ಗುಡ್ ನ್ಯೂಸ್: ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ಗಳಲ್ಲಿ ಈ ರೀತಿ ಪಡೆಯಿರಿ ಡಿಸ್ಕೌಂಟ್

                     

ಗ್ಯಾಸ್ ಬುಕಿಂಗ್ ನಂತರ ಪಾವತಿಗೆ ಬಂದಾಗ ನಂತರ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಾದ Paytm, PhonePe, UPI, BHIM, Google Pay, Mobikwik ಮೂಲಕ ಪಾವತಿಸಿ. ಹೀಗೆ ಆನ್ಲೈನ್ ಮೂಲಕ ಪಾವತಿಸುವುದರಿಂದ ತೈಲ ಕಂಪನಿಗಳು ಗ್ರಾಹಕರಿಗೆ ರಿಯಾಯಿತಿ ನೀಡುತ್ತವೆ. ಮೊದಲ ಬಾರಿಗೆ ಎಲ್‌ಪಿಜಿ ಕಾಯ್ದಿರಿಸುವಾಗ ಮತ್ತು ಪಾವತಿಸುವಾಗ ಗ್ರಾಹಕರು ಉತ್ತಮ ಕ್ಯಾಶ್‌ಬ್ಯಾಕ್ ಅನ್ನು ಕೂಡ ಪಡೆಯುತ್ತಾರೆ.

1 /5

ನವದೆಹಲಿ: ಎಲ್‌ಪಿಜಿ ಸಿಲಿಂಡರ್‌ಗೆ ಸರ್ಕಾರ ಸಬ್ಸಿಡಿ ನೀಡುತ್ತದೆ. ನೀವು ಎಲ್‌ಪಿಜಿ ಗ್ಯಾಸ್ ಬುಕ್ ಮಾಡಿ ಸಿಲಿಂಡರ್ ಡೆಲಿವರಿ ಪಡೆದ ಬಳಿಕ ಈ ಸಬ್ಸಿಡಿ ಹಣ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಬರುತ್ತದೆ. ಒಂದು ವರ್ಷದಲ್ಲಿ ಸರ್ಕಾರವು 12 ಎಲ್‌ಪಿಜಿ ಸಿಲಿಂಡರ್‌ಗಳಿಗೆ ಸಬ್ಸಿಡಿ ನೀಡುತ್ತದೆ. ಈ ಸಬ್ಸಿಡಿ ಮೊತ್ತವು ಪ್ರತಿ ತಿಂಗಳು ಬದಲಾಗುತ್ತದೆ. ವರ್ಷದಲ್ಲಿ 12 ಎಲ್‌ಪಿಜಿ ಸಿಲಿಂಡರ್‌ಗಳಿಗಿಂತ ಹೆಚ್ಚಿನ ಸಿಲಿಂಡರ್ ತೆಗೆದುಕೊಂಡರೆ ನೀವು ಅದನ್ನು ಮಾರುಕಟ್ಟೆ ಬೆಲೆಗೆ ಖರೀದಿಸಬೇಕು. ಆದರೆ ನಿಮ್ಮಲ್ಲಿ ಸಬ್ಸಿಡಿ ರಹಿತ ಎಲ್‌ಪಿಜಿ ಇದ್ದರೆ ನೀವು ಸರ್ಕಾರದಿಂದ ಯಾವುದೇ ಸಬ್ಸಿಡಿ ಪಡೆಯುವುದಿಲ್ಲ. 

2 /5

ಸಬ್ಸಿಡಿ ಸೌಲಭ್ಯ ಇಲ್ಲದಿದ್ದರೂ ಸಹ ನೀವು ಸಿಲಿಂಡರ್‌ಗಳಿಗೆ ರಿಯಾಯಿತಿ ಪಡೆಯಬಹುದು. ಸರ್ಕಾರ ನಿಮಗೆ ಸಬ್ಸಿಡಿ ನೀಡದಿದ್ದರೂ ತೈಲ ಕಂಪನಿಗಳಾದ ಹಿಂದೂಸ್ತಾನ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಮತ್ತು ಭಾರತ್ ಪೆಟ್ರೋಲಿಯಂ ತನ್ನ ಗ್ರಾಹಕರಿಗೆ ಆನ್‌ಲೈನ್ ಪಾವತಿಗಳಿಗೆ ರಿಯಾಯಿತಿ ನೀಡುತ್ತದೆ. ಡಿಜಿಟಲ್ ಪಾವತಿ ಅಭಿಯಾನವನ್ನು ಉತ್ತೇಜಿಸಲು ಸರ್ಕಾರವು ಈ ರಿಯಾಯಿತಿ ಸೌಲಭ್ಯವನ್ನು ನೀಡಿದೆ. ತೈಲ ಕಂಪನಿಗಳು ಗ್ರಾಹಕರಿಗೆ ಈ ರಿಯಾಯಿತಿಗಳನ್ನು ಕ್ಯಾಶ್‌ಬ್ಯಾಕ್, ತ್ವರಿತ ರಿಯಾಯಿತಿ, ಕೂಪನ್ ಮುಂತಾದ ರೀತಿಯಲ್ಲಿ ನೀಡುತ್ತವೆ.  

