಳಕೆದಾರರು ಸಂಪಾದಿಸುತ್ತಿರುವ ಫೋಟೋಗೆ ಅನುಗುಣವಾಗಿ ಸಲಹೆಗಳನ್ನು ನೀಡಲು ಯಂತ್ರ ಕಲಿಕೆಯನ್ನು ಬಳಸುತ್ತದೆ.
ಈ ಸಲಹೆಗಳು ಬಳಕೆದಾರರಿಗೆ ಕೇವಲ ಒಂದು ಟ್ಯಾಬ್ನಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಇದರ ಮೂಲಕ ಬಳಕೆದಾರರು ಹೊಳಪು, ಕಾಂಟ್ರಾಸ್ಟ್ ಮತ್ತು ಭಾವಚಿತ್ರ ಪರಿಣಾಮದಂತಹ ವೈಶಿಷ್ಟ್ಯಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬಳಸಬಹುದು.
ಈ ಕುರಿತು ಹೇಳಿಕೆ ನೀಡಿರುವ ಗೂಗಲ್ ಶೀಘ್ರದಲ್ಲಿಯೇ ಪೋರ್ಟ್ರೇಟ್ ಲೈಟ್ ಅನ್ನು ಸಹ ಪ್ರಾರಂಭಿಸುವುದಾಗಿ ಹೇಳಿದೆ, ಇದು ಪಿಕ್ಸೆಲ್ 4 ಎ (5 ಜಿ) ಮತ್ತು ಪಿಕ್ಸೆಲ್ 5 ನಲ್ಲಿ ಬರುವ ಹೊಸ ಎಡಿಟಿಂಗ್ ವೈಶಿಷ್ಟ್ಯವಾಗಿದೆ, ಇದು ಪೋರ್ಟ್ರೇಟ್ನಲ್ಲಿ ಫೇಸ್ ಲೈಟಿಂಗ್ ಅನ್ನು ಸುಧಾರಿಸಲು ಯಂತ್ರ ಕಲಿಕೆಯನ್ನು ಬಳಸಲಿದೆ.
ಪೋರ್ಟ್ರೇಟ್ ಮೋಡ್ ನಲ್ಲಿ ಕ್ಯಾಪ್ಚರ್ ಮಾಡದೆ ಇರತಕ್ಕಂತಹ ಭಾವಚಿತರಗಳನ್ನು ಕೂಡ ಪೋರ್ಟ್ರೇಟ್ ಲೈಟ್ ನಲ್ಲಿ ಜೋಡಿಸಬಹುದು. ಹೊಸ ಫೋಟೋ ಆಗಿರಲಿ ಅಥವಾ ಯಾವುದೇ ಹಳೆ ಫೋಟೋ ಆಗಿರಲಿ ಅದನ್ನು ಇದಕ್ಕೆ ಜೋಡಿಸಬಹುದು.
IANS ಪ್ರಕಟಗೊಳಿಸಿರುವ ಒಂದು ವರದಿಯ ಪ್ರಕಾರ, ಇಲ್ಲಿ ನೀವು ಎನ್ಹಂಸ್ ಹಾಗೂ ಕಲರ್ ಪಾಪ್ ಗಳಂತಹ ಕೆಲ ಸಲಹೆಗಳನ್ನು ಕಾಣಬಹುದಾಗಿದ್ದು, ಮುಂಬರುವ ತಿಂಗಳುಗಳಲ್ಲಿ ನಾವು ಪಿಕ್ಸೆಸ್ ಡಿವೈಸ್ ನಲ್ಲಿ ನಿಮ್ಮ ಪೋರ್ಟ್ರೇಸ್, ಲ್ಯಾಂಡ್ ಸ್ಕೆಪ್ಸ್, ಸನ್ ಸೆಟ್ಸ್ ನಲ್ಲಿ ಮತ್ತಷ್ಟು ಸೌಕರ್ಯಗಳನ್ನು ನೀಡಲಿದ್ದೇವೆ ಎಂದು ಗೂಗಲ್ ಹೇಳಿದೆ. ಹಲವು ಸೌಕರ್ಯಗಳಲ್ಲಿ ಫೋಟೋ ಬದಲಾವಣೆಗೆ ಇನ್ನಸ್ಟು ಕಷ್ಟಮೈಸೆಶನ್ ಗಳು ಸಿಗಲಿವೆ ಎಂದು ಗೂಗಲ್ ಹೇಳಿದೆ.