Good Luck Charm: ಹೊಸ ವರ್ಷಕ್ಕೂ ಮುನ್ನ ಈ ವಸ್ತುಗಳನ್ನು ತಂದರೆ ವರ್ಷವಿಡೀ ಹಣದ ಸುರಿಮಳೆ

Good Luck Charm: ವಾಸ್ತು ಪ್ರಕಾರ, ಹೊಸ ವರ್ಷಕ್ಕೂ ಮುನ್ನ ಯಾವ ವಸ್ತುಗಳನ್ನು ಮನೆಗೆ ತರುವುದು ಮಂಗಳಕರ ಎಂದು ತಿಳಿಯಿರಿ.

Good Luck Charm: ಹೊಸ ವರ್ಷ 2023 ಆರಂಭವಾಗಲು ಇನ್ನು ಕೆಲವೇ ದಿನಗಳಷ್ಟೇ ಬಾಕಿ ಉಳಿದಿದೆ. ಹೊಸ ವರ್ಷದ ಸ್ವಾಗತಕ್ಕಾಗಿ ಈಗಾಗಲೇ ತಯಾರಿಯೂ ಆರಂಭವಾಗಿದೆ. ವಾಸ್ತು ಪ್ರಕಾರ, ಹೊಸ ವರ್ಷ ಆರಂಭಕ್ಕೂ ಮೊದಲು ಮನೆಗೆ ಕೆಲವು ಮಂಗಳಕರ ವಸ್ತುಗಳನ್ನು ತರುವುದರಿಂದ ಅಂತಹ ಮನೆಯಲ್ಲಿ ಸಕಾರಾತ್ಮಕತೆ ಹರಡಿ ವರ್ಷವಿಡೀ ಹಣದ ಮಳೆಯಾಗಲಿದೆ ಎಂದು ಹೇಳಲಾಗುತ್ತಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಪಾರಿಜಾತ ಹೂವು- ಸಾಗರ ಮಂಥನ ಸಮಯದಲ್ಲಿ ಪಾರಿಜಾತ ಪುಷ್ಪವೂ  ಹೊರಹೊಮ್ಮಿತು. ಪಾರಿಜಾತ ಪುಷ್ಪಗಳು ವಿಷ್ಣುವಿಗೆ ಬಹಳ ಪ್ರಿಯವಾದ ಹೂವುಗಳು. ಹಾಗಾಗಿ. ಯಾವ ಮನೆಯಲ್ಲಿ ಪಾರಿಜಾತ ವೃಕ್ಷ ಅಥವಾ ಪಾರಿಜಾತ ಹೂವು ಇರುತ್ತದೆಯೋ ಅಂತಹ ಮನೆಯಲ್ಲಿ ಸದಾ ಸಂಪತ್ತು- ಸಮೃದ್ಧಿ ಇರುತ್ತದೆ  ಎಂದು ಹೇಳಲಾಗುತ್ತದೆ.

2 /5

ಅಮೃತ ಕಲಶ- ಸಮುದ್ರ ಮಂಥನದಲ್ಲಿ ಹೊರಹೊಮ್ಮಿದ ಪದಾರ್ಥಗಳಲ್ಲಿ ಅಮೃತ ಕಲಶವೂ ಒಂದು. ಇದಕ್ಕಾಗಿ ದೇವತೆಗಳು ಮತ್ತು ರಾಕ್ಷಸರ ನಡುವೆ ಯುದ್ಧ ಪ್ರಾರಂಭವಾಯಿತು. ಕೊನೆಗೆ ಭಗವಾನ್ ಶ್ರೀ ಹರಿಯು ಮೋಹಿನಿಯ ರೂಪವನ್ನು ತಳೆದು ಅಮೃತ ಕಲಶವನ್ನು ರಕ್ಕಸರಿಂದ ರಕ್ಷಿಸಿದನು ಎಂದು ಹೇಳಲಾಗುತ್ತದೆ. ವಾಸ್ತು ಪ್ರಕಾರ, ಯಾವ ಮನೆಯಲ್ಲಿ ಅಮೃತ ಕಲಶ ಇರುತ್ತದೆಯೋ ಅಂತಹ ಮನೆಯಲ್ಲಿ ಎಂದಿಗೂ ಕೂಡ ಕಷ್ಟ-ಕಾರ್ಪಣ್ಯಗಳು, ಆರ್ಥಿಕ ಸಂಕಷ್ಟ ತಲೆದೋರುವುದಿಲ್ಲ ಎಂದು ಹೇಳಲಾಗುತ್ತದೆ.   

3 /5

ಶ್ವೇತ ವರ್ಣದ ಕುದುರೆ - ಸಾಗರದ ಮಂಥನದಲ್ಲಿ ಹಾರುವ ಶ್ವೇತ  ವರ್ಣದ ಕುದುರೆಯೂ ಹೊರಹೊಮ್ಮಿತು. ಈ ಬಿಳಿ ಬಣ್ಣದ ಕುದುರೆಯ ವಿಗ್ರಹ ಅಥವಾ ಚಿತ್ರವನ್ನು ಮನೆಯಲ್ಲಿ ಇರಿಸುವುದು ತುಂಬಾ ಪ್ರಯೋಜನಕಾರಿ. ಇದು ಮನೆಯಲ್ಲಿ ಸಕಾರಾತ್ಮಕತೆಯನ್ನು ತರುತ್ತದೆ ಎನ್ನಲಾಗುವುದು.

4 /5

ಐರಾವತ ಆನೆ: ಆನೆಗಳಲ್ಲಿ ಐರಾವತ ಆನೆಯನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಐರಾವತ ಆನೆಯು ಬಿಳಿ ಬಣ್ಣದ್ದಾಗಿದ್ದು ಇಂದ್ರನ ವಾಹನವಾಗಿದೆ. ಮನೆಯಲ್ಲಿ ಐರಾವತ ಆನೆಯ ವಿಗ್ರಹವನ್ನು ಇಡುವುದರಿಂದ ಅದೃಷ್ಟ, ಸಂತೋಷ, ಸಂಪತ್ತು ಮತ್ತು ಸಮೃದ್ಧಿಗೆ ಎಂದಿಗೂ ಕೊರತೆ ಆಗುವುದಿಲ್ಲ ಎಂದು ಹೇಳಲಾಗುತ್ತದೆ.

5 /5

ಪಾಂಚಜನ್ಯ ಶಂಖ- ಸಾಗರದ ಮಂಥನದಿಂದ ಹೊರಹೊಮ್ಮಿದ 14 ರತ್ನಗಳಲ್ಲಿ ಪಾಂಚಜನ್ಯ ಶಂಖವೂ ಸೇರಿದೆ. ಭಗವಾನ್ ವಿಷ್ಣುವು ಐದು ಜನ್ಮಗಳ ಶಂಖವನ್ನು ಧರಿಸುತ್ತಾನೆ. ಹಾಗಾಗಿ, ಮನೆಯ ದೇವರ ಮನೆಯಲ್ಲಿ ಶಂಖವನ್ನು ಹೊಂದುವುದರಿಂದ ತುಂಬಾ ಶುಭ ಫಲಿತಾಂಶಗಳನ್ನು ನೀಡುತ್ತದೆ. ಅಂತಹ ಮನೆಯಲ್ಲಿ ಯಾವಾಗಲೂ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ಮಾತ್ರವಲ್ಲ, ಅಲ್ಲಿ ಹಣಕಾಸಿಗೆ ಎಂದಿಗೂ ತೊಂದರೆ ಎದುರಾಗುವುದಿಲ್ಲ ಎಂಬ ನಂಬಿಕೆ ಇದೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