3 /5

ನೀವು ಎಲ್‌ಪಿಜಿ ಸಿಲಿಂಡರ್ ಅನ್ನು ಬುಕ್ ಮಾಡುವಾಗಲೆಲ್ಲಾ ಅದನ್ನು ಎಂದಿಗೂ ನಗದು ರೂಪದಲ್ಲಿ ಪಾವತಿಸಬೇಡಿ. ಹೆಚ್ಚಿನ ಜನರು ಸಿಲಿಂಡರ್ ಅನ್ನು ಕಾಯ್ದಿರಿಸಿದ ನಂತರ ನಗದು ನೀಡಿ ಸಿಲಿಂಡರ್ ಪಡೆಯುತ್ತಾರೆ. ಹೀಗೆ ಮಾಡುವುದರಿಂದ ರಿಯಾಯಿತಿ ಸಿಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಎಂದಿಗೂ ನಗದು ಮೂಲಕ ಪಾವತಿಸಬೇಡಿ. ಯಾವಾಗಲೂ ಡಿಜಿಟಲ್ ರೀತಿಯಲ್ಲಿ ಪಾವತಿಸಿ ಆಗ ನಿಮಗೆ ರಿಯಾಯಿತಿ ಸಿಗುತ್ತದೆ.

4 /5

ಗ್ಯಾಸ್ ಬುಕಿಂಗ್ ಮಾಡಿದ ಬಳಿಕ ಡೆಲಿವರಿಗೆ ಬಂದಾಗ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಾದ Paytm, PhonePe, UPI, BHIM, Google Pay, Mobikwik ಮೂಲಕ ಪಾವತಿಸಿ. ಹೀಗೆ ಆನ್ಲೈನ್ ಮೂಲಕ ಪಾವತಿಸುವುದರಿಂದ ತೈಲ ಕಂಪನಿಗಳು ಗ್ರಾಹಕರಿಗೆ ರಿಯಾಯಿತಿ ನೀಡುತ್ತವೆ. ಮೊದಲ ಬಾರಿಗೆ ಎಲ್‌ಪಿಜಿ ಕಾಯ್ದಿರಿಸುವಾಗ ಮತ್ತು ಪಾವತಿಸುವಾಗ ಗ್ರಾಹಕರು ಉತ್ತಮ ಕ್ಯಾಶ್‌ಬ್ಯಾಕ್ ಅನ್ನು ಕೂಡ ಪಡೆಯುತ್ತಾರೆ. ಇದಲ್ಲದೆ ನೀವು ಆನ್‌ಲೈನ್ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಮೂಲಕವೂ ಈ ರಿಯಾಯಿತಿಯ ಲಾಭವನ್ನು ಪಡೆಯಬಹುದು.

5 /5

ತೈಲ ಕಂಪನಿಗಳು ನವೆಂಬರ್ 1 ರಿಂದ ಎಲ್‌ಪಿಜಿ ಸಿಲಿಂಡರ್‌ಗಳ  ಹೊಸ ವಿತರಣಾ ವ್ಯವಸ್ಥೆಯನ್ನು ಜಾರಿಗೆ ತಂದಿವೆ. ಸರ್ಕಾರಿ ತೈಲ ಕಂಪನಿಗಳು ಅನಿಲ ಕಳ್ಳತನವನ್ನು ತಡೆಯಲು ಮತ್ತು ಸರಿಯಾದ ಗ್ರಾಹಕರನ್ನು ಗುರುತಿಸಲು ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಿವೆ. ಈ ಪ್ರಕ್ರಿಯೆಯನ್ನು ಡೆಲಿವರಿ ದೃಢೀಕರಣ ಕೋಡ್ (ಡಿಎಸಿ) ಎಂದು ಕರೆಯಲಾಗುತ್ತದೆ. ನವೆಂಬರ್ 1 ರಿಂದ  ಸಿಲಿಂಡರ್‌ನ ಹೋಂ ಡೆಲಿವರಿಯನ್ನು ಒಟಿಪಿ (ಒನ್ ಟೈಮ್ ಪಾಸ್‌ವರ್ಡ್) ಮೂಲಕ ಮಾಡಲಾಗುತ್ತಿದೆ. ಒಟಿಪಿ ಹೇಳದೆ ನೀವು ಸಿಲಿಂಡರ್ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.